ದೀಪಾವಳಿಯ ಐದನೇ ದಿನದ ಆಚರಣೆಯೇನು?

ದೀಪಾವಳಿಯ ಐದನೇ ದಿನದ ಹಬ್ಬವೇ ಯಮದ್ವಿತೀಯ ಅಂತ ಉತ್ತರ ಭಾರತದಲ್ಲಿ ಬಹಳ ಪ್ರಸಿದ್ಧಿಯಾಗಿದೆ. ನಮ್ಮಲ್ಲಿ ನಾಗರ ಪಂಚಮಿ ಹಬ್ಬ ಮಾಡುವಂತೆ ಅಲ್ಲಿ ಇದನ್ನು ಭಗಿನಿ ದ್ವಿತೀಯ, ಭಾಗಿನಿ ದ್ವಿತೀಯ, ಬಾಯಿಬೋಜ್ ಎಂದು ಕೂಡ ಕರೆಯುತ್ತಾರೆ, ಪ್ರಮುಖವಾಗಿ ಇದು ಸೋದರ-ಸೋದರಿಯರಿಗೆ ಸಂಬಂಧಿಸಿದ ಹಬ್ಬವಾಗಿದೆ. 

Published: 12th November 2020 10:43 PM  |   Last Updated: 13th November 2020 01:10 PM   |  A+A-


Posted By : Sumana Upadhyaya
Source : Online Desk

ದೀಪಾವಳಿಯ ಐದನೇ ದಿನದ ಹಬ್ಬವೇ ಯಮದ್ವಿತೀಯ ಅಂತ ಉತ್ತರ ಭಾರತದಲ್ಲಿ ಬಹಳ ಪ್ರಸಿದ್ಧಿಯಾಗಿದೆ. ನಮ್ಮಲ್ಲಿ ನಾಗರ ಪಂಚಮಿ ಹಬ್ಬ ಮಾಡುವಂತೆ ಅಲ್ಲಿ ಇದನ್ನು ಭಗಿನಿ ದ್ವಿತೀಯ, ಭಾಗಿನಿ ದ್ವಿತೀಯ, ಬಾಯಿದೂಜ್ ಎಂದು ಕೂಡ ಕರೆಯುತ್ತಾರೆ, ಪ್ರಮುಖವಾಗಿ ಇದು ಸೋದರ-ಸೋದರಿಯರಿಗೆ ಸಂಬಂಧಿಸಿದ ಹಬ್ಬವಾಗಿದೆ. 

ಬಲಿಪಾಡ್ಯಮಿ ಕಳೆದ ಮರುದಿನ ಅಕ್ಕತಂಗಿಯರ ಮನೆಗೆ ಅಣ್ಣತಮ್ಮಂದಿರು ಹೋಗಿ ಹಬ್ಬದ ಊಟಮಾಡಿ ಕಾಣಿಗೆ ತೆಗೆದುಕೊಂಡು ಬರುತ್ತಾರೆ. ಪುರಾಣದಲ್ಲಿ ಯಮ ಮತ್ತು ಯಮುನಾ ಅಣ್ಣ ತಂಗಿಯರು ಇವರು ಸೂರ್ಯನ ಮಕ್ಕಳು, ಅವರ ಕುರಿತು ಆಚರಿಸುವ ಹಬ್ಬವೆಂದು ಉಲ್ಲೇಖವಿದೆ.

ಇಲ್ಲಿ ಯಮುನಾ ಅಂದರೆ ನದಿ ಯಮನ ತಂಗಿ. ಅವತ್ತಿನ ದಿನ ತಂಗಿ ಯಮುನಾ ಯಮನನ್ನು ಕರೆದು ಆತಿಥ್ಯ ನೀಡಿ ಕಳುಹಿಸುವಾಗ ಯಮ ತಂಗಿಗೆ ವರ ನೀಡುತ್ತಾನೆ. ನಿನಗೇನು ವರ ಬೇಕು ಎಂದು ತಂಗಿ ಯಮುನಾಳನ್ನು ಕೇಳಿದಾಗ, ನನಗೇನು ವರ ಬೇಡ, ನಾನು ಸಂತೋಷವಾಗಿದ್ದೇನೆ.ಇವತ್ತಿನ ದಿನ ಯಾವುದೇ ಸೋದರಿಯರು ತಮ್ಮ ಅಣ್ಣತಮ್ಮಂದಿರಿಗೆ ಆತಿಥ್ಯ ಕೊಡುತ್ತಾರೋ, ಅವರಿಗೆ ಆಯುರಾರೋಗ್ಯ, ಸಕಲ ಸಂಪತ್ತು ಕೊಟ್ಟು ಸೋದರ ಬಾಂಧವ್ಯ ಚೆನ್ನಾಗಿಟ್ಟಿರಲಿ ಎಂದು ಪ್ರಾರ್ಥಿಸುತ್ತಾಳೆ. ಯಮನಿಗೂ ಸಂತೋಷವಾಗಿ ಆಗಲಿ ಎಂದು ಹರಸುತ್ತಾನೆ.

ಹೀಗಾಗಿ ಆ ದಿನವನ್ನು ಯಮದ್ವಿತೀಯ ಹಬ್ಬ ಎಂದು ಆಚರಣೆ ಮಾಡುತ್ತಾರೆ. ಅಣ್ಣ-ತಮ್ಮಂದಿರು ಅಕ್ಕ-ತಂಗಿಯರ ಮನೆಗೆ ಹೋಗಿ ಇಡೀ ದಿನ ಸಂತೋಷದಿಂದ ಕಳೆದು ಊಟ-ತಿಂಡಿ ತಿಂದು ಬರುತ್ತಾರೆ. 

Stay up to date on all the latest ಭವಿಷ್ಯ-ಆಧ್ಯಾತ್ಮ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp