ಪ್ರದೋಷ ವ್ರತದ ಮಹತ್ವ ಹಾಗೂ ವ್ರತಾಚರಣೆಯಿಂದಾಗುವ ಒಳಿತುಗಳು

ಪ್ರದೋಷ ವ್ರತಾಚರಣೆ ಶಿವ ಹಾಗೂ ಪಾರ್ವತಿ ದೇವತೆಗಳ ಉಪಾಸನೆಗೆ ಸಂಬಂಧಿಸಿದ್ದಾಗಿದ್ದು, ದಕ್ಷಿಣ ಭಾರತದಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಪ್ರದೋಷ ದಿನದಂದು ಉಪವಾಸವಿದ್ದು...
ಪ್ರದೋಷ ಪೂಜೆ (ಸಂಗ್ರಹ ಚಿತ್ರ)
ಪ್ರದೋಷ ಪೂಜೆ (ಸಂಗ್ರಹ ಚಿತ್ರ)
ಭಾರತೀಯ ಕಾಲನಿರ್ಣಯ ಇತರ ದೇಶಗಳಿಗೆ ಹೋಲಿಸಿದರೆ ಅತ್ಯಂತ ಭಿನ್ನ. ಪ್ರತಿಯೊಂದು ಹಬ್ಬ-ಆಚರಣೆಗಳಿಗೂ ಒಂದೊಂದು ಮಹತ್ವದ ಹಿನ್ನೆಲೆ ಇರುತ್ತದೆ. ಹಾಗೆಯೇ ಪ್ರತಿಯೊಂದು ಆಚರಣೆಗಳೂ ಒಂದೊಂದು ದೇವರಿಗೆ ಸಂಬಂಧಪಟ್ಟಿದ್ದಾಗಿದ್ದು, ಆ ದೇವರುಗಳನ್ನು ಉಪಾಸನೆ ಮಾಡುವುದರಿಂದ ಜೀವನದಲ್ಲಿ ಮನಃಶಾಂತಿ ಪಡೆಯಬಹುದೆಂಬ ನಂಬಿಕೆ ಇದೆ. 
ಅಂಥಹದ್ದೇ ಒಂದು ಆಚರಣೆಗಳಲ್ಲಿ ಪ್ರದೋಷ  ವ್ರತವೂ ಒಂದಾಗಿದ್ದು, ಅತ್ಯಂತ ವಿಶೇಷ ಮಹತ್ವ ಪಡೆದಿದೆ. ಪ್ರತಿ ತಿಂಗಳಿನಲ್ಲಿ ಬರುವ ಶುಕ್ಲ ಮತ್ತು ಕೃಷ್ಣ ತ್ರಯೋದಶಿಯ ಸೂರ್ಯಾಸ್ತದ ನಂತರದ ಮೂರು ಘಳಿಗೆಗಳ ಕಾಲಕ್ಕೆ ‘ಪ್ರದೋಷ’ ಎಂದು ಹೇಳುತ್ತಾರೆ. 
ಪ್ರದೋಷ  ವ್ರತಾಚರಣೆ ಶಿವ ಹಾಗೂ ಪಾರ್ವತಿ ದೇವತೆಗಳ ಉಪಾಸನೆಗೆ ಸಂಬಂಧಿಸಿದ್ದಾಗಿದ್ದು, ದಕ್ಷಿಣ ಭಾರತದಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಪ್ರದೋಷ   ದಿನದಂದು ಉಪವಾಸವಿದ್ದು, ಶಿವನ ದೇವಾಲಯದಲ್ಲಿ ರುದ್ರಾಭಿಷೇಕ, ಮಹಾಮೃತ್ಯುಂಜಯ ಜಪವನ್ನು 108 ಬಾರು ಜಪಿಸಿದರೆ, ಇಷ್ಟಾರ್ಥಗಳು ನೆರವೇರಿ, ಮನಃಶಾಂತಿ ಪಡೆಯಬಹುದೆಂಬ ನಂಬಿಕೆ ಇದೆ. 
ಪ್ರದೋಷದ ಮರುದಿನ ಮಹಾ ವಿಷ್ಣುವಿನ ಪೂಜೆ ಮಾಡುವುದು ಉತ್ತಮ ಎಂದು ಹೇಳಲಾಗಿದ್ದು, ಈ ವ್ರತವು ಮೂರರಿಂದ ಹನ್ನೆರಡು ವರ್ಷಗಳ ಅವಧಿಯದ್ದಾಗಿರುತ್ತದೆ. ಕೃಷ್ಣ ಪಕ್ಷದಲ್ಲಿ ಶನಿವಾರದಂದು ಪ್ರದೋಷ ಬಂದರೆ ಅದನ್ನು ವಿಶೇಷ ಎನ್ನಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com