'ನಟ ವಿಜಯ್ ಮೊದಲು ತ್ರಿಶಾ ಮನೆಯಿಂದ ಹೊರಬರಬೇಕು': BJP ರಾಜ್ಯಾಧ್ಯಕ್ಷನ ವಿರುದ್ಧ ನಟಿ ಕೆಂಡಾಮಂಡಲ; ವಾರ್ನಿಂಗ್!

ನಟ ವಿಜಯ್ ಅವರೊಂದಿಗೆ ಸಂಬಂಧ ಕಲ್ಪಿಸುವ ತಮ್ಮ ಕುರಿತಾದ ಹೇಳಿಕೆಗಳಿಗೆ ಸಂಬಂಧಿಸಿದಂತೆ ನಟಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಕೀಲರ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
"Disrespect should be called out": Trisha Krishnan condemns Tamil Nadu BJP Chief's remark
ತ್ರಿಶಾ ಕೃಷ್ಣನ್
Updated on

ಚೆನ್ನೈ: ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್ ಅವರ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದು, ನಟಿ ತ್ರಿಶಾ ಕೃಷ್ಣನ್ ಅವರು ತಮಿಳುನಾಡಿನ ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನು ಹೊಂದಿರುವ ವ್ಯಕ್ತಿಯೊಬ್ಬರು ಮಾಡಿದ 'ಅಸಹ್ಯ ಮತ್ತು ಅನುಚಿತ' ಹೇಳಿಕೆಗಳನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

ನಟ ವಿಜಯ್ ಅವರೊಂದಿಗೆ ಸಂಬಂಧ ಕಲ್ಪಿಸುವ ತಮ್ಮ ಕುರಿತಾದ ಹೇಳಿಕೆಗಳಿಗೆ ಸಂಬಂಧಿಸಿದಂತೆ ನಟಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಕೀಲರ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಫೆಬ್ರುವರಿ 15ರಂದು ಹೊರಡಿಸಿದ ಹೇಳಿಕೆಯಲ್ಲಿ ಯಾರ ಹೆಸರನ್ನು ಉಲ್ಲೇಖಿಸದೆ, ನಟಿಯು ಕಟ್ಟುನಿಟ್ಟಾಗಿ ತಟಸ್ಥ ರಾಜಕೀಯ ನಿಲುವನ್ನು ಹೊಂದಿದ್ದು, ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ರಾಜ್ಯ ರಾಜಕೀಯದಲ್ಲಿ "ಉನ್ನತ ಸ್ಥಾನಮಾನ ಹೊಂದಿರುವ ವ್ಯಕ್ತಿಯಿಂದ' ತ್ರಿಶಾ ಇಂತಹ ಹೇಳಿಕೆಗಳನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದೆ.

ನಾಗೇಂದ್ರನ್ ಅವರು ತಮಿಳುನಾಡು ವಿಧಾನಸಭೆಯಲ್ಲಿ ತಿರುನಲ್ವೇಲಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.

ತ್ರಿಶಾ ಕೃಷ್ಣನ್ ಅವರು ಈ ಹಿಂದೆಯೂ ರಾಜಕೀಯದ ಬಗ್ಗೆ ತಟಸ್ಥ ನಿಲುವನ್ನು ನಿರಂತರವಾಗಿ ಉಳಿಸಿಕೊಂಡಿದ್ದಾರೆ ಮತ್ತು ಈಗಲೂ ಅದನ್ನು ಮುಂದುವರಿಸಿದ್ದಾರೆ. ಜನರು ಚಿತ್ರಗಳಲ್ಲಿನ ತನ್ನ ಕೆಲಸದ ಮೇಲೆ ಮಾತ್ರ ಗಮನಹರಿಸಬೇಕು ಮತ್ತು ಯಾವುದೇ ರಾಜಕೀಯ ಸಂಪರ್ಕಗಳು ಅಥವಾ ವದಂತಿಗಳೊಂದಿಗೆ ತನ್ನನ್ನು ಸಂಯೋಜಿಸಬಾರದು ಎಂದು ಬಯಸುತ್ತಾರೆ' ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಸಾರ್ವಜನಿಕ ಸ್ಥಾನದಲ್ಲಿರುವವರು ಜವಾಬ್ದಾರಿಯುತರಾಗಿ ಮತ್ತು ಸಮಚಿತ್ತತೆಗಾಗಿ ಇರಬೇಕು. ಯಾರೊಬ್ಬರ ವೈಯಕ್ತಿಕ ಜೀವನವು ಸಾರ್ವಜನಿಕ ಭಾಷಣದ ವಿಷಯವಾಗಬಾರದು. ತನಗೆ ಸಂಬಂಧಿಸದ ವಿಷಯಗಳಲ್ಲಿ ನಟಿಯ ಹೆಸರನ್ನು ಎಳೆದು ತರಬೇಡಿ ಎಂದು ಹೇಳಿಕೆಯಲ್ಲಿ ಹೇಳಲಾಗಿದೆ.

ಯಾರಾದರೂ ಅಥವಾ ಯಾವುದನ್ನಾದರೂ ಅನ್ಯಾಯವಾಗಿ, ಅಸಭ್ಯವಾಗಿ ಅಥವಾ ಅವಮಾನಕರವಾಗಿ ನಡೆಸಿಕೊಂಡಾಗ, ಅದನ್ನು ಎತ್ತಿ ತೋರಿಸಬೇಕು ಮತ್ತು ಖಂಡಿಸಬೇಕು ಎಂಬ ಶೀರ್ಶಿಕೆಯಡಿಯಲ್ಲಿ ನಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.

ತಮಿಳು ನಟ ವಿಜಯ್ ಅವರ ರಾಜಕೀಯ ಪ್ರವೇಶ ಮತ್ತು ಅವರ ಪಕ್ಷ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಕುರಿತು ಪ್ರತಿಕ್ರಿಯಿಸುವಾಗ ಬಿಜೆಪಿಯ ನಾಗೇಂದ್ರನ್ ಅವರು, ವಿಜಯ್ ತುಂಬಾ ಸರಳ ವ್ಯಕ್ತಿ, ಅವರಿಗೆ ರಾಜಕೀಯ ಅರ್ಥವಾಗುವುದಿಲ್ಲ. ಮೊದಲು ಅವರು ತಮ್ಮ ಗೂಡಿನಿಂದ ಹೊರಬರಬೇಕು. ತಮ್ಮ ಕುಟುಂಬ ಜೊತೆ ಉತ್ತಮ ಸಂಬಂಧ ಹೊಂದಬೇಕು, ಜೊತೆಗೆ ತಮಿಳುನಾಡಿನ ತಳಮಟ್ಟದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಅವರು ತ್ರಿಶಾ ಅವರ ಮನೆಯಿಂದಲೂ ಹೊರಬರಬೇಕು ಎಂದು ಹೇಳಿದ್ದರು.

"Disrespect should be called out": Trisha Krishnan condemns Tamil Nadu BJP Chief's remark
'ವಿಜಯ್ ರಾಜಕೀಯ ಅನುಭವ ಪಡೆಯಲು ಮೊದಲು ನಟಿ ತ್ರಿಶಾ ಮನೆಯಿಂದ ಹೊರಬರಬೇಕು': ಬಿಜೆಪಿ ರಾಜ್ಯಾಧ್ಯಕ್ಷ ಹೇಳಿಕೆ; Video

ಇವರ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು ಮತ್ತು ನಟನ ವೈಯಕ್ತಿಕ ಜೀವನದ ಉಲ್ಲೇಖ ಮಾಡಿದ ನಂತರ ವಿವಾದ ಭುಗಿಲೆದ್ದಿತು.

ನಾಗೇಂದ್ರನ್ ಅವರ ಹೇಳಿಕೆಗಾಗಿ ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದೆ ಕನಿಮೋಳಿ ಸೇರಿದಂತೆ ವಿವಿಧ ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಬಳಿಕ ಮಧುರೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನಾಗೇಂದ್ರನ್, ನಾನು ಯಾರನ್ನೂ ನೋಯಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದರು.

ವಿಜಯ್ ಮತ್ತು ತ್ರಿಶಾ 'ಘಿಲ್ಲಿ' ಸೇರಿದಂತೆ ಹಲವಾರು ತಮಿಳು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com