ಜೀವನದ ಜಂಜಾಟವನ್ನು ನಿರ್ವಹಿಸುವುದು ಪ್ರತಿ ಮನುಷ್ಯನಿಗೂ ಸವಾಲಿನ ಸಂಗತಿ. ಅಂತಹ ಸವಾಲನ್ನು ನಿರ್ವಹಿಸಲು ಜ್ಞಾನಿಗಳು ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸುವ ಸಲಹೆ ನೀಡಿದ್ದಾರೆ. ಕೆಲವು ಆಧ್ಯಾಮಿಕ ಅಂಶಗಳನ್ನು ಪಾಲಿಸುವುದು, ಸವಾಲುಗಳನ್ನು ಎದುರಿಸಲು ಮನಸ್ಸಿಗೆ ಸಹಕಾರಿಯಾಗಲಿದ್ದು, ಬಾಲ್ಯದಿಂದಲೇ ಅಂತಹ ಅಂಶಗಳನ್ನು ಪಾಲಿಸುವುದನ್ನು ಕಲಿತರೆ ಉತ್ತಮ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಬಾಲ್ಯದಿಂದಲೇ ಮಕ್ಕಳಿಗೆ ಕೆಲವು ಸರಳ ಶ್ಲೋಕಗಳನ್ನು ಕಲಿಸುವುದು ಅವರಲ್ಲಿ ಒಳ್ಳೆಯ ವ್ಯಕ್ತಿತ್ವವನ್ನು ರೂಢಿಸುತ್ತದೆ.