'ರಾಮಸೇತು' ಕೇವಲ ಸೇತುವೆಯಲ್ಲ, ಒಗ್ಗಟ್ಟು-ದೃಢ ಸಂಕಲ್ಪದ ಪ್ರತೀಕ; ಈ ಮಹಾನ್ ಸೇತುವೆಯ ಡಿಸೈನರ್ ಯಾರೆಂದು ತಿಳಿಯಿರಿ!

ರಾವಣನು ಸೀತಾದೇವಿಯನ್ನು ಅಪಹರಿಸಿ ಲಂಕಾಕ್ಕೆ ಕೊಂಡೊಯ್ದ, ನಂತರ ರಾಮ-ಲಕ್ಷ್ಮಣರು ಸೀತೆಯನ್ನು ಹುಡುಕಿ ದಕ್ಷಿಣ ದಿಕ್ಕಿಗೆ ಹೊರಟರು. ಮಾರ್ಗದಲ್ಲಿ ಹನುಮಾನ್‌, ಸುಗ್ರೀವ, ಜಾಂಬವಂತ ಮತ್ತು ಅಂಗದ ಮುಂತಾದ ವಾನರವೀರರ ಜೊತೆಗೆ ರಾಮ- ಲಕ್ಷ್ಮಣ ಸೇರಿಕೊಂಡರು.
AI Image
ಎಐ ಚಿತ್ರ
Updated on

ಮಹಾಪುರಾಣವಾದ ರಾಮಾಯಣದಲ್ಲಿ ಮೊದಲು ರಾಮಸೇತು ಎಂಬ ಪದವನ್ನು ಬಳಸಲಾಗಿದೆ. ರಾಮನು ತನ್ನ ಪತ್ನಿಯಾದ ಸೀತೆಯನ್ನು ರಾಕ್ಷಸ ರಾಜ ರಾವಣ ಅಪಹರಿಸದಾಗ ಲಂಕೆಗೆ ಪಯಣಸಿಲು ವಾನರಸೈನ್ಯದ ಸಹಾಯದಿಂದ ರಾಮಸೇತು ನಿರ್ಮಿಸಲಾಯಿತು. ವಾಲ್ಮೀಕಿ ರಾಮಾಯಣದಲ್ಲಿ ರಾಮಸೇತು ಸಂಪರ್ಕ ಎಂಬ ಅಧ್ಯಾಯದಲ್ಲಿ ಇದರ ಉಲ್ಲೇಖವಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಮನ್ನಾರ್ ದ್ವೀಪದವರೆಗೆ ರಾಮಸೇತು ಹಬ್ಬಿದೆ. ಈ ಘಟನೆಯ ಧೈರ್ಯದ ನಂಬಿಕೆಯ ಮತ್ತು ಒಕ್ಕೂಟದ ಪ್ರಯತ್ನದ ಪ್ರತೀಕವಾಗಿ ಭಾರತೀಯ ಪರಂಪರೆಯಲ್ಲಿ ಶಾಶ್ವತವಾಗಿ ನಿಲ್ಲುತ್ತದೆ.

ರಾವಣನು ಸೀತಾದೇವಿಯನ್ನು ಅಪಹರಿಸಿ ಲಂಕಾಕ್ಕೆ ಕೊಂಡೊಯ್ದ, ನಂತರ ರಾಮ-ಲಕ್ಷ್ಮಣರು ಸೀತೆಯನ್ನು ಹುಡುಕಿ ದಕ್ಷಿಣ ದಿಕ್ಕಿಗೆ ಹೊರಟರು. ಮಾರ್ಗದಲ್ಲಿ ಹನುಮಾನ್‌, ಸುಗ್ರೀವ, ಜಾಂಬವಂತ ಮತ್ತು ಅಂಗದ ಮುಂತಾದ ವಾನರವೀರರ ಜೊತೆಗೆ ರಾಮ- ಲಕ್ಷ್ಮಣ ಸೇರಿಕೊಂಡರು. ಲಂಕಾದಲ್ಲಿ ಸೀತಾ ದೇವಿ ಇರುವ ಬಗ್ಗೆ ಹಮನುಂತ ಮಾಹಿತಿ ನೀಡಿದ ನಂತರ ಯುದ್ಧದ ಒಂದು ಹಂತವು ಪ್ರಾರಂಭವಾಯಿತು. ನಂತರ ಶ್ರೀರಾಮನ್ ಸಮುದ್ರತೀರದಲ್ಲಿ ಸಮುದ್ರ ದೇವನಿಗೆ ಮಾರ್ಗವನ್ನು ನೀಡಬೇಕೆಂದು ಪ್ರಾರ್ಥಿಸಿದರು.

ವಾಲ್ಮೀಕಿ ರಾಮಾಯಣ ಪ್ರಕಾರ, ಶ್ರೀರಾಮನ ಪ್ರಾರ್ಥನೆಯ ನಂತರ ಸಮುದ್ರದೇವನು ಕಾಣಿಸಿಕೊಂಡನು. ವಾನರ ಸೈನ್ಯದಲ್ಲಿ ನಳ ಮತ್ತು ನೀಲ ಎಂಬ ಹೆಸರಿನ ಇಬ್ಬರು ವಾನರರಿದ್ದರು. ಅವರು ದೇವಶಿಲ್ಪಿ ವಿಶ್ವಕರ್ಮರ ಪುತ್ರರಾಗಿದ್ದರು, ಅವರಿಗೆ ಸಮುದ್ರದ ಮೇಲೆ ಸೇತುವೆಯನ್ನು ನಿರ್ಮಿಸುವ ಕಲೆ ತಿಳಿದಿದೆ ಎಂದು ಸಮುದ್ರ ದೇವರು ಶ್ರೀರಾಮನಿಗೆ ಹೇಳಿದನು. ನಂತರ ಶ್ರೀರಾಮನ ಆದೇಶದಂತೆ, ನಳ- ನೀಲ ಸಮುದ್ರದ ಮೇಲೆ ಸೇತುವೆಯನ್ನು ನಿರ್ಮಿಸಲು ಯೋಜಿಸಿದರು. ರಾಮಾಯಣದ ಪ್ರಕಾರ, ರಾಮಸೇತುವಿನ ನಿರ್ಮಾಣಕ್ಕೆ ನೀರಿನಲ್ಲಿ ತೇಲುವ ಕಲ್ಲುಗಳನ್ನು ಬಳಸಲಾಗಿದ್ದು, ಆ ಕಲ್ಲುಗಳ ಮೇಲೆ 'ರಾಮ' ಎಂದು ಬರೆಯಲಾಗಿತ್ತು. ಈ ಭಕ್ತಿ ಮತ್ತು ದೈವಿಕ ಶಕ್ತಿಯಿಂದಾಗಿ ಆ ಕಲ್ಲುಗಳು ಸಮುದ್ರದಲ್ಲಿ ಮುಳುಗದೆ ತೇಲಿದವು ಎಂದು ನಂಬಲಾಗಿದೆ. ರಾಮನಾಮದ ಮಹತ್ವವನ್ನು ಸೂಚಿಸುವ ಭಕ್ತಿಯ ಪ್ರತೀಕವಾಗಿದೆ ಈ ಕಥೆ.

ರಾಮಾಯಣದಲ್ಲಿ ಈ ಸೇತುವೆಯು ನೂರು ಯೋಜನೆ ಉದ್ದ ಹಾಗೂ ಹತ್ತು ಯೋಜನೆ ಅಗಲವಿದೆ ಎಂದು ಹೇಳುತ್ತದೆ. ಯೋಜನೆಯ ಅಳತೆಯ ಬಗ್ಗೆ ವಿದ್ವಾಂಸರು ನಡುವೆ ವಿಭಿನ್ನ ಅಭಿಪ್ರಾಯಗಳಿವೆ ಹೀಗಾಗಿ ನಿರ್ದಿಷ್ಟ ಕಿಲೋಮೀಟರ್ ಅಳತೆಯನ್ನು ನಿರ್ಣಯಿಸಲು ಸಾಧ್ಯವಿಲ್ಲ. ಆದಾಗ್ಯೂ ಇದು ಅತ್ಯಂತ ವಿಶಾಲವಾದ ನಿರ್ಮಾಣ ಕಾರ್ಯವಾಗಿದೆ ಎಂದು ರಾಮಾಯಣದಲ್ಲಿ ಸ್ಪಷ್ಟಪಡಿಸಲಾಗಿದೆ. ಸೇತುವೆ ನಿರ್ಮಾಣ ಪೂರ್ಣವಾದ ನಂತರ ಶ್ರೀರಾಮನೂ ಲಕ್ಷ್ಮಣನೂ ಸುಗ್ರೀವನೂ ಹನುಮಂತ ಜಾಂಬವ ಹಾಗೂ ಅಂಗದ ಮತ್ತು ವಾನರಸೇನೆಯೊಡನೆ ಲಂಕಾಕ್ಕೆ ಪ್ರವೇಶಿಸಿದ. ನಂತರ ರಾಮ-ರಾವಣ ಯುದ್ಧ ನಡೆಯಿತು. ರಾವಣನನ್ನು ವಧಿಸ ನಂತರ ಸೀತಾದೇವಿ ಜೊತೆ ಶ್ರೀರಾಮನು ಅಯೋಧ್ಯೆಗೆ ಮರಳಿದರು.

ರಾಮಸೇತು ಭಾರತದ ದಕ್ಷಿಣ ಭಾಗದಲ್ಲಿ ರಾಮೇಶ್ವರಂ ಎಂಬಲ್ಲಿ ಒಂದು ಭಾಗವಿದೆ, ಇನ್ನೊಂದು ಭಾಗವು ಶ್ರೀಲಂಕಾದ ಮನ್ನಾರ್ ನ್ನು ಸಂಪರ್ಕಿಸುತ್ತದೆ ಎಂದು ಹೇಳಲಾಗಿದೆ. ರಾಮೇಶ್ವರಂಗೆ ಭೇಟಿ ನೀಡುವ ಎಲ್ಲರೂ ಇದನ್ನು ನೋಡಬಹುದಾಗಿದೆ. ರಾಮಸೇತು ಒಂದು ಸೇತುವೆ ಮಾತ್ರವಲ್ಲ; ಅಸಾಧ್ಯವಾಗಿ ತೋರುವ ಎಲ್ಲಾ ಕೆಲಸಗಳನ್ನು ಒಗ್ಗಟ್ಟು ಮತ್ತು ದೃಢ ನಿಶ್ಚಯದಿಂದ ಸಾಧಿಸಬಹುದು ಎಂಬುದರ ಸಂಕೇತವಾಗಿದೆ. ಶ್ರೀರಾಮನ ಮುಂದಾಳತ್ವದಲ್ಲಿ ಹನುಮಂತನ ಭಕ್ತಿಯು ವಾನರಸೇನೆಯ ಪ್ರಯತ್ನದಿಂದ ಕಟ್ಟಿದ ಸ್ಮರಣೀಯ ರಾಮಸೇತು ಇಂದಿಗೂ ಭಾರತೀಯ ಮನಸ್ಸಿನಲ್ಲಿ ಉಳಿಯುತ್ತದೆ.

- ಡಾ. ಪಿ.ಬಿ ರಾಜೇಶ್

ಜ್ಯೋತಿಷಿ ಮತ್ತು ಸಂಖ್ಯಾಶಾಸ್ತ್ರಜ್ಞರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com