ಭೀಮನ ಅಮಾವಾಸ್ಯೆ: ಪತಿ ಸಂಜೀವಿನಿ ವ್ರತದೊಂದಿಗೆ ಸಹೋದರನಿಂದ ಭಂಢಾರ ಒಡೆಸಿ ಉಡುಗೊರೆ ನೀಡುವ ಸಂಭ್ರಮದ ಆಚರಣೆ

ಭೀಮನ ಅಮಾವಾಸ್ಯೆ ಶ್ರಾವಣ ಮಾಸ ಪ್ರಾರಂಭವಾಗುವ ಸಂದರ್ಭದಲ್ಲಿ ಬರುವ ಮೊದಲ ಹಬ್ಬ, ಮಹಿಳೆಯರಿಗೆ ವಿಶೇಷವಾಗಿದ್ದು, ಈ ಅಮಾವಾಸ್ಯೆಯಂದು ಮಹಿಳೇಯರು ತಮ್ಮ ಪತಿಯ ಆಯುಷ್ಯ
ಭೀಮನ ಅಮಾವಾಸ್ಯೆ
ಭೀಮನ ಅಮಾವಾಸ್ಯೆ
ಭೀಮನ ಅಮಾವಾಸ್ಯೆ ಶ್ರಾವಣ ಮಾಸ ಪ್ರಾರಂಭವಾಗುವ ಸಂದರ್ಭದಲ್ಲಿ ಬರುವ ಮೊದಲ ಹಬ್ಬ, ಮಹಿಳೆಯರಿಗೆ ವಿಶೇಷವಾಗಿದ್ದು, ಈ ಅಮಾವಾಸ್ಯೆಯಂದು ಮಹಿಳೇಯರು ತಮ್ಮ ಪತಿಯ ಆಯುಷ್ಯ ಆರೋಗ್ಯಕ್ಕಾಗಿ ಜ್ಯೋತಿರ್ಭಿಮೇಶ್ವರ ವ್ರತವನ್ನು ಆಚರಿಸುತ್ತಾರೆ. 
ಹೆಣ್ಣುಮಕ್ಕಳು ತಮ್ಮ ಪತಿಯ ಏಳಿಗೆ, ದೀರ್ಘಾಯಸ್ಸನ್ನು ಕೋರುವುದು ಭೀಮನ ಅಮಾವಾಸ್ಯೆಯ ವಿಶೇಷ. ಭೀಮನ ಅಮಾವಾಸ್ಯೆ ನಂತರ ಬರುವ ನಾಗರ ಪಂಚಮಿಯನ್ನು ಸಹೋದರ-ಸಹೋದರಿಯರ ಹಬ್ಬ ಎಂದೇ ಆಚರಿಸಲಾಗುತ್ತದೆಯಾದರೂ ಇದಕ್ಕೂ ಮುನ್ನ ಬರುವ ಭೀಮನ ಅಮಾವಾಸ್ಯೆಯಂದು ಪತಿ ಪೂಜೆಯೊಂದಿಗೆ ಹೆಣ್ಣುಮಕ್ಕಳು ಸಹೋದರನನ್ನು ಕರೆಸಿ ಭಂಢಾರ ಒಡೆದು, ಉಡುಗೊರೆ ನೀಡಿ ತಮ್ಮ ನಡುವಿನ ಆತ್ಮೀಯತೆ ಬೆಸೆಯುವ ಪರಂಪರೆ ಸಹ ನಮ್ಮಲ್ಲಿ ನಡೆದು ಬಂದಿದ್ದು ಇದನ್ನು ಅಣ್ಣ-ತಂಗಿ ಭಂಢಾರದ ಹಬ್ಬ ಎಂತಲೂ ಹೇಳುತ್ತಾರೆ.
ವಿವಾಹವಾದ ಹೆಣ್ಣುಮಕ್ಕಳು ತಮ್ಮ ಪತಿಗಾಗಿ ಈ ವ್ರತವನ್ನು ಆಚರಿಸಿದರೆ, ಅವಿವಾಹಿತ ಹೆಣ್ಣುಮಕ್ಕಳು ತಮ್ಮ ತಂದೆ, ಸಹೋದರರ ಏಳಿಗೆ, ಆರೋಗ್ಯಕ್ಕಾಗಿ ಪ್ರಾರ್ಥಿಸಿ, ತಮಗೆ ಉತ್ತಮ ಪತಿ ದೊರೆಯಲಿ ಎಂದು ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸುತ್ತಾರೆ. 
ಜ್ಯೋತಿರ್ಭೀಮೇಶ್ವರ ವ್ರತದ ಉಲ್ಲೇಖ ಸ್ಕಾಂದ ಪುರಾಣದಲ್ಲಿದ್ದು, ಈ ವ್ರತವನ್ನು ಶಿವ ಪಾರ್ವತಿಯರಿಗೆ ಅರ್ಪಿಸಲಾಗಿದೆ. ಪತಿಯ ಆರೋಗ್ಯಕ್ಕಾಗಿ ಈ ವ್ರತವನ್ನು ಆಚರಿಸುವುದರಿಂದ ಇದಕ್ಕೆ ಪತಿ ಸಂಜೀವಿನಿ ವ್ರತ ಎಂದೂ ಹೆಸರಿದ್ದು, ವಿವಾಹಿತ ಮಹಿಳೆಯರು ಸತತ 9 ವರ್ಷಗಳ ಕಾಲ ಈ ವ್ರತವನ್ನು ಆಚರಿಸಿ 9 ನೇ ವರ್ಷದಲ್ಲಿ ದೀಪವನ್ನು ದಾನವನ್ನಾಗಿ ನೀಡುತ್ತಾರೆ. ಕೆಲವೆಡೆ ಈ ಜ್ಯೋತಿರ್ಭೀಮೇಶ್ವರ ವ್ರತದಂದು ಶಿವ ಪಾರ್ವತಿಯರಿಗೆ ಹಿಟ್ಟಿನಿಂದ ಮಾಡಿದ ತಂಬಿಟ್ಟು ದೀಪ ಹಚ್ಚಿ ಪೂಜೆ ಮಾಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com