ರಾಮಚಂದ್ರಾಪುರ ಮಠದಲ್ಲಿ ತ್ಯಾಗ ಪರ್ವ: ಸಾವಿರ ಭಕ್ತರಿಂದ ಸರಳ ಜೀವನ ಪ್ರತಿಜ್ಞೆ

ಶ್ರೀರಾಮಚಂದ್ರಾಪುರಮಠದ ಸಾವಿರಕ್ಕೂ ಹೆಚ್ಚು ಶಿಷ್ಯಭಕ್ತರು ಅದ್ಧೂರಿ- ಆಡಂಬರದ ಜೀವನಕ್ಕೆ ವಿದಾಯ ಹೇಳಿ ಭಾನುವಾರ ಸರಳ... 
ರಾಮಚಂದ್ರಾಪುರಮಠ
ರಾಮಚಂದ್ರಾಪುರಮಠ

ಬೆಂಗಳೂರು: ಶ್ರೀರಾಮಚಂದ್ರಾಪುರಮಠದ ಸಾವಿರಕ್ಕೂ ಹೆಚ್ಚು ಶಿಷ್ಯಭಕ್ತರು ಅದ್ಧೂರಿ- ಆಡಂಬರದ ಜೀವನಕ್ಕೆ ವಿದಾಯ ಹೇಳಿ ಭಾನುವಾರ ಸರಳ ಜೀವನದ ಪ್ರತಿಜ್ಞೆ ಕೈಗೊಂಡರು.

ತಕ್ಷಶಿಲಾ ವಿಶ್ವವಿದ್ಯಾನಿಲಯದ ಪುನರವತರಣದ ಮಹಾಸಂಕಲ್ಪವಾಗಿ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅನುಗ್ರಹಿಸುತ್ತಿರುವ ಧಾರಾ ರಾಮಾಯಣದ ಅಂಗವಾಗಿ ಇಲ್ಲಿನ ಗಿರಿನಗರ ರಾಮಾಶ್ರಮದಲ್ಲಿ ನಡೆದ ತ್ಯಾಗ ಪರ್ವದಲ್ಲಿ ನೂರಾರು ಮಂದಿ ದುಶ್ಚಟ- ವ್ಯಸನ, ಜೀವನಕ್ಕೆ ಅನಿವಾರ್ಯವಲ್ಲ ಎನ್ನುವ ವಸ್ತುಗಳನ್ನು ತ್ಯಜಿಸಿದರು, ಹಲವು ಮಂದಿ ಚಿನ್ನ, ವಜ್ರಾಭರಣಗಳನ್ನು ಉದ್ದೇಶಿತ ವಿಶ್ವವಿದ್ಯಾಪೀಠಕ್ಕೆ ದೇಣಿಗೆಯಾಗಿ ಸಮರ್ಪಿಸಿದರು.

ಧಾರಾ ರಾಮಾಯಣ ಪ್ರವಚನವು ಪಾದುಕಾ ಪಟ್ಟಾಭಿಷೇಕ ಘಟ್ಟ ತಲುಪಿದ ಹಿನ್ನೆಲೆಯಲ್ಲಿ, ಶ್ರೀರಾಮ ಹಾಗೂ ಭರತನ ರಾಜ್ಯತ್ಯಾಗವನ್ನು ತ್ಯಾಗಪರ್ವವಾಗಿ ಆಚರಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com