ಭಾರತದ ಪುರಾತನ ಹಬ್ಬ ಓಣಂ ಬಗ್ಗೆ ಇಲ್ಲಿದೆ ಮಾಹಿತಿ

ಕೇರಳ ದೇವರನಾಡು ಎಂದೇ ಖ್ಯಾತಿ ಪಡೆದಿರುವ ರಾಜ್ಯವಾಗಿದ್ದು, ಇಲ್ಲಿನ ಹಬ್ಬಗಳು ವಿಶ್ವವಿಖ್ಯಾತ...
ಓಣಂ
ಓಣಂ
ಕೇರಳ ದೇವರನಾಡು ಎಂದೇ ಖ್ಯಾತಿ ಪಡೆದಿರುವ ರಾಜ್ಯವಾಗಿದ್ದು, ಇಲ್ಲಿನ ಹಬ್ಬಗಳು ವಿಶ್ವವಿಖ್ಯಾತ. ಈ ಪೈಕಿ ಓಣಂ ಸಹ ಒಂದಾಗಿದೆ. ಇಂದಿನ ಕೇರಳ ಇರುವ ಭೂಪ್ರದೇಶವನ್ನು ಆಳಿದ್ದ ರಾಜ ಮಹಾಬಲಿ ವರ್ಷಕ್ಕೊಮ್ಮೆ ತನ್ನ ಸಾಮ್ರಾಜ್ಯಕ್ಕೆ ಭೇಟಿ ನೀಡುವ ದಿನವೇ ಓಣಂ ಆಚರಣೆಯಾಗಿದೆ. 
ಕೇರಳದ ಪಂಚಾಂಗದ ಪ್ರಕಾರ ಚಿಂಗಂ ಮಾಸದಲ್ಲಿ ಓಣಂ ಹಬ್ಬದ ಆಚರಣೆ ನಡೆಯಲಿದ್ದು, 10 ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಪೈಕಿ ತಿರುಓಣಂ ಪ್ರಮುಖವಾದ ದಿನವಾಗಿರಲಿದೆ. ಈ ಆಚರಣೆಗಳು ನಡೆಯುವ ದಿನಗಳಲ್ಲಿ ಪಾತಾಳ ಲೋಕದಿಂದ ಬಲಿ ಚಕ್ರವರ್ತಿ ಮತ್ತೆ ಭೂಮಿಗೆ ಭೇಟಿ ನೀಡಿ ತಾನು ಹಿಂದೊಮ್ಮೆ ಆಳಿದ್ದ ಪ್ರದೇಶದ ಸಂಪತ್ತು, ಸಂವೃದ್ಧಿಯನ್ನು ಗಮನಿಸುತ್ತಾನೆ ಎಂಬ ನಂಬಿಕೆ ಇದೆ. 
ಓಣಂ ಆಚರಣೆಯ ವೇಳೆ ಶ್ವೇತ ಬಣ್ಣದ ಸೀರೆ, ವಸ್ತ್ರಗಳನ್ನು, ಚಿನ್ನಾಭರಣಗಳನ್ನು ಧರಿಸಲಿರುವ ಮಹಿಳೆಯರು ಹೂವುಗಳಿಂದ ಅಲಂಕೃತಗೊಂಡ ರಂಗೋಲಿ ಇಡುತ್ತಾರೆ. ಪುರುಷರೂ ಸಹ ಶ್ವೇತ ವರ್ಣದ ವಸ್ತ್ರಗಳನ್ನು ಧರಿಸಿ ಓಣಂ ನಲ್ಲಿ ಭಾಗಿಯಾಗುತ್ತಾರೆ. ನೃತ್ಯ, ಕೇರಳದ ಖ್ಯಾದ್ಯಗಳು ಓಣಂ ನ ವಿಶೇಷತೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com