• Tag results for ತಮಿಳುನಾಡು

ಕೊರೋನಾ ಚೆಲ್ಲಾಟ: ಎರಡು ಬಾರಿ ಮದುವೆ ಮುಂದೂಡಿ ಹೈರಾಣಾದ ವ್ಯಕ್ತಿ

ವೈವಾಹಿಕ ಜೀವನಕ್ಕೆ ಕಾಲಿಟ್ಟು ಹೊಸ ಜೀವನ ಆರಂಭಿಸಲು ತುದಿಗಾಲಲ್ಲಿ ನಿಂತಿದ್ದ ಜೋಡಿಗಳ ಕನಸುಗಳಿಗೆ ತಣ್ಣೀರು ಎರಚಿದೆ, ಕೊರೋನಾ ಪರಿಣಾಮ ಚೆನ್ನೈ ಮೂಲದ ವ್ಯಕ್ತಿಯೊಬ್ಬರು ಎರಡು ಬಾರಿ ಮದುವೆ ಮುಂದೂಡಿ ಹೈರಾಣಾಗಿ ಹೋಗಿದ್ದಾರೆ. 

published on : 3rd June 2020

ಕರ್ತವ್ಯದ ವೇಳೆ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದು ಗುಣುಖರಾಗಿದ್ದ ಡಾಕ್ಟರ್ ಮತ್ತೆ ಕರ್ತವ್ಯಕ್ಕೆ ಹಾಜರ್!

ತಮಿಳುನಾಡಿನಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ವೈರಸ್ ಸೋಂಕಿಗೆ ತುತ್ತಾಗಿದ್ದ ವೈದ್ಯರೊಬ್ಬರು ಚಿಕಿತ್ಸೆ ಪಡೆದು ಗುಣಮುಖರಾಗಿ ಮತ್ತೆ ಸೋಂಕಿತರಿಗೆ ಚಿಕಿತ್ಸೆ ನೀಡಲು ಕರ್ತವ್ಯಕ್ಕೆ ಹಾಜರಾಗುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

published on : 2nd June 2020

ತಮಿಳುನಾಡಿನಲ್ಲಿ ಕೊರೋನಾಗೆ ಮತ್ತೆ 11 ಬಲಿ, 1,162 ಹೊಸ ಪ್ರಕರಣ, ಚೆನ್ನೈನಲ್ಲಿ ಒಂದೇ ದಿನ 964 ಪಾಸಿಟಿವ್

ನೆರೆಯ ತಮಿಳುನಾಡಿನಲ್ಲಿ ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಸೋಮವಾರ ಒಂದೇ ದಿನ ಬರೋಬ್ಬರಿ 1162 ಮಂದಿ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 23,495ಕ್ಕೆ ಏರಿಕೆಯಾಗಿದೆ.

published on : 1st June 2020

ಲಾಕ್ ಡೌನ್ ಎಫೆಕ್ಟ್: ಊರು ಸೇರಿದ ಬಳಿಕ ಕದ್ದ ಬೈಕ್ ವಾಪಸ್ ಪಾರ್ಸಲ್ ಮಾಡಿದ ಕಳ್ಳ, ಮಾಲೀಕ ಫುಲ್ ಖುಷ್!

ಕೊರೋನಾ ಲಾಕ್ ಡೌನ್ ನಿಂದಾಗಿ ಯಾವುದೇ ವಾಹನ ಇಲ್ಲದೆ ಸುಮಾರು 200 ಕಿ.ಮೀ. ದೂರದ ತನ್ನ ಊರು ತಲುಪಲು ಪರದಾಡುತ್ತಿದ್ದ ವ್ಯಕ್ತಿಯೊಬ್ಬ ಬೈಕ್ ವೊಂದನ್ನು ಕದ್ದು, ತನ್ನ ಪತ್ನಿ ಜತೆ ಊರು ಸೇರಿದ್ದಾನೆ. ಬಳಿಕ ಕಳ್ಳತನ ಮಾಡಿದ್ದ ಬೈಕ್ ಅನ್ನು ಮಾಲೀಕನಿಗೆ ವಾಪಸ್ ಪಾರ್ಸಲ್ ಮಾಡುವ ಮೂಲಕ ಪ್ರಾಮಾಣಿಕತೆ ಮೇರೆದಿದ್ದಾನೆ.

published on : 1st June 2020

ಚೆನ್ನೈ: ಎಟಿಎಂಗೆ ಸೋಂಕು ನಿವಾರಕ ಸಿಂಪಡಿಸುವ ನೆಪದಲ್ಲಿ 8.2 ಲಕ್ಷ ರೂ ಹಣ ದೋಚಿದ ಖತರ್ನಾಕ್ ಕಳ್ಳ!

ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ದೇಶಾದ್ಯಂತ ಸೋಂಕು ನಿವಾರಕ ಸಿಂಪಡಣೆ ಭರದಿಂದ ಸಾಗಿದೆ. ಇದರ ನಡುವೆಯೇ ಚೆನ್ನೈನಲ್ಲೋರ್ವ ಖತರ್ನಾಕ್ ಕಳ್ಳ ಎಟಿಎಂಗೆ ಸೋಂಕು ನಿವಾರಕ ಸಿಂಪಡಣೆ ಮಾಡುವ ನೆಪದಲ್ಲಿ 8.2 ಲಕ್ಷ ಹಣವನ್ನು  ಎಗರಿಸಿದ್ದಾನೆ.

published on : 1st June 2020

ವಿಮಾನ ಸೇವೆ ಪುನಾರಂಭ: 22 ಪ್ರಯಾಣಿಕರಲ್ಲಿ ಕೊರೋನಾ ಸೋಂಕು, ತಮಿಳುನಾಡಿನಲ್ಲೇ 17 ಪ್ರಕರಣಗಳು

ಮಾರಕ ಕೊರೋನಾ ವೈರಸ್ ಲಾಕ್ ಡೌನ್ ಜಾರಿ ಬಳಿಕ ಸ್ಥಗಿತವಾಗಿದ್ದ ವಿಮಾನಯಾನ ಸೇವೆಗೆ ಸೋಮವಾರ ಮರು ಚಾಲನೆ ನೀಡಿದ ಬೆನ್ನಲ್ಲೇ 22 ವಿಮಾನಯಾನ ಪ್ರಯಾಣಿಕರಲ್ಲಿ ಕೊರೋನಾ ಸೋಂಕು ಕಂಡು ಬಂದಿದೆ ಎಂದು ತಿಳಿದುಬಂದಿದೆ.

published on : 29th May 2020

49 ಸಿಬ್ಬಂದಿಗಳಿಗೆ ಹರಡಿದ ಕೊರೋನಾ ಸೋಂಕು; ತಮಿಳುನಾಡಿನಲ್ಲಿ ನೋಕಿಯಾ ಫೋನ್‌ ತಯಾರಿಕಾ ಘಟಕ ಸ್ಥಗಿತ

ನೆರೆಯ ತಮಿಳುನಾಡಿನಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮಿತಿ ಮೀರಿದ್ದು, ನೋಕಿಯಾ ಫೋನ್ ತಯಾರಿಕಾ ಘಟಕದ ಬರೊಬ್ಬರಿ 49 ಮಂದಿ ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿರುವುದರಿಂದ ಇಡೀ ಘಟಕವನ್ನು ಸ್ಥಗಿತಗೊಳಿಸಲಾಗಿದೆ.

published on : 27th May 2020

ವಧುವಿಗೆ ಕೊರೋನಾ ಪಾಸಿಟಿವ್, ಆತಂಕದ ನಡುವೆ ನೆರವೇರಿದ ಮದುವೆ, 28 ಮಂದಿ ಕ್ವಾರಂಟೈನ್!

ಮದುವೆ ಈ ವಿಶೇಷ ದಿನಕ್ಕಾಗಿ ಐದು ತಿಂಗಳು ಕಾಯುತ್ತಿದ್ದರು. 300 ಕಿ.ಮೀ ಪ್ರಮಾಣಿಸಿದ ನಂತರ ತಿಳಿಯಿತು ವಧುವಿಗೆ ಕೊರೋನಾ ಸೋಂಕು ತಗುಲಿರುವುದು. ಅತ್ತ ಕ್ವಾರಂಟೈನ್ ಆಗಬೇಕಾ ಅಥವಾ ಮದುವೆ ಮಾಡಿಸಬೇಕಾ ಎಂಬ ಗೊಂದಲದಲ್ಲಿ ಪೋಷಕರಿದ್ದರು. 

published on : 25th May 2020

ಲಾಕ್ಡೌನ್ ಇದ್ದರೂ ಮಹದೇಶ್ವರ ಬೆಟ್ಟ ಕಾಡು ಕಾಲು ದಾರಿಗಳ ಮೂಲಕ ಬರುತ್ತಿದ್ದ ತಮಿಳರಿಗೆ ಕಡಿವಾಣ!

ಮಲೆ ಮಹದೇಶ್ವರ ಬೆಟ್ಟದ ಕಾಡು ಕಾಲು ದಾರಿಗಳ ಮೂಲಕ ತಮಿಳುನಾಡಿನಿಂದ ಅಕ್ರಮವಾಗಿ ಬರುತ್ತಿದ್ದ ವಲಸಿಗರಿಗೆ ಅರಣ್ಯ ಇಲಾಖೆ ಕಡಿವಾಣ ಹಾಕಿದೆ. ಕಾಡು ಕಾಲು ದಾರಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, ಕಳ್ಳದಾರಿಗಳಿಗೆ ಅಡ್ಡಲಾಗಿ ಮುಳ್ಳುಬೇಲಿ ಹಾಕಲಾಗಿದೆ...

published on : 25th May 2020

ತಮಿಳುನಾಡಿನಲ್ಲಿ ಕೊರೋನಾ ಆರ್ಭಟ; ಒಂದೇ ಆಸ್ಪತ್ರೆಯ 15 ವೈದ್ಯರಿಗೆ ಸೋಂಕು!  

ನೆರೆಯ ತಮಿಳುನಾಡಿನಲ್ಲಿ ಕೊರೋನಾ ಆರ್ಭಟ ಮತ್ತಷ್ಟು ಜೋರಾಗಿದ್ದು, ಚೆನ್ನೈನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೊರೋನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಸುಮಾರು 15 ವೈದ್ಯರಿಗೇ ಸೋಂಕು ಪಸರಿಸಿದೆ ಎಂದು ತಿಳಿದುಬಂದಿದೆ.

published on : 23rd May 2020

ನಾಳೆಯಿಂದ ಚೆನ್ನೈ ಹೊರತುಪಡಿಸಿ ತಮಿಳುನಾಡಿನಾದ್ಯಂತ ಆಟೋರಿಕ್ಷಾ ಸಂಚಾರಕ್ಕೆ ಅನುಮತಿ

ಮಹಾಮಾರಿ ಕೊರೋನಾ ವೈರಸ್ ನಿಂದ ತತ್ತರಿಸಿರುವ ತಮಿಳುನಾಡಿನಲ್ಲೂ ಲಾಕ್ ಡೌನ್ ಸಡಿಸಲಾಗುತ್ತಿದ್ದು, ಮೇ 23ರಿಂದ ಚೆನ್ನೈ ಹೊರತುಪಡಿಸಿ ರಾಜ್ಯಾದ್ಯಂತ ಆಟೋರಿಕ್ಷಾ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ ಪ್ರಯಾಣಿಕರ ಮಿತಿ ಸೇರಿದಂತೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.

published on : 22nd May 2020

ಜಯಲಲಿತಾ ಸ್ಮಾರಕ: ನಿವಾಸವನ್ನು ವಶಕ್ಕೆ ಪಡೆದ ತಮಿಳುನಾಡು ಸರ್ಕಾರ

ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ನಿವಾಸ ವೇದ ನಿಲಯಂನ್ನು ಸ್ಮಾರಕವನ್ನಾಗಿಸುವ ನಿಟ್ಟಿನಲ್ಲಿ ತಮಿಳು ನಾಡು ಸರ್ಕಾರ ಮತ್ತೊಂದು ಮಹತ್ವದ ನಿರ್ಣಯ ಕೈಗೊಂಡಿದೆ

published on : 22nd May 2020

ಕೊವಿಡ್-19 ನಿಯಮದಿಂದ ಗಡಿ ದಾಟದೆ ಚೆಕ್​ಪೋಸ್ಟ್​ನಲ್ಲೇ ಮದುವೆಯಾದ ತಮಿಳ್ಗನ್ನಡಿಗರು!

ಅಂತರರಾಜ್ಯ ಗಡಿದಾಟದೆ ಎರಡೂ ರಾಜ್ಯಗಳ ಗಡಿಯಲ್ಲೇ ಜೋಡಿಯೊಂದು ಮದುವೆಯಾದ ಘಟನೆ ತಮಿಳುನಾಡಿನ ಪುಣಜನೂರು ಚೆಕ್​ಪೋಸ್ಟ್​​ನಲ್ಲಿ ನಡೆದಿದೆ.

published on : 21st May 2020

ಭಾರತದಲ್ಲಿ ಕೊರೋನಾ ಸೋಂಕು: ಮಹಾರಾಷ್ಟ್ರ ನಂತರ 2ನೇ ಸ್ಥಾನದಲ್ಲಿ ತಮಿಳುನಾಡು

ಮಹಾರಾಷ್ಟ್ರ ನಂತರ ಕೊರೋನಾ ಸೋಂಕಿತರ ಪ್ರಮಾಣದಲ್ಲಿ  ತಮಿಳುನಾಡು 2ನೇ ಸ್ಥಾನದಲ್ಲಿದೆ.ಮಂಗಳವಾರ ಮಹಾರಾಷ್ಟ್ರದಲ್ಲಿ 688 ಪ್ರಕರಣಗಳು ದಾಖಲಾಗಿದ್ದು ಒಟ್ಟಾರೆ 12,448 ಕೇಸ್ ಪತ್ತೆಯಾಗಿದೆ. ಗುರುವಾರದವರೆಗೆ ಗುಜರಾತಿನಲ್ಲಿ 11.745 ಪ್ರಕರಣಗಳು ದಾಖಲಾಗಿ 2ನೇ ಸ್ಥಾನದಲ್ಲಿತ್ತು.

published on : 20th May 2020

ಲಾಕ್ ಡೌನ್ ಕಂಟಕ: ಮಗಳ ಕತ್ತು ಹಿಸುಕಿ, ಮತ್ತಿಬ್ಬರನ್ನು ನೀರಲ್ಲಿ ಮುಳುಗಿಸಿ ಕೊಂದು ಆತ್ಮಹತ್ಯೆಗೆ ಶರಣಾದ ತಂದೆ!

ಕೊರೋನಾ ಹರಡದಂತೆ ತಪ್ಪಿಸಲು ಲಾಕ್ ಡೌನ್ ಮಾಡಲಾಗಿತ್ತು. ಆದರೆ ಇಲ್ಲಿ ಕುಟುಂಬವೊಂದು ಸಂಕಷ್ಟಕ್ಕೆ ಸಿಲುಕಿತ್ತು. ಕೆಲಸ ಕಳೆದುಕೊಂಡಿದ್ದ ಪತಿಯನ್ನು ಪತ್ನಿ ಹೀಯಾಳಿಸಿದ್ದಕ್ಕೆ ಕೋಪಗೊಂಡು ಮಗಳನ್ನು ಕತ್ತು ಹಿಸುಕಿ, ಇನ್ನಿಬ್ಬರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಂದು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.

published on : 19th May 2020
1 2 3 4 5 6 >