ನೀವು ಭೇಟಿ ನೀಡಬೇಕಾದ ಭರತ ಭೂಖಂಡದ 51 ಶಕ್ತಿ ಪೀಠಗಳು- (ಭಾಗ 1)

ಶಿವನ ಕೋಪಕ್ಕೆ ಇಡೀ ವಿಶ್ವ ಭಸ್ಮವಾಗುವ ಆತಂಕ ಎದುರಾದಾಗ ವಿಷ್ಣು ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು 51 ತುಂಡುಗಳನ್ನಾಗಿ ಕತ್ತರಿಸುತ್ತಾನೆ. ಆಗ ಸತಿಯ ದೇಹದ ಭಾಗಗಳು ಭೂಮಿ ಮೇಲೆ ಬಿದ್ದವು. ಈ ಸ್ಥಳಗಳೇ ಶಕ್ತಿಪೀಠಗಳಾದುವು. ಈ ಶಕ್ತಿಪೀಠಗಳು ಭಾರತ ಮಾತ್ರವಲ್ಲದೆ, ಬಾಂಗ್ಲಾದೇಶ(7), ಪಾಕಿಸ್ತಾನ(3), ನೇಪಾಳ(3), ಟಿಬೆಟ್(1) ಮತ್ತು ಶ್ರೀಲಂಕಾ(1) ದೇಶಗಳಲ್ಲಿವೆ.
ನೀವು ಭೇಟಿ ನೀಡಬೇಕಾದ ಭರತ ಭೂಖಂಡದ 51 ಶಕ್ತಿ ಪೀಠಗಳು- (ಭಾಗ 1)

ತಂದೆ ದಕ್ಷನ ಇಚ್ಛೆಗೆ ವಿರುದ್ಧವಾಗಿ ಶಿವನನ್ನು ವರಿಸಿದ್ದಕ್ಕಾಗಿ ಸತಿಯನ್ನು ತಂದೆ ಅವಮಾನಿಸುತ್ತಾನೆ. ಅವಮಾನ ತಾಳಲಾರದೆ ಸತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಸತಿ ಮರಣದ ನಂತರ ಕೋಪೋದ್ರಿಕ್ತನಾಗುವ ಶಿವ ಆಕೆಯ ದೇಹವನ್ನು ಹೊತ್ತುಕೊಂಡು ವಿಶ್ವ ಪರ್ಯಟನೆಗೆ ಹೊರಡುತ್ತಾನೆ. ಶಿವನ ಕೋಪಕ್ಕೆ ಇಡೀ ವಿಶ್ವ ಭಸ್ಮವಾಗುವ ಆತಂಕ ಎದುರಾದಾಗ ವಿಷ್ಣು ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು 51 ತುಂಡುಗಳನ್ನಾಗಿ ಕತ್ತರಿಸುತ್ತಾನೆ. ಆಗ ಸತಿಯ ದೇಹದ ಭಾಗಗಳು ಭೂಮಿ ಮೇಲೆ ಬಿದ್ದವು. ಈ ಸ್ಥಳಗಳೇ ಶಕ್ತಿಪೀಠಗಳಾದುವು. ಈ ಶಕ್ತಿಪೀಠಗಳನ್ನು ಕಾಯಲು ಶಿವ ತನ್ನ ಅಂಶದಲ್ಲೇ ಭೈರವಂದಿರನ್ನು ಸೃಷ್ಟಿಸಿ ಆಯಾ ಸ್ಥಳಗಳಲ್ಲಿ ನೇಮಿಸಿದನು. ಈ ಶಕ್ತಿಪೀಠಗಳು ಭಾರತ ಮಾತ್ರವಲ್ಲದೆ, ಬಾಂಗ್ಲಾದೇಶ(7), ಪಾಕಿಸ್ತಾನ(3), ನೇಪಾಳ(3), ಟಿಬೆಟ್(1) ಮತ್ತು ಶ್ರೀಲಂಕಾ(1) ದೇಶಗಳಲ್ಲಿ ಹಂಚಿ ಹೋಗಿವೆ. 51 ಶಕ್ತಿ ಪೀಠಗಳಲ್ಲಿ ಮೊದಲ ಭಾಗವಾಗಿ 25 ಶಕ್ತಿಪೀಠಗಳ ಪರಿಚಯ ಇಲ್ಲಿದೆ. ಆಯಾ ಶಕ್ತಿಪೀಠಗಳಲ್ಲಿ ಬಿದ್ದ ಸತಿಯ ಭಾಗಗಳನ್ನೂ ನೀಡಲಾಗಿದೆ.

1. ಮಹಾಮಾಯಾ ಶಕ್ತಿಫೀಠ
ಅಮರ್ ನಾಥ್, ಜಮ್ಮು ಮತ್ತು ಕಾಶ್ಮೀರ
ಗಂಟಲು
ಭೈರವ: ತ್ರಿಸಂಧ್ಯೇಶ್ವರ

ಅಮರ್ ನಾಥ ಕ್ಷೇತ್ರದಲ್ಲಿ ಪೂಜಿಸಲ್ಪಡುವ ಶಕ್ತಿಯನ್ನು ಮಹಾಮಾಯಾ ಎಂದು ಕರೆಯಲಾಗುತ್ತದೆ. ಈ ಪ್ರದೇಶದಲ್ಲಿ ಬಿದ್ದ ಸತಿಯ ಗಂಟಲು ಭಾಗವನ್ನು ಕಾಯಲು ಶಿವ ತ್ರಿಸಂಧ್ಯೇಶ್ವರನನ್ನು ನೇಮಿಸುತ್ತಾನೆ. ಇಲ್ಲಿಗೆ ಒಮ್ಮೆಗೆ ಭೇಟಿ ಕೊಟ್ಟರೆ ಕರ್ಮ ದೋಷಗಳು ಪರಿಹಾರವಾಗುವುವಲ್ಲದೆ, ಮನಸ್ಸು ಶುದ್ಧಿಗೊಳ್ಳುತ್ತದೆ ಎನ್ನುವ ನಂಬಿಕೆ ಭಕ್ತಾದಿಗಳದ್ದು.
ಭೇಟಿ ನೀಡಲು ಅತ್ಯುತ್ತಮ ಸಮಯ- ಜುಲೈ- ಅಗಸ್ಟ್
ಹತ್ತಿರದ ಏರ್ ಪೋರ್ಟ್- ಶ್ರೀನಗರ(72 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಜಮ್ಮು ತಾವಿ(176 ಕಿ.ಮೀ)
ಹತ್ತಿರದ ಬಸ್ ನಿಲ್ದಾಣ: ಪಹಾಲ್ ಗಂ ಮತ್ತು ಬೈತಾಲ್

2. ಗಂಡಕಿ ದೇವಿ ಶಕ್ತಿಫೀಠ
ಮುಕ್ತಿನಾಥ್, ನೇಪಾಳ
ಬಲ ಕೆನ್ನೆ
ಭೈರವ: ಚಕ್ರಪಾಣಿ

ಗಂಡಕಿ ನದಿಯ ತಟದಲ್ಲಿ ಈ ಸನ್ನಿಧಾನವಿದೆ.  ಹಿಮಾಲಯ ಪ್ರದೇಶಗಳಲ್ಲಿರುವ ಪಗೋಡಾ ಮಾದರಿಯಲ್ಲಿ ಇಲ್ಲಿನ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಜೀವನದಲ್ಲಿ ಎದುರಾಗುವ ಎಲ್ಲಾ ತೊಡಕುಗಳನ್ನು ನಿವಾರಿಸುತ್ತಾಳೆ ಗಂಡಕಿ ದೇವಿ ಎನ್ನುವುದು ಪ್ರತೀತಿ. ಈ ಸ್ಥಳವನ್ನು ಚಕ್ರಪಾಣಿ ಅಂದರೆ ಚಕ್ರಧಾರಿಯಾದ ಶಿವ ಕಾಯುತ್ತಿದ್ದಾನೆ. ಭಕ್ತರ ಸಂಕಷ್ಟಗಳನ್ನು ಆತ ಪರಿಹರಿಸುತ್ತಾನೆ ಎಂದು ಭಕ್ತರು ನಂಬುತ್ತಾರೆ.

ಬೌದ್ಧ ಗುರು ಪದ್ಮಸಂಭವ ಟಿಬೆಟ್ ಗಾಗಿ ಪ್ರಯಾಣಿಸುತ್ತಿರುವಾಗ ಈ ಜಾಗದಲ್ಲಿ ಧ್ಯಾನ ಮಾಡಿದನೆಂದು ಹೇಳುತ್ತಾರೆ.
ಭೇಟಿ ನೀಡಲು ಅತ್ಯುತ್ತಮ ಸಮಯ- ಮಾರ್ಚ್- ಮೇ, ಸೆಪ್ಟೆಂಬರ್- ಡಿಸೆಂಬರ್ 
ಹತ್ತಿರದ ಏರ್ ಪೋರ್ಟ್- ಕಠ್ಮಂಡು, ಮುಕ್ತಿನಾಥ್

3. ಜ್ವಾಲಾ ಶಕ್ತಿ ಪೀಠ
ಕಂಗ್ರಾ, ಹಿಮಾಚಲಪ್ರದೇಶ 
ನಾಲಗೆ
ಭೈರವ: ಉನ್ಮತ್ತ ಭೈರವ

ಇಲ್ಲಿನ ಜ್ವಾಲಾಜೀ ದೇವಸ್ಥಾನದಲ್ಲಿ ನೈಸರ್ಗಿಕ ಅನಿಲ ಬಲಸಿ ಅರ್ಚಕ ದೀಪ ಹಚ್ಚುತ್ತಾನೆ. ಕಾಪರ್ ಕೊಳವೆಯಿಂದ ನೀಲಿ ಜ್ವಾಲೆ ಹೊರಹೊಮ್ಮುವುದನ್ನು ನೋಡಲು ಭಕ್ತಾದಿಗಳು ಮುಗಿಬೀಳುತ್ತಾರೆ. ಈ ಸ್ಥಳವನ್ನು ಉನ್ಮತ್ತ ಭೈರವ ಕಾಯುತ್ತಿದ್ದಾನೆ. ಪ್ರೇಮಿಗಳು, ಗ್ರಹಣ ದೋಷ ದೋಷ ಹೊಂದಿರುವವರು, ಸಂತಾನ ಪ್ರಾಪ್ತಿಗಾಗಿ ಹಂಬಲಿಸುತ್ತಿರುವ ದಂಪತಿಗಳು ಇಲ್ಲಿಗೆ ಬಂದು ಕೋರಿಕೊಳ್ಳುತ್ತಾರೆ. ಅಕ್ಬರ್ ಈ ದೇವಸ್ಥಾನದ ಜ್ವಾಲಾದೀಪವನ್ನು ಅಳಿಸಲು ಪ್ರಯತ್ನಿಸಿ ಸೋತಿದ್ದನಂತೆ ಕಡೆಗೆ ಆತನೇ ಜ್ವಾಲಾದೇವಿಯ ಭಕ್ತನಾದನಂತೆ.
ಭೇಟಿ ನೀಡಲು ಅತ್ಯುತ್ತಮ ಸಮಯ- ಮಾರ್ಚ್- ಎಪ್ರಿಲ್, ಸೆಪ್ಟೆಂಬರ್- ಅಕ್ಟೋಬರ್
ಹತ್ತಿರದ ಏರ್ ಪೋರ್ಟ್- ಧರ್ಮಶಾಲ(40 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಉನಾ (60 ಕಿ.ಮೀ)

4. ದಾಕ್ಷಾಯಣಿ ದೇವಿ ಶಕ್ತಿಪೀಠ
ಮಾನ್ಸಾ, ಟಿಬೆಟ್
ಬಲಗೈ
ಭೈರವ: ಅಮರ್

ಮಾನಸ ಸರೋವರದ ದಡದಲ್ಲಿಯೇ ಈ ಪೀಠವಿದೆ. ಶಿವ ಪಾರ್ವತಿಯರ ವಾಸಸ್ಥಾನ ಕೈಲಾಸ ಪರ್ವತಕ್ಕೆ ಈ ಶಕ್ತಿಪೀಠವೇ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ.
ಭೇಟಿ ನೀಡಲು ಅತ್ಯುತ್ತಮ ಸಮಯ- ಮೇ(ಮಧ್ಯ)- ಅಕ್ಟೋಬರ್
ಹತ್ತಿರದ ಏರ್ ಪೋರ್ಟ್- ಜಮ್ಮು
ಹತ್ತಿರದ ರಸ್ತೆ ಮಾರ್ಗ- ನಾಥು ಲಾ ಪಾಸ್, ಲಿಪುಲೆಖ್ ಪಾಸ್ 

5. ಮಿಥಿಲಾ ಶಕ್ತಿ ಪೀಠ
ಮಿಥಿಲಾ, ಬಿಹಾರ
ಎಡ ಭುಜ
ಭೈರವ: ಮಹೋದರ ಮತ್ತು ಮಹೇಶ್ವರ

ಈ ದೇವಾಲಯ ಪಾರ್ವತಿಯ ರೂಪವಾದ ಉಮಾ ದೇವಿ ಪೂಜೆಗಾಗಿ ಮುಡಿಪಾಗಿದೆ. ಈ ಶಕ್ತಿಪೀಠ ಮೂರು ದೇವಾಲಯಗಳನ್ನು ಒಳಗೊಂಡಿದೆ. ಮದುರ್ಬನಿ ಜಿಲ್ಲೆಯ ವನದುರ್ಗೊ, ಸಮಷ್ಟಿಪುರದ ಜಯಮಂಗಲ ದೇವಿ ಮತ್ತು ಸಹರ್ಸ ದಲ್ಲಿನ ಉಗ್ರತರ.
ಭೇಟಿ ನೀಡಲು ಅತ್ಯುತ್ತಮ ಸಮಯ- ವರ್ಷವಿಡೀ ಯಾವಾಗ ಬೇಕಾದರೂ
ಹತ್ತಿರದ ಏರ್ ಪೋರ್ಟ್- ಪಾಟ್ನಾ(4 ಗಂಟೆ)
ಹತ್ತಿರದ ರೈಲ್ವೇ ನಿಲ್ದಾಣ- ಜನಕ್ ಪುರ
ಹತ್ತಿರದ ಬಸ್ ನಿಲ್ದಾಣ: 

6. ಗುಹ್ಯೇಶ್ವರಿ ದೇವಿ ಶಕ್ತಿ ಪೀಠ
ಕಠ್ಮಂಡು, ನೇಪಾಳ
ಎರಡು ಮಂಡಿಗಳು
ಭೈರವ: ಕಪಾಲಿ

ಈ ಸನ್ನಿಧಾನದಲ್ಲಿ ಕಾಳಿಯನ್ನು ಪೂಜಿಸಲಾಗುತ್ತದೆ. ದೇವಾಲಯದಲ್ಲಿ ತಲೆಬುರುಡೆಯ ವಿಗ್ರಹವನ್ನು ಬಾಗಿಲಲ್ಲೇ ಮೂಡಿಸಲಾಗಿದೆ. ವಜ್ರಯೋಗಿನಿ ರೂಪದಲ್ಲಿರುವ ಕಾಳಿಗೆ ಇಲ್ಲಿ ಪೂಜಾಕಾರ್ಯ ನೆರವೇರಿಸಲಾಗುತ್ತದೆ.
ಭೇಟಿ ನೀಡಲು ಅತ್ಯುತ್ತಮ ಸಮಯ- ಅಕ್ಟೋಬರ್- ಮಾರ್ಚ್
ಹತ್ತಿರದ ಏರ್ ಪೋರ್ಟ್- ಕಠ್ಮಂಡು
ಹತ್ತಿರದ ಬಸ್ ನಿಲ್ದಾಣ: ದೆಹಲಿಯಿಂದ 20 ಗಂಟೆ ಪ್ರಯಾಣ

7. ದೇವಿ ವಾರಾಹಿ ಶಕ್ತಿ ಪೀಠ
ಪಂಚಸಾಗರ್, ವಾರಣಾಸಿ
ಕೆಳ ದವಡೆ
ಭೈರವ: ಸಂಹಾರ/ ಮಹಾ ರುದ್ರ

ವಾರಾಣಸಿಯ ಮನ್ ಮಂದಿರ್ ಘಾಟ್ ನಲ್ಲಿ ಈ ಶಕ್ತಿಪೀಠವಿದೆ. ಇಲ್ಲಿ ದೇವಿಯನ್ನು ನಾರಾಯಣಿ ಎಂಬ ಹೆಸರಿನಲ್ಲಿ ಪೂಜಿಸಲಾಗುತ್ತದೆ. ಆಕೆಯ ಜೊತೆಗೆ ವಿಷ್ಣುವಿಗೂ ಪೂಜೆ ಸಲ್ಲುತ್ತದೆ.
ಭೇಟಿ ನೀಡಲು ಅತ್ಯುತ್ತಮ ಸಮಯ- ಸೆಪ್ಟೆಂಬರ್- ಫೆಬ್ರವರಿ
ಹತ್ತಿರದ ಏರ್ ಪೋರ್ಟ್- ವಾರಾಣಸಿ


8. ಲಲಿತಾ ದೇವಿ ಶಕ್ತಿ ಪೀಠ
ಸೀತಾಪುರ, ಉತ್ತರಪ್ರದೇಶ
ಬೆರಳುಗಳು
ಭೈರವ: ಭವ

ಸಾಧುಗಳು ಜ್ನಾನ, ಜ್ನಾನೋದಯಕ್ಕಾಗಿ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಬ್ರಹ್ಮ ವಿಷ್ಣು ಮಹೇಶ್ವರ ಮೂವರೂ ಈ ಸ್ಥಳದಲ್ಲಿ ಪ್ರತ್ಯಕ್ಷರಾಗಿ ಈ ಪ್ರದೇಶದ ಶಕ್ತಿಯನ್ನು ಹೆಚ್ಚಿಸಿದರು ಎನ್ನುವ ಪ್ರತೀತಿಯಿದೆ.
ಭೇಟಿ ನೀಡಲು ಅತ್ಯುತ್ತಮ ಸಮಯ- 
ಹತ್ತಿರದ ಏರ್ ಪೋರ್ಟ್- ಅಕ್ಟೋಬರ್- ಫೆಬ್ರವರಿ
ಹತ್ತಿರದ ರೈಲ್ವೇ ನಿಲ್ದಾಣ- ಲಕ್ನೋ(107 ಕಿ.ಮೀ)
ಹತ್ತಿರದ ಬಸ್ ನಿಲ್ದಾಣ: ಸೀತಾಪುರ

9. ಸಾವಿತ್ರಿ ದೇವಿ ಶಕ್ತಿ ಪೀಠ
ಥಾನೇಶ್ವರ್, ಕುರುಕ್ಷೇತ್ರ, ಹರಿಯಾಣ
ಹಿಮ್ಮಡಿ
ಭೈರವ: ಸ್ಥನು

ಕುರುಕ್ಷೇತ್ರದ ಹತ್ತಿರದಲ್ಲೇ ಈ ಶಕ್ತಿಪೀಠವಿದೆ. ಈಸ್ಥಲವನ್ನು ಕಾಳಿಕಾ ಶಕ್ತಿ ಪೀಠ ಎಂದೂ ಕರೆಯಲಾಗುತ್ತದೆ. ಇಲ್ಲಿನ ದೇವಿ ವಿಗ್ರಹದಲ್ಲಿ ನಾಲಗೆ ಕಾಳಿಯಂತೆಯೇ ಹೊರಚಾಚಿಕೊಂಡಿದೆ. ಕೃಷ್ಣ ಮತ್ತು ಬಲರಾಮರು ಮೊದಲು ಕ್ಷೌರ ಮಾಡಿಸಿಕೊಂಡಿದ್ದು ಇಲ್ಲಿ ಎಂದು ನಂಬಲಾಗಿದೆ.
ಭೇಟಿ ನೀಡಲು ಅತ್ಯುತ್ತಮ ಸಮಯ- ಸೆಪ್ಟೆಂಬರ್- ಮಾರ್ಚ್
ಹತ್ತಿರದ ಏರ್ ಪೋರ್ಟ್- ಚಂಡೀಗಢ (98 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಕುರುಕ್ಷೇತ್ರ

10. ವಿಶಾಲಾಕ್ಷಿ ಶಕ್ತಿ ಪೀಠ
ವಾರಾಣಸಿ, ಉತ್ತರಪ್ರದೇಶ
ಕಿವಿಯೋಲೆ
ಭೈರವ: ಕಾಲ ಭೈರವ

ಅಗಲ ಕಣ್ಣಿನ ವಿಶಾಲಾಕ್ಷಿ ದೇವಿಯನ್ನು ಮಣಿಕರ್ಣಿಕಾ ಎಂದೂ ಕರೆಯಲಾಗುತ್ತದೆ. ಇಲ್ಲಿನ ದೇವಾಲಯವನ್ನು ತಮಿಳುನಾಡಿನ ಶಾಕ್ತ ವಂಶಸ್ಥರು ಅಭಿವೃದ್ಧಿ ಪಡಿಸಿದರು. ದಕ್ಷಿಣ ಭಾರತೀಯರು ವಿಶಾಲಾಕ್ಷಿ, ಕಾಮಾಕ್ಷಿ ಮತ್ತು ಮೀನಾಕ್ಷಿ ದೇವಾಲಯಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ. 
ಭೇಟಿ ನೀಡಲು ಅತ್ಯುತ್ತಮ ಸಮಯ- ಅಗಸ್ಟ್- ಮಾರ್ಚ್
ಹತ್ತಿರದ ಏರ್ ಪೋರ್ಟ್- ವಾರಾಣಸಿ
ಹತ್ತಿರದ ರೈಲ್ವೇ ನಿಲ್ದಾಣ- ವಾರಾಣಸಿ

11. ದೇವಿ ಕಾತ್ಯಾಯಿನಿ ಶಕ್ತಿಪೀಠ
ಬೃಂದಾವನ, ಉತ್ತರಪ್ರದೇಶ
ಭೈರವ: ಭೂತೇಶ

ಭೇಟಿ ನೀಡಲು ಅತ್ಯುತ್ತಮ ಸಮಯ- ಅಕ್ಟೋಬರ್- ಮಾರ್ಚ್, ಮಳೆಗಾಲದಲ್ಲೂ ಬರಬಹುದು
ಹತ್ತಿರದ ಏರ್ ಪೋರ್ಟ್- ಅಗ್ರಾ (53 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಬೃಂದಾವನ

12.ತ್ರಿಪುರ್ ಮಾಲಿನಿ ದೇವಿ ಶಕ್ತಿಪೀಠ
ಜಲಂಧರ್, ಪಂಜಾಬ್
ಎಡ ಸ್ತನ
ಭೈರವ: ಭೀಷಣ

ಭೇಟಿ ನೀಡಲು ಅತ್ಯುತ್ತಮ ಸಮಯ- ಅಕ್ಟೋಬರ್- ಮಾರ್ಚ್
ಹತ್ತಿರದ ಏರ್ ಪೋರ್ಟ್- ಅಮೃತ್ ಸರ 
ಹತ್ತಿರದ ರೈಲ್ವೇ ನಿಲ್ದಾಣ- ಜಲಂಧರ್

13. ಮಂಗಳ ಗೌರಿ ಶಕ್ತಿ ಪೀಠ
ಗಯಾ, ಬಿಹಾರ
ಬಲ ಸ್ತನ
ಭೈರವ: ಉಮಾ ಮಹೇಶ್ವರ 

ಭೇಟಿ ನೀಡಲು ಅತ್ಯುತ್ತಮ ಸಮಯ- ಸೆಪ್ಟೆಂಬರ್- ಫೆಬ್ರವರಿ
ಹತ್ತಿರದ ಏರ್ ಪೋರ್ಟ್- ಬೋದ್ ಗಯಾ (10 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಗಯಾ (5 ಕಿ.ಮೀ)

14. ಕೊಟ್ಟಾರಿ ದೇವಿ ಶಕ್ತಿ ಪೀಠ
ಹಿಂಗ್ಲಜ್, ಬಲೂಚಿಸ್ತಾನ
ಭೈರವ: ಭೀಮಲೋಚನ್

ಭೇಟಿ ನೀಡಲು ಅತ್ಯುತ್ತಮ ಸಮಯ- ಚಳಿಗಾಲದ ತಿಂಗಳೂಗಳು
ಹತ್ತಿರದ ಏರ್ ಪೋರ್ಟ್- ಕರಾಚಿ

15. ದೇವಿಗಾಯತ್ರಿ ಶಕ್ತಿ ಪೀಠ
ಮಣಿಬಂಧ್, ಪುಷ್ಕರ್, ರಾಜಸ್ಥಾನ
ಎರಡು ಮಣಿಕಟ್ಟುಗಳು
ಭೈರವ: ಸರ್ವಾನಂದ

ಭೇಟಿ ನೀಡಲು ಅತ್ಯುತ್ತಮ ಸಮಯ- ನವೆಂಬರ್- ಫೆಬ್ರವರಿ
ಹತ್ತಿರದ ಏರ್ ಪೋರ್ಟ್- ಜೈಪುರ (150 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಅಜ್ಮೀರ್ (11 ಕಿ.ಮೀ)

16. ಶಿವಾಹರಕರಾಯ ಶಕ್ತಿ ಪೀಠ
ಕರವಿಪುರ, ಪಾಕಿಸ್ತಾನ
ಕಣ್ಣುಗಳು
ಭೈರವ: ಕ್ರೋಡೀಶ

ಭೇಟಿ ನೀಡಲು ಅತ್ಯುತ್ತಮ ಸಮಯ- ಎಪ್ರಿಲ್, ಅಕ್ಟೋಬರ್- ನವೆಂಬರ್
ಹತ್ತಿರದ ಏರ್ ಪೋರ್ಟ್- ಕರಾಚಿ (263 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಪರ್ಕಾಯಿ

17. ಕಾಮಖ್ಯ ದೇವಿ ಶಕ್ತಿ ಪೀಠ
ಕಾಮ್ ಗಿರಿ, ಗುವಾಹಟಿ, ಅಸ್ಸಾಂ
ಗುಪ್ತಾಂಗಗಳು
ಭೈರವ: ಭ್ಯಾನಂದ/ ಉಮಾನಂದ

ಭೇಟಿ ನೀಡಲು ಅತ್ಯುತ್ತಮ ಸಮಯ- ನವೆಂಬರ್- ಮಾರ್ಚ್
ಹತ್ತಿರದ ಏರ್ ಪೋರ್ಟ್- ಗುವಾಹಟಿ
ಹತ್ತಿರದ ರೈಲ್ವೇ ನಿಲ್ದಾಣ- ಗುವಾಹಟಿ

18. ಜಯಂತಿ ದೇವಿ ಶಕ್ತಿ ಪೀಠ
ಜೈಂತಿಯಾ ಹಿಲ್ಸ್, ಮೇಘಾಲಯ
ಎಡ ತೊಡೆ
ಭೈರವ: ಕ್ರಾಮಾದೀಶ್ವರ

ಭೇಟಿ ನೀಡಲು ಅತ್ಯುತ್ತಮ ಸಮಯ- ಮಾರ್ಚ್- ಜೂನ್
ಹತ್ತಿರದ ಏರ್ ಪೋರ್ಟ್- ಶಿಲ್ಲಾಂಗ್ (65 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಗುವಾಹಟಿ (105 ಕಿ.ಮೀ)

19. ದೇವಿ ತ್ರಿಪುರ ಸುಂದರಿ ಶಕ್ತಿ ಪೀಠ
ಉದಯ್ ಪುರ, ತ್ರಿಪುರಬಲ ಪಾದ
ಭೈರವ: ತ್ರಿಪುರೇಶ್

ಭೇಟಿ ನೀಡಲು ಅತ್ಯುತ್ತಮ ಸಮಯ- ಡಿಸೆಂಬರ್- ಮಾರ್ಚ್
ಹತ್ತಿರದ ಏರ್ ಪೋರ್ಟ್-ಅಗರ್ತಲ (65 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಉದಯ್ ಪುರ (3 ಕಿ.ಮೀ)
ಹತ್ತಿರದ ಬಸ್ ಸ್ಟ್ಯಾಂಡ್- ನಗರ್ಜಲ (55 ಕಿ.ಮೀ)

20. ದೇವಿ ಅವಂತಿ ಶಕ್ತಿ ಪೀಠ
ಉಜ್ಜೈನಿ, ಮಧ್ಯಪ್ರದೇಶ
ಭೈರವ: ಲಂಬಕರ್ಣ

ಭೇಟಿ ನೀಡಲು ಅತ್ಯುತ್ತಮ ಸಮಯ- ಅಕ್ಟೋಬರ್- ಮಾರ್ಚ್
ಹತ್ತಿರದ ಏರ್ ಪೋರ್ಟ್- ಇಂದೋರ್(65 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಉಜ್ಜೈನಿ

21. ಕಾಲ್ ಮಾಧವ್ ದೇವಿ ಶಕ್ತಿ ಪೀಠ
ಅಮರ್ ಕಂಟಕ್, ಶಾದೋಲ್, ಮಧ್ಯಪ್ರದೇಶ
ಎಡ ನಿತಂಬ
ಭೈರವ: ಆಶಿಟಂಡ

ಭೇಟಿ ನೀಡಲು ಅತ್ಯುತ್ತಮ ಸಮಯ- ಅಕ್ಟೋಬರ್- ಮಾರ್ಚ್
ಹತ್ತಿರದ ಏರ್ ಪೋರ್ಟ್- ಜಬಲ್ ಪುರ
ಹತ್ತಿರದ ರೈಲ್ವೇ ನಿಲ್ದಾಣ- ಜಬಲ್ ಪುರ

22. ಶಾರದಾ ದೇವಿ ಶಕ್ತಿಪೀಠ
ಸತ್ನಾ, ಮಧ್ಯಪ್ರದೇಶ
ಕಂಠಹಾರ
ಭೈರವ: ಕಾಲ ಭೈರವ

ಭೇಟಿ ನೀಡಲು ಅತ್ಯುತ್ತಮ ಸಮಯ- ಅಕ್ಟೋಬರ್- ಮಾರ್ಚ್
ಹತ್ತಿರದ ಏರ್ ಪೋರ್ಟ್- ಜಬಲ್ ಪುರ (150 ಕಿ.ಮೀ), ಕಜುರಾಹೊ(130 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಮೈಹಾರ್

23. ದೇವಿ ನರ್ಮದ ಶಕ್ತಿ ಪೀಠ 
ಶೋಂಡೇಶ್, ಮಧ್ಯಪ್ರದೇಶ
ಬಲ ನಿತಂಬ
ಭೈರವ: ಭದ್ರಸೇನ

ಭೇಟಿ ನೀಡಲು ಅತ್ಯುತ್ತಮ ಸಮಯ- ಅಕ್ಟೋಬರ್- ಫೆಬ್ರವರಿ
ಹತ್ತಿರದ ಏರ್ ಪೋರ್ಟ್- ಜಬಲ್ ಪುರ (231 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಪೆಂಡ್ರಾ, ಚತ್ತೀಸ್ ಗಢ(17 ಕಿ.ಮೀ)

24. ಭದ್ರ ಕಾಳಿ ಶಕ್ತಿಪೀಠ 
ಕುರುಕ್ಷೇತ್ರ, ಹರಿಯಾಣ
ಮೊಣಕೈ
ಭೈರವ: ಕಪಿಲಾಂಬರ

ಭೇಟಿ ನೀಡಲು ಅತ್ಯುತ್ತಮ ಸಮಯ- ಅಕ್ಟೋಬರ್- ಮಾರ್ಚ್
ಹತ್ತಿರದ ಏರ್ ಪೋರ್ಟ್- ಇಂದೋರ್(65 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಉಜ್ಜೈನಿ

25. ಚಾಮುಂಡೇಶ್ವರಿ ದೇವಿ ಶಕ್ತಿಪೀಠ
ಮೈಸೂರು
ಕಿವಿಗಳು
ಭೈರವ: ಕಾಲ ಭೈರವ

ಭೇಟಿ ನೀಡಲು ಅತ್ಯುತ್ತಮ ಸಮಯ- ಅಕ್ಟೋಬರ್
ಹತ್ತಿರದ ಏರ್ ಪೋರ್ಟ್- ಬೆಂಗಳೂರು (160 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಮೈಸೂರು (13 ಕಿ.ಮೀ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com