Weekly Horoscope: ವಾರ ಭವಿಷ್ಯ- ದ್ವಾದಶ ರಾಶಿಗಳ ಫಲಾಫಲ

ವಾರ ಭವಿಷ್ಯ: ದ್ವಾದಶ ರಾಶಿಗಳ ಫಲಾಫಲ- ಕೆಲಸ, ಹಣಕಾಸು, ಪ್ರೀತಿ; ಈ ವಾರ ನಿಮ್ಮ ಪರಿಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಿ. ( ಏಪ್ರಿಲ್ 26 ರಿಂದ 2-ಮೇ 2026ರ ವರೆಗೆ)
Zodiac signs
ದ್ವಾದಶ ರಾಶಿಗಳು
Updated on

ಮೇಷ

ವಾರದ ಆರಂಭದಲ್ಲಿ ಸ್ವಲ್ಪ ನಿರಾಸೆ ಕಾದಿರುತ್ತದೆ. ಆದಾಯವು ನಿಮ್ಮ ಅಗತ್ಯಕ್ಕೆ ತಕ್ಕಂತೆ ಇರುತ್ತದೆ. ಗುರುಹಿರಿಯರಿಂದ ಪ್ರಯೋಜನವನ್ನು ಪಡೆಯುವಿರಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶಕ್ಕೆ ಹೆಚ್ಚು ಕಷ್ಟಪಡಬೇಕು. ಅಜೀರ್ಣ ಅಥವಾ ಅತಿಸಾರ ಕೆಲವರನ್ನು ಕಾಡಬಹುದು. ವೃತ್ತಿಯ ಜಾಗದಲ್ಲಿ ಒತ್ತಡಗಳು ಹೆಚ್ಚಾಗುತ್ತವೆ. ಕೆಲಸದ ಸ್ಥಳದಲ್ಲಿ ಈ ವಾರ ಮೇಷ ರಾಶಿಗೆ ಸೇರಿದ ಜನರು ಕಠಿಣ ಪರಿಶ್ರಮವನ್ನು ಪಡುವುದರಿಂದ ಭವಿಷ್ಯದಲ್ಲಿ ಶುಭ ಫಲಗಳ ಪ್ರಾಪ್ತಿಯಾಗುವುದು.

ವೃಷಭ

ಆದಾಯವು ನಿರೀಕ್ಷೆಯಷ್ಟಿರುತ್ತದೆ. ಸಂಗಾತಿಯಿಂದ ಆರ್ಥಿಕ ಸಹಕಾರ ಸಿಗುತ್ತದೆ. ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಮಕ್ಕಳ ವಿದ್ಯಾಭ್ಯಾಸ ಉತ್ತಮವಾಗಿರುತ್ತದೆ. ಹೊಟ್ಟೆಗೆ ಸಂಬಂಧಿಸಿದ ಕೆಲವು ದೋಷಗಳು ನಿಮ್ಮನ್ನು ಕಾಡುತ್ತವೆ. ನಿಮ್ಮ ವ್ಯವಹಾರಗಳಿಗೆ ಸಂಗಾತಿಯ ಸಹಕಾರ ದೊರೆಯುತ್ತದೆ. ಚಿನ್ನಾಭರಣ ವ್ಯಾಪಾರಿಗಳ ಆದಾಯ ಹೆಚ್ಚುತ್ತದೆ. ವೃತ್ತಿಯಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣಬಹುದು. ಈ ವಾರ ನೀವು ಪ್ರಯಾಣಿಸುವುದರಿಂದ ಯಶಸ್ಸು ದೊರಕುವುದು.

ಮಿಥುನ

ಆದಾಯವು ಉತ್ತಮವಾಗಿರುತ್ತದೆ. ಸಾಂಪ್ರದಾಯಿಕ ಕೃಷಿ ಕಲಿಸುವವರಿಗೆ ಬೇಡಿಕೆ ಹೆಚ್ಚುತ್ತದೆ. ನಿಮ್ಮ ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಕೆಲವರಿಗೆ ಅನಿರೀಕ್ಷಿತ ಆದಾಯವಿರುತ್ತದೆ. ಹಿರಿಯರ ಕೃಷಿಭೂಮಿ ದೊರೆಯುವ ಸಾಧ್ಯತೆಯಿದೆ. ವಿದೇಶದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ನಿರೀಕ್ಷೆಗಿಂತ ಹೆಚ್ಚು ಅಭಿವೃದ್ಧಿ ಇದೆ. ಜೀವನದಲ್ಲಿ ಪರಸ್ಪರ ಉತ್ತಮ ಹೊಂದಾಣಿಕೆ ಇರುವುದರಿಂದ ನೀವು ಸಾಕಷ್ಟು ಸಂತೋಷದಿಂದ ಜೀವನವನ್ನು ನಡೆಸುವಿರಿ. ಈ ವಾರ ನಿಮಗೆ ರೋಮ್ಯಾಂಟಿಕ್ ಆಗಿರಲಿದೆ.

ಕಟಕ

ಆದಾಯವು ಮಧ್ಯಮಗತಿಯಲ್ಲಿರುತ್ತದೆ. ನಿಮ್ಮ ಚಟುವಟಿಕೆಗಳು ನಿಧಾನಗತಿಯಲ್ಲಿರುತ್ತವೆ. ಮಧ್ಯವರ್ತಿ ಕೆಲಸ ಮಾಡುವವರಿಗೆ ವ್ಯವಹಾರದಲ್ಲಿ ಸಾಮಾನ್ಯ ಪ್ರಗತಿ ಇರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚು ಯಶಸ್ಸು ಇರುತ್ತದೆ. ಯಂತ್ರಗಳೊಂದಿಗೆ ಕೆಲಸ ಮಾಡುವವರು ಎಚ್ಚರದಿಂದಿರಿ. ಸಂಗಾತಿಯಿಂದ ನಿರೀಕ್ಷಿಸಿದಷ್ಟು ಸಹಕಾರ ಸಿಗುತ್ತದೆ. ಪಶು ಸಂಗೋಪನೆ ಮಾಡುವವರ ಆದಾಯ ಕಡಿಮೆಯಾಗಬಹುದು. ವೃತ್ತಿಯಲ್ಲಿ ಬಡ್ತಿ ದೊರೆಯಬಹುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ನಿಧಾನವಾಗಿ ಸುಧಾರಣೆಯನ್ನು ಹೊಂದುವಿರಿ. ಹಾಗೆ ನಿಮಗೆ ಉತ್ತಮ ಮಾರ್ಗಗಳು ಪ್ರತಿಯೊಂದು ಕೆಲಸದಲ್ಲಿ ದೊರಕಲಿದೆ.

ಸಿಂಹ

ಆದಾಯವು ಈಗ ಮಧ್ಯಮಗತಿಯಲ್ಲಿರುತ್ತದೆ. ನಿಮ್ಮೆಲ್ಲ ಕಾರ್ಯಗಳಿಗೆ ಸಂಗಾತಿಯ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ರಕ್ತದ ಒತ್ತಡ, ಉಸಿರಾಟ ಹಾಗೂ ಶ್ವಾಸಕೋಶದ ತೊಂದರೆ ಇರುವವರು ಎಚ್ಚರ ವಹಿಸಿ. ಕರಕುಶಲ ವಸ್ತುಗಳನ್ನು ಮಾರುವವರಿಗೆ ಆದಾಯ ಹೆಚ್ಚುತ್ತದೆ. ವೃತ್ತಿಯಲ್ಲಿ ಅಭಿವೃದ್ಧಿ ಇರುತ್ತದೆ. ವಾರದ ಕೊನೆಯಲ್ಲಿ ಸುಖ, ಸಮೃದ್ಧಿ ಲಭಿಸುವ ಯೋಗ ನಿರ್ಮಾಣವಾಗುವುದು.

ಕನ್ಯಾ

ಈ ವಾರ ನಿಮ್ಮ ಆದಾಯದ ಮಿತಿಯಲ್ಲಿ ಬದುಕಬೇಕು. ಇದರ ಅರ್ಥವೇನೆಂದರೆ, ನೀವು ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಕೆಲಸದ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದನ್ನು ಅಥವಾ ಈ ವಾರ ಅತಿಯಾಗಿ ಹಣವನ್ನು ಖರ್ಚು ಮಾಡುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ, ನೀವು ಅನಗತ್ಯ ತೊಂದರೆಗಳನ್ನು ಎದುರಿಸಬೇಕಾಗಬಹುದು. ವಾರದ ಆರಂಭದಲ್ಲಿ, ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಕೆಲವು ತೊಂದರೆಗಳನ್ನು ನೀವು ಎದುರಿಸಬಹುದು.

ತುಲಾ

ವಾರದ ಆರಂಭದಲ್ಲಿ ಬಹಳ ಚುರುಕುತನವಿರುತ್ತದೆ. ಆದಾಯವು ಕಡಿಮೆ ಇದ್ದು, ಅದರಲ್ಲೇ ನಿಭಾಯಿಸಬೇಕಾಗಬಹುದು. ಹಿರಿಯರಿಂದ ನಿರೀಕ್ಷಿಸಿದ ಸಹಕಾರ ಸಿಗುವುದಿಲ್ಲ. ಕೃಷಿ ಮಾಡುವವರಿಗೆ ಬಹಳ ಅಭಿವೃದ್ಧಿ ಇರುತ್ತದೆ. ಹೈನುಗಾರಿಕೆ ಮಾಡುವವರ ಆದಾಯ ಹೆಚ್ಚುತ್ತದೆ. ವಿದೇಶದಲ್ಲಿ ಓದಬೇಕೆನ್ನುವವರಿಗೆ ಅವಕಾಶಗಳು ತೆರೆದುಕೊಳ್ಳುತ್ತವೆ. ಸಂಗಾತಿಯ ಸಹಾಯದಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

ವೃಶ್ಚಿಕ

ನಿಮ್ಮ ವ್ಯಕ್ತಿತ್ವದಲ್ಲಿ ಗಂಭೀರತೆ ಇರುತ್ತದೆ. ಆದಾಯವು ನಿರೀಕ್ಷೆಯ ಹತ್ತಿರ ಬರುತ್ತದೆ. ಸರ್ಕಾರಿ ಸಂಸ್ಥೆಗಳಿಗೆ ಭೂಮಿಯನ್ನು ಒದಗಿಸುವವರಿಗೆ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ದೀರ್ಘಕಾಲದಿಂದ ಅನಾರೋಗ್ಯಕ್ಕೆ ತುತ್ತಾದವರ ಆರೋಗ್ಯ ಈಗ ಸುಧಾರಿಸುತ್ತದೆ. ನಿಮ್ಮ ಸಂಗಾತಿ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು.

ಧನಸ್ಸು

ಸಾಕಷ್ಟು ಆನಂದವನ್ನು ಕಾಣಬಹುದು ಹಾಗೂ ಸಿಹಿ ಸುದ್ದಿಗಳು ನಿಮಗೆ ದೊರೆಯುತ್ತವೆ. ಆದಾಯವು ಕಡಿಮೆ ಇರುತ್ತದೆ. ವಿದ್ಯಾರ್ಥಿಗಳಿಗೆ ಈಗ ನಿರೀಕ್ಷೆಯ ಹತ್ತಿರದ ಫಲಿತಾಂಶ ದೊರೆಯುತ್ತದೆ. ಪಿತ್ತೋಷ್ಣಗಳು ಹೆಚ್ಚಾಗಬಹುದು. ಅನಿರೀಕ್ಷಿತವಾಗಿ ಪ್ರೀತಿಯ ಬಲೆಗೆ ಬೀಳುವ ಸಂದರ್ಭವಿದೆ. ಧರ್ಮಕಾರ್ಯಗಳಿಗೆ ಹೆಚ್ಚು ಹಣ ಖರ್ಚಾಗುತ್ತದೆ. ತಂದೆಯಿಂದ ನಿಮಗೆ ಉತ್ತಮ ಸಹಕಾರ ದೊರೆಯುತ್ತದೆ

ಮಕರ

ಆದಾಯ ಮಧ್ಯಮಗತಿಯಲ್ಲಿರುತ್ತದೆ. ಸಹೋದರರ ಸಹಕಾರ ದೊರೆಯುತ್ತದೆ. ಕೃಷಿಯಿಂದ ಆದಾಯವಿರುತ್ತದೆ ಹಾಗೂ ಕೃಷಿ ಭೂಮಿಯನ್ನು ಕೊಳ್ಳುವ ಯೋಗವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಲಭಿಸುತ್ತದೆ. ತಾಯಿಯ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಬಹುದು. ಅದಿರು ವ್ಯಾಪಾರ ಮಾಡುವವರ ಆದಾಯ ಹೆಚ್ಚುತ್ತದೆ. ಹೊಸ ಆದಾಯದ ಮೂಲಗಳನ್ನು ಕಂಡುಕೊಳ್ಳಬಹುದು.

ಕುಂಭ

ಧನದ ಕೊರತೆ ಇರುತ್ತದೆ. ರಾಶಿಗೆ 2ನೇ ಮನೆಯಲ್ಲಿ ಗುರುವಿರುವುದರಿಂದ ಎಂತಹ ಪ್ರವಾಹ ಬಂದರೂ ನದಿಯನ್ನು ದಾಟುವ ಸಾಮರ್ಥ್ಯವಿದೆ. ಶಿಸ್ತುಬದ್ಧರಾಗಿ ಸಜ್ಜನರ ಆಶ್ರಯದಲ್ಲಿದ್ದ ಅಶ್ವತ್ಥ ವೃಕ್ಷದ ಕೆಳಗೆ ಕುಳಿತು ಯೋಚಿಸಿದರೆ ಆ ಗಾಳಿಯಿಂದ ಮನಸ್ಸು, ಸ್ಥಿರವಾಗಿ, ಶಾಂತವಾಗಿ ಕೆಲಸವು ನಿಮ್ಮಂತೆ ನಡೆದು ಆನಂದ ಸಿಗುತ್ತದೆ.

ಮೀನ:

ಈ ರಾಶಿಯವರಿಗೆ 12ನೇ ಮನೆಯ ಗುರುವು ಶಿವನೇ ಆಗಿರುವುದರಿಂದ ಓಂ ನಮಃ ಶಿವಾಯ ಎಂಬ ಮಹಾಮಂತ್ರವನ್ನು ಉಸಿರಾಗಿಸಿಕೊಳ್ಳಿ. ಶಿವಧ್ಯಾನ ಮಾಡುವುದರಿಂದ ಏನನ್ನೂ ಗಳಿಸಬಹುದು. ನೀವು ಮಾಡುವ ಕೆಲಸವು ಶರೀರಕ್ಕೆ ಹೊರೆಯಾಗಬಾರದು. ಬೇರೆಯವರಿಗೆ ಆತಂಕ ಉಂಟಾಗದಂತೆ ನೋಡಿಕೊಳ್ಳಿ. ತುಳಸಿ ಪೂಜೆಯನ್ನು ಉಷಾಕಾಲದಲ್ಲಿ ಮಾಡಿದರೆ ಮಹಾವಿಷ್ಣುವೇ ನಿಮ್ಮನ್ನು ಹರಸುತ್ತಾನೆ..

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com