ರಾಮೇಶ್ವರಂ: ಪುರುಷೋತ್ತಮ ಶ್ರೀರಾಮ ಶಿವನನ್ನು ಪೂಜಿಸಿದ ಶ್ರೀಕ್ಷೇತ್ರ

ತಮಿಳುನಾಡು ಶ್ರೀಕ್ಷೇತ್ರಗಳು ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯಗಳಲ್ಲಿ ಒಂದು. 12 ಜ್ಯೋತಿರ್ಲಿಂಗಗಳ ಪೈಕಿ ಒಂದು ಜ್ಯೋತಿರ್ಲಿಂಗವಿರುವ ಪುಣ್ಯ ಕ್ಷೇತ್ರ.
ರಾಮೇಶ್ವರಂ
ರಾಮೇಶ್ವರಂ
ತಮಿಳುನಾಡು ಶ್ರೀಕ್ಷೇತ್ರಗಳು ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯಗಳಲ್ಲಿ ಒಂದು. 12 ಜ್ಯೋತಿರ್ಲಿಂಗಗಳ ಪೈಕಿ ಒಂದು ಜ್ಯೋತಿರ್ಲಿಂಗವಿರುವ ಪುಣ್ಯ ಕ್ಷೇತ್ರ. 
12 ಜ್ಯೋತಿರ್ಲಿಂಗಗಳಲ್ಲಿ ರಾಮಲಿಂಗವಿರುವ ಕ್ಷೇತ್ರ ರಾಮೇಶ್ವರಂ ಎಂದು ಪ್ರಸಿದ್ಧವಾಗಿದ್ದು, ರಾಮಾಯಣದೊಂದಿಗೆ ಈ ಕ್ಷೇತ್ರ ನಂಟು ಹೊಂದಿದೆ.
ರಾಮೇಶ್ವರಂನಲ್ಲಿರುವ ರಾಮಲಿಂಗವನ್ನು ಶ್ರೀರಾಮ ಪೂಜಿಸಿದ್ದ ಎಂಬ ಪ್ರತೀತಿ ಇದ್ದು, ಸೀತೆಯನ್ನು ವಾಪಸ್ ಕರೆತರಲು ರಾವಣನ ವಿರುದ್ಧ ಯುದ್ಧ ನಡೆಸುವುದಕ್ಕೂ ಮುನ್ನ ಶ್ರೀರಾಮ ರಾಮೇಶ್ವರಂ ನಲ್ಲಿ ಲಿಂಗವನ್ನು ಸ್ಥಾಪಿಸಿ ಪೂಜೆ ಸಲ್ಲಿಸಿದ್ದ ಎಂಬ ನಂಬಿಕೆ ಇದೆ.
ರಾಮೇಶ್ವರಂ ನಲ್ಲಿ ಪ್ರತಿಷ್ಠಾಪನೆಯಾಗಿರುವ ಲಿಂಗದ ಹಿಂದೆಯೂ ಸ್ವಾರಸ್ಯಕರ ಕತೆಯಿದೆ. ಲಂಕೆಗೆ ತೆರಳುವುದಕ್ಕೂ ಮುನ್ನ ಶ್ರೀರಾಮ ವಾರಾಣಸಿಯಿಂದ ಶಿವಲಿಂಗವೊಂದನ್ನು ತರುವಂತೆ ಹನುಮಂತನಿಗೆ ಸೂಚಿಸುತ್ತಾನೆ. ಹನುಮಂತನನ್ನು ಕಳಿಸಿದ ನಂತರ ಪೂಜೆಗೆ ತಡವಾಗುತ್ತದೆಂಬುದನ್ನು ಅರಿತ ರಾಮ ಸಮುದ್ರ ಪ್ರದೇಶದ್ಲಲಿದ್ದ ಮರಳಿನಲ್ಲೇ ಲಿಂಗದ ಆಕೃತಿಯನ್ನು ನಿರ್ಮಿಸಿ ಅದಕ್ಕೇ ಪೂಜೆ ಸಲ್ಲಿಸುತ್ತಾನೆ. ಹನುಮಂತ ಕಾಶಿಯಿಂದ
ವಾಪಸ್ಸಾಗುತ್ತಿದ್ದಂತೆಯೇ ರಾಮ ಮರಳಿನಲ್ಲೇ ನಿರ್ಮಿಸಿ ಪೂಜೆ ಸಲ್ಲಿಸಿದ್ದ ಲಿಂಗವನ್ನು ನೋಡಿ ಬೇಸರ ಮಾಡಿಕೊಳ್ಳುತ್ತಾನೆ. ಆದರೆ ಆ ವೇಳೆಗಾಗಲೇ ಮರಳಿನಲ್ಲಿ ನಿರ್ಮಿಸಲಾಗಿದ್ದ ಲಿಂಗ ಶಿಲೆಯ ರೂಪ ಪಡೆದುಕೊಂಡಿರುತ್ತದೆ. ಆದರೆ ಹನುಮಂತನ ಸಮಾಧಾನ ಮಾಡಲು ಶ್ರೀರಾಮ ಹನುಮಂತ ಕಾಶಿಯಿಂದ ತಂದಿದ್ದ ಲಿಂಗಕ್ಕೂ ಪೂಜೆ ಸಲ್ಲಿಸುತ್ತಾನೆ. ಅಂದು ಹನುಮಂತ ತಂದಿದ್ದ ವಿಶ್ವಲಿಂಗವನ್ನು ಇಂದಿಗೂ ರಾಮೇಶ್ವರಂ ನಲ್ಲಿ ಪೂಜಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com