ನವರಾತ್ರಿಯ ಒಂಭತ್ತು ದಿನ ಯಾವ ದೇವಿಗೆ ಯಾವ ಹೂವಿನ ಅಲಂಕಾರ ಮಾಡಬೇಕು? ಯಾವ ಶ್ಲೋಕ ಪಠಿಸಬೇಕು?

ನವರಾತ್ರಿಯ ಪ್ರತೀ ದಿನದ ದೇವಿಯ ಅಲಂಕಾರ, ಆಕೆಗೆ ಇಷ್ಟವಾದ ಹೂವು, ಅಂದು ಇಷ್ಟವಾದ ನೈವೇದ್ಯ. ಆ ದಿನ ಇಡಬೇಕಾದ ರಂಗೋಲಿ, ಆಕೆಯನ್ನು ಒಲಿಸಿಕೊಳ್ಳಲು ರಾಗದ ಜೊತೆಗೆ ಅವಳನ್ನು ಆರಾಧಿಸುವ ಶ್ಲೋಕಗಳು ಈ ರೀತಿಯಾಗಿವೆ.
ನವರಾತ್ರಿಗೆ ನವದುರ್ಗೆಯರ ಆರಾಧನೆ
ನವರಾತ್ರಿಗೆ ನವದುರ್ಗೆಯರ ಆರಾಧನೆ

ಬರಹ- ಶ್ರೀಕಂಠ ಬಾಳಗಂಚಿ, ಬೆಂಗಳೂರು

ದಸರಾಹಬ್ಬ ಸಾಂಸ್ಕೃತಿಕ ನಗರಿ ಮೈಸೂರಿನ ನಾಡಹಬ್ಬ. ಒಂಭತ್ತು ರಾತ್ರಿಗಳು ಸೇರಿ ಒಟ್ಟು ಹತ್ತು ದಿನಗಳು ನಾಡಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಹಳೇ ಮೈಸೂರು ಪ್ರಾಂತ್ಯದ ಬಹುತೇಕರ ಮನೆಗಳಲ್ಲಿ ರಾಜಾ ರಾಣಿಯರ ಪಟ್ಟದ ಗೊಂಬೆಗಳ ಜೊತೆ ವಿವಿಧ ರೀತಿಯ ಅಲಂಕಾರಿಕ ಗೊಂಬೆಗಳನ್ನು ಇಟ್ಟು ಜೊತೆಗೆ ಕಳಸ ಮತ್ತು ದೇವಿಯನ್ನಿಟ್ಟು ಬಗೆ ಬಗೆಯ ರೀತಿಯ ಅಲಂಕಾರಗಳನ್ನು ಮಾಡಿ ಪ್ರತೀದಿನವೂ ಭಕ್ತಿಯಿಂದ ನೈವೇದ್ಯ ಮಾಡಿ ಮಕ್ಕಳಿಗೆ ಬೊಂಬೆ ಬಾಗಿಣ ಕೊಡುವುದು ಸಂಪ್ರದಾಯ.

ನವರಾತ್ರಿಯ ಪ್ರತೀ ದಿನದ ದೇವಿಯ ಅಲಂಕಾರ, ಆಕೆಗೆ ಇಷ್ಟವಾದ ಹೂವು, ಅಂದು ಇಷ್ಟವಾದ ನೈವೇದ್ಯ. ಆ ದಿನ ಇಡಬೇಕಾದ ರಂಗೋಲಿ, ಆಕೆಯನ್ನು ಒಲಿಸಿಕೊಳ್ಳಲು ರಾಗದ ಜೊತೆಗೆ ಅವಳನ್ನು ಆರಾಧಿಸುವ ಶ್ಲೋಕಗಳು ಈ ರೀತಿಯಾಗಿವೆ.

ನವರಾತ್ರಿ ದಿನ 1

  • ದೇವಿ: ಮಹೇಶ್ವರಿ
  • ಹೂ: ಮಲ್ಲಿಗೆ
  • ನೈವೇದ್ಯ ಖಾರ ಹುಗ್ಗಿ (ಪೊಂಗಲ್)
  • ತಿಥಿ: ಪಾಡ್ಯ
  • ರಂಗೋಲಿ : ಅಕ್ಕಿ ಹಿಟ್ಟನ್ನು ಬಳಸಿ ರಂಗೋಲಿ ಬಿಡಿಸಬೇಕು
  • ರಾಗ: ತೋಡಿ
  • ಶ್ಲೋಕ: ಓಂ ಶ್ವೇತವರ್ಣಾಯೈ ವಿಧ್ಮಹೇ ಶೂಲಾ ಹಸ್ತಾಯೈ ಧೀಮಾಹಿ ತನ್ನೋ ಮಹೇಶ್ವರಿ ಪ್ರಚೋದಯಾತ್!

ನವರಾತ್ರಿ ದಿನ 2

  • ದೇವಿ: ಕೌಮಾರಿ
  • ಹೂ: ಕಣಗಲೆ
  • ನೈವೇದ್ಯ ಪುಳಿಯೋಗರೆ
  • ತಿಥಿ: ದ್ವಿತಿಯ
  • ರಂಗೋಲಿ: ಒದ್ದೆಯಾದ ಹಿಟ್ಟನ್ನು ಬಳಸಿ ರಂಗೋಲಿ ಬಿಡಿಸಬೇಕು
  • ರಾಗ: ಕಲ್ಯಾಣಿ
  • ಶ್ಲೋಕ : ಓಂ ಶಿಕಿ ವಾಹನಾಯ ವಿದ್ಮಹೇ ಶಕ್ತಿ ಹಸ್ತಾಯೈ ಧೀಮಹಿ ತನ್ನೋ ಕೌಮಾರಿ ಪ್ರಚೋದಯಾತ್

ನವರಾತ್ರಿ ದಿನ 3

  • ದೇವಿ: ವಾರಹಿ
  • ಹೂ: ಸಂಪಿಗೆ
  • ನೈವೇದ್ಯ ಬೆಲ್ಲದನ್ನ ( ಸಕ್ಕರೆ ಪೊಂಗಲ್)
  • ತಿಥಿ: ತೃತಿಯಾ
  • ರಂಗೋಲಿ:ಹೂವಿನಿಂದ ರಂಗೋಲಿ ಬಿಡಿಸ ಬೇಕು
  • ರಾಗ: ಕಾಂಭೋಧಿ
  • ಶ್ಲೋಕ: ಓಂ ಮಹಿಶತ್ವಜಾಯ ವಿದ್ಮಹೇ ತಂಡ ಹಸ್ತಾಯ ಧೀಮಹಿ ತನ್ನೋ ವಾರಾಹಿ ಪ್ರಚೋದಯತ್

ನವರಾತ್ರಿ ದಿನ 4

  • ದೇವಿ: ಲಕ್ಷ್ಮಿ
  • ಹೂ: ಜಾಜಿ
  • ನೈವೇದ್ಯ ಹುಳಿಯನ್ನ (ಬಿಸಿಬೇಳೇ ಬಾತ್)
  • ತಿಥಿ: ಚತುರ್ಥಿ
  • ಶ್ಲೋಕ: ಅಕ್ಕಿ, ಅರಿಶಿನ ಮತ್ತು ತುಪ್ಪ ಬೆರೆಸಿ ಎಳೆ ಎಳೆಯಾಗಿ ರಂಗೋಲಿಯನ್ನು ಬಿಡಬೇಕು
  • ರಾಗ: ಭೈರವಿ
  • ಶ್ಲೋಕ: ಓಂ‌ ಪದ್ಮ ವಾಸನ್ಯೈ ಚ ವಿದ್ಮಹೀ ಪದ್ಮಲೋಚನೀ ಸ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್

ನವರಾತ್ರಿ ದಿನ 5

  • ದೇವಿ: ವೈಷ್ಣವಿ
  • ಹೂ: ಪಾರಿಜಾತ ಮತ್ತು ಮಲ್ಲೇ
  • ನೈವೇದ್ಯ ಮೊಸರನ್ನ
  • ತಿಥಿ: ಪಂಚಮಿ
  • ರಂಗೋಲಿ: ಕಡಲೇ ಹಿಟ್ಟಿನಿಂದ ಪಕ್ಷಿಯ ರೂಪದ ರಂಗೋಲಿಯನ್ನು ಬಿಡಿಸಬೇಕು
  • ರಾಗ: ಪಂಚಮ ವರ್ಣ ಕೀರ್ತನೆ, ಪಂತುವರಾಲಿ
  • ಶ್ಲೋಕ: ಓಂ ಶ್ಯಾಮವರ್ಣಾಯೈ ವಿದ್ಮಹಿ ಚಕ್ರ ಹಸ್ತಾಯೈ ಧೀಮಹಿ ತನ್ನೋ ವೈಷ್ಣವಿ ಪ್ರಚೋದಯಾತ್

ನವರಾತ್ರಿ ದಿನ 6

  • ದೇವಿ: ಇಂದ್ರಾಣಿ
  • ಹೂ: ದಾಸವಾಳ
  • ನೈವೇದ್ಯ: ಕಾಯನ್ನ
  • ತಿಥಿ: ಷಷ್ಠಿ
  • ರಂಗೋಲಿ: ಕಡಲೇ ಹಿಟ್ಟಿನಿಂದ ದೇವಿಯ ಹೆಸರನ್ನು ಬರೆಯಬೇಕು
  • ರಾಗ: ನೀಲಾಂಬರಿ
  • ಶ್ಲೋಕ: ಓಂ ಕಜತ್ವಜಾಯೈ ವಿದ್ಮಹಿ ವಜ್ರ ಹಸ್ತಾಯ ಧೀಮಹಿ ತನ್ನೋ ಇಂದ್ರಾಯೀ ಪ್ರಚೋದಯಾತ್

ನವರಾತ್ರಿ ದಿನ 7

  • ದೇವಿ: ಸರಸ್ವತಿ
  • ಹೂವು: ಮಲ್ಲಿಗೆ ಮತ್ತು ಮಲ್ಲೇ
  • ನೈವೇದ್ಯ: ನಿಂಬೇಹಣ್ಣಿನ ಚೆತ್ರಾನ್ನ
  • ತಿಥಿ: ಸಪ್ತಮಿ
  • ರಂಗೋಲಿ: ಪರಿಮಳಯುಕ್ತ ಹೂಗಳನ್ನು ಬಳೆಸಿ ರಂಗೋಲಿಯನ್ನು ಹಾಕಬೇಕು
  • ರಾಗ: ಬಿಲಹರಿ
  • ಶ್ಲೋಕ ಓಂ ವಾಗ್ಧೇವ್ಯೈ ವಿದ್ಮಹಿ ವೃಂಜಿ ಪತ್ನಯೈ ಸ ಧೀಮಹಿತನ್ನೋ ವಾಣಿ ಪ್ರಚೋದಯಾತ್

ನವರಾತ್ರಿ ದಿನ 8

  • ದೇವಿ: ದುರ್ಗೆ
  • ಹೂ: ಗುಲಾಬಿ
  • ನೈವೇದ್ಯ: ಅಕ್ಕೀ ಕಡಲೇಬೇಳೆ ಪಾಯಸ
  • ತಿಥಿ: ಅಷ್ಟಮಿ
  • ರಂಗೋಲಿ: ಕಮಲದ ಆಕಾರದ ರಂಗೋಲಿ ಹಾಕಬೇಕು
  • ರಾಗ:ಪುನ್ನಗಾವರಾಲಿ
  • ಶ್ಲೋಕ: ಓಂ ಮಹಿಷಮರ್ದಿನ್ಯೈ ಚ ವಿದ್ಮಹೀ ದುರ್ಗಾ ದೇವ್ಯೈ ಧೀಮಹಿ ತನ್ನೋ ದೇವಿ ಪ್ರಚೋದಯಾತ್

ನವರಾತ್ರಿ ದಿನ 9

  • ದೇವಿ: ಚಾಮುಂಡಿ
  • ಹೂವು: ತಾವರೆ
  • ನೈವೇದ್ಯ: ಕ್ಷೀರಾನ್ನ
  • ತಿಥಿ: ನವಮಿ
  • ರಂಗೋಲಿ: ಪರಿಮಳಯುಕ್ತ ಪುಡಿಯನ್ನು ಬಳಸಿ ಶಸ್ತ್ರಾಸ್ತ್ರ ಆಕಾರದ ರಂಗೋಲಿಯನ್ನು ಎಳೆಯಿರಿ.
  • ರಾಗ: ವಸಂತ
  • ಶ್ಲೋಕ: ಓಂ ಕೃಷ್ಣವರ್ಣಾಯೈ ವಿದ್ಮಹೀ ಶೂಲ ಹಸ್ತಾಯೈ ಧೀಮಹಿ ತನ್ನೋ ಜಾಮುಂಡಾ ಪ್ರಚೋದಯಾತ್

ವಿಜಯ ದಶಮಿ ದಿನ 10

  • ದೇವಿ: ವಿಜಯ
  • ಹೂವು: ಮಲ್ಲಿಗೆ, ಗುಲಾಬಿ
  • ನೈವೇದ್ಯ : ಕಲ್ಲು ಸಕ್ಕರೆ ಅನ್ನ ಹಾಗೂ ಸಿಹಿ ಭಕ್ಷ್ಯ
  • ಶ್ಲೋಕ: ಓಂ ವಿಜಯಾ ದಿವ್ಯೈ ವಿದ್ಮಹೀ ಮಹಾ ನಿತ್ಯಾಯೈ ಧೀಮಹಿ ತನ್ನೋ ದೇವಿ ಪ್ರಚೋದಯಾತ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com