• Tag results for ಕೇರಳ

ಕರ್ನಾಟಕ - ಕೇರಳ ಗಡಿ ಬಂದ್ ವಿವಾದ ಇತ್ಯರ್ಥವಾಗಿದೆ: ಸುಪ್ರೀಂಗೆ ಕೇಂದ್ರ ಸ್ಪಷ್ಟನೆ

ಕರ್ನಾಟಕ ಮತ್ತು ಕೇರಳ ನಡುವಿನ ಗಡಿ ಬಂದ್ ವಿವಾದ ಇತ್ಯರ್ಥವಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ.

published on : 7th April 2020

ಕರ್ನಾಟಕದ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಲ್ಲದ ಕೇರಳ ಜನರ ಚಿಕಿತ್ಸೆಗೆ ಸಂಚಾರಕ್ಕೆ ಅನುಮತಿ

‘ಕೊರೊನಾ ಸೋಂಕು ಇಲ್ಲದೇ ಇರುವ ರೋಗಿಗಳನ್ನಷ್ಟೇ ಕರ್ನಾಟಕದ ಒಳಗೆ ಬಿಡಲು ಕರ್ನಾಟಕ ಒಪ್ಪಿದೆ. ವೈದ್ಯಕೀಯ ಪ್ರಮಾಣ ಪತ್ರವನ್ನು ಹಾಜರುಪಡಿಸಿ ಆಂಬುಲೆನ್ಸ್‌ ಮೂಲಕ ರೋಗಿಗಳನ್ನು ಗಡಿ ಮೂಲಕ ಕೇರಳದಿಂದ ಕರ್ನಾಟಕದ ಆಸ್ಪತ್ರೆಗೆ ದಾಖಲಿಸಲು ಕರ್ನಾಟಕ ಒಪ್ಪಿಗೆ ನೀಡಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ. 

published on : 7th April 2020

100 ಕಿ.ಮೀ ನಡೆದುಕೊಂಡು ಬಂದು ಮಂಗಳೂರು ಗಡಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಉ.ಕ ಕಾರ್ಮಿಕರು

ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿರುವ ತಮ್ಮ ಮನೆಗಳಿಗೆ ತೆರಳಲು ಕೇರಳದಿಂದ ಹೊರಟ 16 ಮಂದಿ ಕೂಲಿ ಕಾರ್ಮಿಕರು ಮಂಜೇಶ್ವರದ ಹತ್ತಿರ ತಳಪಾಡಿ ಗಡಿಯಲ್ಲಿ ಕಳೆದೆರಡು ದಿನಗಳಿಂದ ಸಿಕ್ಕಿಹಾಕಿಕೊಂಡಿದ್ದಾರೆ.

published on : 5th April 2020

ಕರ್ನಾಟಕ-ಕೇರಳ ಗಡಿಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ, ಪೇದೆಗೆ ಗಾಯ

ಕೊರೋನಾ ವೈರಸ್ ಸೋಂಕು ಹಿನ್ನಲೆಯಲ್ಲಿ ಕರ್ನಾಟಕ ಕೇರಳ ಸಂಪರ್ಕಿಸುವ ಗಡಿ ರಸ್ತೆಯನ್ನು ಮುಚ್ಚಿರುವಂತೆಯೇ ಅತ್ತ ಕೇರಳ ಮೂಲದ ಅಪರಿಚತ ಯುವಕರು ಗಡಿಯಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡಿದ್ದಾರೆ.

published on : 3rd April 2020

ಕೇರಳ-ಕರ್ನಾಟಕ ಗಡಿ ವಿವಾದ: ಉಭಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜತೆ ಚರ್ಚಿಸಿ ನಿರ್ಧರಿಸಿ ಎಂದ ಸುಪ್ರೀಂ, ವಿಚಾರಣೆ ಏ.7ಕ್ಕೆ ಮುಂದೂಡಿಕೆ

ಕೋವಿಡ್ ಮಹಾಮಾರಿ ಹರಡುವಿಕೆ ತಡೆಗಾಗಿ ದೇಶವು ಸಂಪೂರ್ಣ ಲಾಕ್ ಡೌನ್ ಆಗಿರುವ ವೇಳೆ ಕರ್ನಾಟಕ ಹಾಗೂ ಕೇರಳದ ಗಡಿ ಬಂದ್ ಮಾಡಿದೆ. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಉಭಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಈ ಸಂಬಂಧ ತೀರ್ಮಾನ ತೆಗೆದುಕೊಳ್ಲಬೇಕೆಂದು ಹೇಳಿದೆ. 

published on : 3rd April 2020

ಕೇರಳ-ಕರ್ನಾಟಕ ಗಡಿ ಬಂದ್ ವಿವಾದ: ಕೇರಳ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಕದ ತಟ್ಟಿದ ಕಾಂಗ್ರೆಸ್‌ ಮುಖಂಡ

ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯನ್ನು ತೆರೆಯುವಂತೆ ಕೇರಳ ಹೈಕೋರ್ಟ್ ಎಪ್ರಿಲ್ 1ರಂದು ನೀಡಿರುವ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.

published on : 3rd April 2020

ಕರ್ನಾಟಕ-ಕೇರಳ ಗಡಿ ಬಂದ್: ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರ ವೈಫಲ್ಯ ಎಂದ ಬಿಜೆಪಿ

ಕರ್ನಾಟಕ-ಕೇರಳ ಗಡಿಭಾಗವನ್ನು ಮುಚ್ಚಿರುವ ಬಗ್ಗೆ ಕೇರಳ ಮತ್ತು ಕರ್ನಾಟಕ ಸರ್ಕಾರಗಳ ಮಧ್ಯೆ ವಾದ-ವಿವಾದಗಳ ಮುಂದುವರಿದಿರುವಾಗ ಬಿಜೆಪಿ ಈ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದೆ ಎನ್ನಲಾಗುತ್ತಿದೆ.

published on : 3rd April 2020

ಕರ್ನಾಟಕ-ಕೇರಳ ಗಡಿ ಬಂದ್: ರಾಜ್ಯದ ನಡೆಗೆ ಎಚ್.ಡಿ.ದೇವೇಗೌಡ ಬೇಸರ

 ಕರ್ನಾಟಕ ಕೇರಳ ಗಡಿ ಪ್ರವೇಶ ವಿಚಾರವಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ರ ಬರೆದಿದ್ದಾರೆ‌  

published on : 2nd April 2020

ವೈದ್ಯರಿಂದ ಪ್ರಿಸ್ಕ್ರಿಪ್ಷನ್ ತಂದವರಿಗೆ ಮದ್ಯ: ಕೇರಳ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ

ವೈದ್ಯರಿಂದ ಪ್ರಿಸ್ಕ್ರಿಪ್ಷನ್ ತಂದವರಿಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದ ಕೇರಳ ಸರ್ಕಾರದ ಆದೇಶದಕ್ಕೆ ಕೇರಳ ಹೈಕೋರ್ಟ್ ಗುರುವಾರ ತಡೆಯಾಜ್ಞೆ ವಿಧಿಸಿದ್ದು, ಪಾನ ಪ್ರಿಯರಿಗೆ ತೀವ್ರ ನಿರಾಶೆಯಾಗಿದೆ.

published on : 2nd April 2020

ಸಂಕಷ್ಟದಲ್ಲಿ ರಾಜ್ಯದ ರೈತರು: 20 ಸಾವಿರ ದಂಡ ಹಿನ್ನೆಲೆ ಬಾಳೆ ಕಟಾವು ಮಾಡಲಾಗದ ಸ್ಥಿತಿಯಲ್ಲಿ ರೈತರು!

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ನೂರಾರು ಎಕರೆಯಲ್ಲಿ ಬೆಳೆದಿರುವ ಬಾಳೆ ಬೆಲೆ ಕೊಯ್ಲಿಗೆ ಬಂದಿದ್ದರೂ ಕಟಾವು ಮಾಡಲು ಜನರ ಸಿಗದೆ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. 

published on : 2nd April 2020

ಕೂಡಲೇ ಮಧ್ಯಪ್ರವೇಶ ಮಾಡಿ, ಮಂಗಳೂರು-ಕಾಸರಗೋಡು ಗಡಿ ಹೆದ್ದಾರಿ ದಿಗ್ಬಂಧನ ತೆರವುಗೊಳಿಸಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ಆದೇಶ

ಕೊರೋನಾ ವೈರಸ್ ಪ್ರಸರಣ ಭೀತಿ ಹಿನ್ನಲೆಯಲ್ಲಿ ಮುಚ್ಚಲಾಗಿರುವ ಮಂಗಳೂರು-ಕಾಸರಗೋಡು ಗಡಿ ಹೆದ್ದಾರಿ ರಸ್ತೆಗಳನ್ನು ದಿಗ್ಬಂಧನದಿಂದ ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

published on : 2nd April 2020

ಕಾಸರಗೋಡಿನ ಕೊರೋನಾ ರೋಗಿಗಳಿಗೆ ಮಂಗಳೂರಿನಲ್ಲಿ ಚಿಕಿತ್ಸೆ: ವಿವರ ಕೇಳಿದ ಕೇರಳ ಹೈಕೋರ್ಟ್

ಕಾಸರಗೋಡಿನ ಕೊರೋನಾ ರೋಗಿಗಳಿಗೆ ಭೌಗೋಳಿಕವಾಗಿ ಸನಿಹದಲ್ಲಿರುವ ಕರ್ನಾಟಕದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ಬಗೆಗೆ ರೋಗಿಗಳಿಗೆ ಮಾಡಬಹುದಾದ ವ್ಯವಸ್ಥೆಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸುವಂತೆ ಕೇರಳ ಹೈಕೋರ್ಟ್ ಮಂಗಳವಾರ ಕೇರಳ ಮತ್ತು ಕರ್ನಾಟಕ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.   

published on : 1st April 2020

ಯಾವುದೇ ಕಾರಣಕ್ಕೂ ಕೇರಳ ಗಡಿ ಓಪನ್ ಮಾಡಲ್ಲ: ಸಂಸದ ನಳಿನ್ ಕುಮಾರ್ ಕಟೀಲ್

ಯಾವುದೇ ಕಾರಣಕ್ಕೂ ಕೇರಳ ಗಡಿ ಓಪನ್ ಮಾಡೋಕೆ ಸಾಧ್ಯವಿಲ್ಲ ,ಜನರಿಗೆ ಆತಂಕ ಬೇಡ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

published on : 1st April 2020

ಕರ್ನಾಟಕ ಕೇರಳ ಸರ್ಕಾರವನ್ನು ಅನುಸರಿಸಬೇಕೆ?: ವೈದ್ಯರ ಪ್ರಿಸ್ಕ್ರಿಪ್ಷನ್ ತಂದವರಿಗೆ ಮದ್ಯ ಪೂರೈಸಬೇಕೆ?

ಭಾರತ ಲಾಕ್ ಡೌನ್ ನ ಎರಡನೇ ವಾರಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಮದ್ಯ ಸಿಗದೆ ಅನೇಕ ಮಂದಿ ಆತ್ಮಹತ್ಯೆಯ ದಾರಿ ಹಿಡಿದಿದ್ದು ವರದಿಯಾಗಿದೆ. ಮದ್ಯದಂಗಡಿಗಳನ್ನು ಮರು ಪ್ರಾರಂಭಿಸಬೇಕು ಎಂಬ ಕೂಗು ರಾಜ್ಯದಾದ್ಯಂತ ಕೇಳಿ ಬರುತ್ತಿದೆ. 

published on : 1st April 2020

ಕೇರಳ: ಕೊರೋನಾ ವೈರಾಣು ವಿರುದ್ಧ ಹೋರಾಡಿ ಗೆದ್ದ 93-88 ವಯಸ್ಸಿನ ದಂಪತಿ, ಆಸ್ಪತ್ರೆಯಿಂದ ಡಿಸ್ಚಾರ್ಜ್

ಕೊರೋನಾ ಸೋಂಕಿನ ಭಯ ಎಲ್ಲೆಡೆ ಆವರಿಸಿದೆ, ಅಲ್ಲಲ್ಲಿ ಚೇತರಿಕೆ ಕಾಣುತ್ತಿರುವ ವರದಿಗಳು ಬರುತ್ತಿದ್ದರೂ ಸಾಮಾಜಿಕ ವಲಯದಲ್ಲಿ ವೈರಸ್ ನ್ನು ಎದುರಿಸಿ ಗೆಲ್ಲುವ ಬಗ್ಗೆ ಇನ್ನೂ ಆತ್ಮವಿಶ್ವಾಸ ಮೂಡಬೇಕಿದೆ. ಇದಕ್ಕೆ ಪೂರಕವಾಗುವ ವರದಿಯೊಂದು ಇಲ್ಲಿದೆ. 

published on : 31st March 2020
1 2 3 4 5 6 >