ವಿದ್ಯಾಪೀಠಕ್ಕೆ ದ್ವಾರಕಾ, ಬದರಿ ಶಂಕರಾಚಾರ್ಯರ ಪ್ರತಿನಿಧಿ ಭೇಟಿ, ಪೇಜಾವರ ಶ್ರೀಗಳ ಬೃಂದಾವನಕ್ಕೆ ಗೌರವ ಸಮರ್ಪಣೆ

ಉಡುಪಿ ಪೇಜಾವರ ಅಧೋಕ್ಷಜ ಮಠದ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಕೃಷ್ಣೈಕ್ಯರಾದ ಹಿನ್ನೆಲೆಯಲ್ಲಿ ದ್ವಾರಕಾ ಶಾರದಾ ಪೀಠ, ಬದರಿ ಜ್ಯೋತಿಷ್ ಪೀಠದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮಿಗಳು ವಿದ್ಯಾಪೀಠಕ್ಕೆ ಸಂದೇಶ ಹೊಂದಿರುವ ಪತ್ರ ತಲುಪಿಸಿದ್ದಾರೆ. 
ವಿದ್ಯಾಪೀಠಕ್ಕೆ ದ್ವಾರಕಾ ಶಂಕರಾಚಾರ್ಯರ ಪ್ರತಿನಿಧಿ ಭೇಟಿ, ಪೇಜಾವರ ಶ್ರೀಗಳ ಬೃಂದಾವಕ್ಕೆ ಗೌರವ ಸಮರ್ಪಣೆ
ವಿದ್ಯಾಪೀಠಕ್ಕೆ ದ್ವಾರಕಾ ಶಂಕರಾಚಾರ್ಯರ ಪ್ರತಿನಿಧಿ ಭೇಟಿ, ಪೇಜಾವರ ಶ್ರೀಗಳ ಬೃಂದಾವಕ್ಕೆ ಗೌರವ ಸಮರ್ಪಣೆ

ಉಡುಪಿ ಪೇಜಾವರ ಅಧೋಕ್ಷಜ ಮಠದ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಕೃಷ್ಣೈಕ್ಯರಾದ ಹಿನ್ನೆಲೆ ದ್ವಾರಕಾ ಶಾರದಾ ಪೀಠ, ಬದರಿ ಜ್ಯೋತಿಷ್ ಪೀಠದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮಿಗಳು ವಿದ್ಯಾಪೀಠಕ್ಕೆ ಸಂದೇಶ ಹೊಂದಿರುವ ಪತ್ರ ತಲುಪಿಸಿದ್ದಾರೆ. 

ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮಿಗಳ ಪ್ರತಿನಿಧಿ ಗೋವಿಂದಾನಂದ ಸರಸ್ವತಿ ಸ್ವಾಮಿಗಳು ವಿದ್ಯಾಪೀಠಕ್ಕೆ ಭೇಟಿ ನೀಡಿ ಶ್ರೀಮಠದ ಅಧಿಕೃತ ಪತ್ರ ತಲುಪಿಸಿದ್ದು, ವಿಶ್ವೇಶ ತೀರ್ಥ ಸ್ವಾಮಿಗಳ ಬೃಂದಾವನಕ್ಕೆ ಛತ್ರಿ, ಶಾಲು, ಪೂರ್ಣ ಫಲ, ತುಳಸಿ ಮಾಲೆಗಳನ್ನು ಸಮರ್ಪಿಸಿದ್ದಾರೆ. 

ಪೇಜಾವರ ಮಠದ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳನ್ನು ಭೇಟಿ ಮಾಡಿರುವ ಗೋವಿಂದಾನಂದ ಸರಸ್ವತಿ ಸ್ವಾಮಿಗಳು ಯತಿ ಸನ್ಮಾನ ವಸ್ತ್ರವನ್ನು ಹಾಗೂ ಭಗವಾನ್ ಬಾಲಕೃಷ್ಣನ ವಿಗ್ರಹವನ್ನು ಸಮರ್ಪಿಸಿದ್ದು, ವಿದ್ಯಾಪೀಠದಲ್ಲಿನ ವಿದ್ವಾಂಸರೊಂದಿಗೆ ವಿದ್ವತ್ ಸಭಾ ಗೋಷ್ಠಿಯಲ್ಲಿ ಭಾಗವಹಿಸಿ ಅನುಗ್ರಹ ಸಂದೇಶ ನೀಡಿದ್ದಾರೆ. 

ಸಭೆಯಲ್ಲಿ ಗುರುಪರಂಪರೆ, ದ್ವಾರಕಾ ಹಾಗೂ ಉಡುಪಿ ಶ್ರೀಮಠಗಳ ಸಂಬಂಧ, ವಿಶ್ವೇಶ ತೀರ್ಥ ಶ್ರೀಪಾದಂಗಳವರ ಬೋಧನೆಗಳ ಬಗ್ಗೆ ಮಾತನಾಡಲಾಯಿತು. ಈ ವೇಳೆ ಹಂಪಿಯ ದೇವಾಲಯದ ಬಳಿ ತೆರವು ಕಾರ್ಯಾಚರಣೆ ಮಾಡಿದಾಗ, ನಿರಾಶ್ರಿತರಾದ ಜನರಿಗೆ ನವ ಹಂಪೆ ನಿರ್ಮಾಣ ಮಾಡುವ ಮೂಲಕ ಆಶ್ರಯ ಕಲ್ಪಿಸುವಲ್ಲಿ ಪೇಜಾವರ ಶ್ರೀಗಳ ಮಾರ್ಗದರ್ಶನ ಹಾಗೂ ಅನುಗ್ರಹವನ್ನೂ ಗೋವಿಂದಾನಂದ ಸರಸ್ವತಿ ಸ್ವಾಮಿಗಳು ಸ್ಮರಿಸಿದ್ದಾರೆ ಎಂದು ಅಧೋಕ್ಷಜ ಮಠದ ಸಿಬ್ಬಂದಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿಗಳಿಗೆ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು ನಮಸ್ಕಾರಗಳನ್ನು ತಿಳಿಸಿದ್ದು, ದ್ವಾರಕೆಗೆ ಆಗಮಿಸಿ ಭಗವಾನ್ ಕೃಷ್ಣನ ದರ್ಶನ ಪಡೆಯಲು ಗೋವಿಂದಾನಂದ ಸರಸ್ವತಿ ಸ್ವಾಮಿಗಳು ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳಿಗೆ ಆಹ್ವಾನ ನೀಡಿದ್ದಾರೆ. 
 

ರಾಮಜನ್ಮಭೂಮಿ ವಿಷಯದಲ್ಲಿ ಶಂಕರಾಚಾರ್ಯರ ಜೊತೆಗಿದ್ದ ಪೇಜಾವರ ಶ್ರೀಗಳು

ರಾಮಜನ್ಮಭೂಮಿ ವಿಷಯದಲ್ಲಿ ಪೇಜಾವರ ಶ್ರೀಗಳು ಸಕ್ರಿಯರಾಗಿದ್ದರು. ಅಂತೆಯೇ ರಾಮಜನ್ಮಭೂಮಿ ನ್ಯಾಸ್‌ ನಲ್ಲಿ ಜಗದ್ಗುರು ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿಗಳು ಪೇಜಾವರ ಶ್ರೀಗಳವರ ಸಹಕಾರವನ್ನು ಸ್ಮರಿಸಿದ್ದಾರೆ. ರಾಮಜನ್ಮಭೂಮಿ ನ್ಯಾಸ್ ನಲ್ಲಿ ಪೇಜಾವರ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥ ಜಗದ್ಗುರು ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿಗಳೊಂದಿಗೆ ವಿಶ್ವೇಶ ತೀರ್ಥ ಶ್ರೀಪಾದಂಗಳವರ ಹಾದಿಯಲ್ಲೇ ನಡೆಯುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com