ರಕ್ಷಾ ಬಂಧನದ ಇತಿಹಾಸ ಏನು? ಸಹೋದರರಿಗೆ ರಾಖಿ ಕಟ್ಟುವುದರ ಮಹತ್ವ ತಿಳಿದುಕೊಳ್ಳಿ!

ರಕ್ಷಾ ಬಂಧನಕ್ಕೆ ಸಂಬಂಧಿಸಿದಂತೆ ಪುರಾಣದಲ್ಲಿ ಹಲವು ಕಥೆಗಳು ಪ್ರಚಾರದಲ್ಲಿದೆ. ಅದರಲ್ಲಿ ಅತ್ಯಂತ ಪ್ರಸಿ ದ್ಧವಾದದ್ದು ಶ್ರೀಕೃಷ್ಣನೂ ದ್ರೌಪದಿಯೂ ನಡುವೆ ಇರುವ ಪ್ರೀತಿ ಸಂಬಂಧ.
File image
ಸಾಂದರ್ಭಿಕ ಚಿತ್ರ
Updated on

ರಕ್ಷಾ ಬಂಧನವು ಸಹೋದರ-ಸಹೋದರಿಯರ ನಡುವಿನ ಪವಿತ್ರ ಪ್ರೀತಿ ಮತ್ತು ರಕ್ಷಣೆಯ ಭರವಸೆಯನ್ನು ಸಾರುವ ಪ್ರಮುಖ ಹಬ್ಬವಾಗಿದೆ. 'ರಕ್ಷಾ' ಎಂದರೆ ರಕ್ಷಣೆ ಮತ್ತು 'ಬಂಧನ' ಎಂದರೆ ಸಂಬಂಧ ಅಥವಾ ಗಂಟು ಎಂದರ್ಥ. ಇದು ರಕ್ಷಣೆಯ ಪವಿತ್ರ ಬಂಧವಾಗಿದೆ.

ಸಹೋದರಿಯು ತನ್ನ ಸಹೋದರನ ಮಣಿಕಟ್ಟಿಗೆ ರಾಖಿ (ದಾರ) ಕಟ್ಟುತ್ತಾಳೆ. ಸಹೋದರನು ಅವಳಿಗೆ ಜೀವನಪೂರ್ತಿ ರಕ್ಷಣೆ ಹಾಗೂ ಬೆಂಬಲ ನೀಡುವುದಾಗಿ ಪ್ರತಿಜ್ಞೆ ಮಾಡುತ್ತಾನೆ. ಇದು ರಕ್ತಸಂಬಂಧಕ್ಕೆ ಮಾತ್ರ ಸೀಮಿತವಾಗಿಲ್ಲದೆ, ಯಾವುದೇ ಒಡಹುಟ್ಟಿದವರ ಅಥವಾ ಸ್ನೇಹದ ಅಪ್ಯಾಯತೆಯನ್ನು ಗಟ್ಟಿಗೊಳಿಸುತ್ತದೆ. ಶ್ರಾವಣ ಮಾಸದ ಪೌರ್ಣಮಿ ದಿನದಲ್ಲಿ ಸಾಮಾನ್ಯವಾಗಿ ರಕ್ಷಾ ಬಂಧನ ಆಚರಿಸಲಾಗುತ್ತದೆ. ಈ ದಿನ ಸಹೋದರಿ ಸಹೋದರಿಯ ಕೈಯ್ಯಲ್ಲಿ ರಾಖಿ ಕಟ್ಟುತ್ತಾಳೆ ಮತ್ತು ಸಹೋದರರು ಅವಳ ಸಂರಕ್ಷಣೆಗೆ ಕ್ಷೇಮಕ್ಕಾಗಿ ಮತ್ತು ನಿಲ್ಲುವುದಾಗಿ ಪ್ರತಿಜ್ಞೆ ಮಾಡುತ್ತಾರೆ.

ರಕ್ಷಾ ಬಂಧನಕ್ಕೆ ಸಂಬಂಧಿಸಿದಂತೆ ಪುರಾಣದಲ್ಲಿ ಹಲವು ಕಥೆಗಳು ಪ್ರಚಾರದಲ್ಲಿದೆ. ಅದರಲ್ಲಿ ಅತ್ಯಂತ ಪ್ರಸಿ ದ್ಧವಾದದ್ದು ಶ್ರೀಕೃಷ್ಣನೂ ದ್ರೌಪದಿಯೂ ನಡುವೆ ಇರುವ ಪ್ರೀತಿ ಸಂಬಂಧ. ಶ್ರೀಕೃಷ್ಣನಿಗೆ ದ್ರೌಪದಿಯು ತನ್ನ ಸೀರೆಯಂಚನ್ನು ಕತ್ತರಿಸಿ ಕಟ್ಟುವುದು ಮತ್ತು ಕೃಷ್ಣನು ಅವಳನ್ನು ರಕ್ಷಿಸುವುದು ಈ ಹಬ್ಬದ ಪೌರಾಣಿಕ ಹಿನ್ನೆಲೆಗಳಲ್ಲಿ ಒಂದಾಗಿದೆ.

ಸಭೆಯಲ್ಲಿ ದ್ರೌಪದಿ ಅವಮಾನಕ್ಕೊಳಗಾದಾಗ ಆಕೆಯ ಗೌರವವನ್ನು ಶ್ರೀಕೃಷ್ಣ ಪರಮಾತ್ಮ ಕಾಪಾಡಿದ ಎಂದು ಮಹಾಭಾರತ ಪರಂಪರೆ ಹೇಳುತ್ತದೆ. ದ್ರೌಪದಿ ಕಟ್ಟಿದ ಒಂದು ಸಣ್ಣ ಸೀರೆ ಅಂಚು ವಸ್ತ್ರಾಪಹರಣ ಸಮಯದಲ್ಲಿ ಶ್ರೀಕೃಷ್ಣ ಆಕೆಯ ಮಾನರಕ್ಷಣೆ ಮಾಡಿದ ಎಬುದನ್ನು ಸೂಚಿಸುತ್ತದೆ.

ಮತ್ತೊಂದು ಪ್ರಸಿದ್ಧವಾದ ಐತಿಹ್ಯವೂ ಇದೆ. ಇಂದ್ರನೂ ಇಂದ್ರಾಣಿಯೂ ಸಂಬಂಧಿಸಿದೆ. ದೇವಾಸುರಯುದ್ಧದಲ್ಲಿ ಇಂದ್ರನು ಅಪಾಯದಲ್ಲಿದ್ದ ಸಂದರ್ಭದಲ್ಲಿ ಇಂದ್ರಾಣಿ ಮಂತ್ರೋಚ್ಚಾರಣೆಯಲ್ಲಿ ಪವಿತ್ರವಾದ ರಕ್ಷಕ ಸೂತ್ರವನ್ನು ಸಿದ್ಧಪಡಿಸಿ ಇಂದ್ರನ ಕೈಯ್ಯಿಗೆ ಕಟ್ಟಿದಳು ಎಂದು ಪುರಾಣಕಥೆಯು ಹೇಳುತ್ತದೆ. ನಂತರ ಇಂದ್ರನಿಗೆ ಯುದ್ದದಲ್ಲಿ ವಿಜಯವೂ ದೊರೆಯಿತು ಎಂಬ ನಂಬಿಕೆಯಿದೆ.

ರಾಖಿಯ ಮಹತ್ವ

ಪ್ರತಿ ಸಹೋದರಿಯು ಪ್ರತಿವರ್ಷ ತನ್ನ ಸಹೋದರರ ಮಣಿಕಟ್ಟಿನ ಮೇಲೆ ‘ರಾಖಿ ’ಎಂದು ಕರೆಯಲ್ಪಡುವ ಪವಿತ್ರ ದಾರವನ್ನು ಕಟ್ಟಲು ಕಾಯುತ್ತಾಳೆ. ಈ ದಿನ, ಸಹೋದರಿ ತನ್ನ ಸಹೋದರರ ಮಣಿಕಟ್ಟಿನ ಮೇಲೆ ಕಟ್ಟುವ ರೇಷ್ಮೆ ದಾರವು ಕೇವಲ ಒಂದು ದಾರವಲ್ಲ. ಅದು ಇಬ್ಬರ ನಡುವಿನ ಶುದ್ಧ, ಪವಿತ್ರ ಮತ್ತು ನಿರಂತರ ಪ್ರೀತಿಯ ಗುರುತು, ಜೊತೆಗೆ ಶಾಶ್ವತ ರಕ್ಷಣೆಗಾಗಿ ಮಂತ್ರದೊಂದಿಗೆ ಬೆರೆತಿದೆ. ಸಹೋದರಿ ಮದುವೆಯಾದಾಗಲೂ, ಸಹೋದರಿಯರ ಮನೆಗೆ ಭೇಟಿ ನೀಡಿ ಮತ್ತು ಆಕೆಯಿಂದ ರಾಖಿಯನ್ನು ಕಟ್ಟಿಸಿಕೊಳ್ಳುವುದನ್ನು ಮರೆಯುವುದಿಲ್ಲ.

ರಕ್ತಸಂಬಂಧದ ಸಹೋದರರಿಗೆ ಮಾತ್ರವಲ್ಲ, ಪ್ರೀತಿ ಮತ್ತು ನಂಬಿಕೆಯನ್ನು ಹಂಚಿಕೊಳ್ಳುವ ಸಂಬಂಧಗಳಿಗೆ ಈ ಆಚರಣೆಯ ದೊಡ್ಡ ಪ್ರಾಮುಖ್ಯತೆ ನೀಡುತ್ತದೆ. ರಕ್ಷಾ ಬಂಧನದ ದಿನ ಮನೆಗಳಲ್ಲಿ ಪೂಜೆಗಳು ಪ್ರಾರ್ಥನೆಗಳನ್ನು ನಡೆಯುತ್ತವೆ. ಸಹೋದರನಿಗೆನೆತ್ತಿಯಲ್ಲಿ ಚಂದನ ಅಥವಾ ಕುಂಕುಮ ಇಟ್ಟು ದೀಪದಲ್ಲಿ ಆರತಿ ಬೆಳಗಿ ನಂತರ ರಾಖಿ ಕಟ್ಟಲಾಗುತ್ತದೆ. ನಂತರ ಸಿಹಿ ತಿನ್ನಿಸಲಾಗುತ್ತದೆ. ಸಹೋದರಿಗೆ ಉಡುಪು, ಆಭರಣ, ಹಣ ಮುಂತಾದ ಉಡುಗೊರೆಗಳನ್ನು ಸಹೋದರರು ನೀಡುತ್ತಾರೆ. ಕಾಲದ ಪ್ರಕಾರ ಆಚರಣೆಯಲ್ಲಿ ಬದಲಾವಣೆಗಳು ಬಂದಿದ್ದರೂ ಅದರ ಮೂಲ ಸಂದೇಶ ಬದಲಾಗಿಲ್ಲ.

ಪರಸ್ಪರ ಪ್ರೀತಿ ಮತ್ತು ನಂಬಿಕೆ ಮತ್ತು ರಕ್ಷಿಸುವ ಜವಾಬ್ದಾರಿಯು ಅದೇ ರಕ್ಷಾ ಬಂಧನದ ಕಥೆ. ದೂರವಿರುವ ಸಹೋದರನಿಗಾಗಿ ಟಪಾಲ್ ಮೂಲಕವೋ ಅಥವಾ ಇತರ ಮಾರ್ಗಗಳ ಮೂಲಕ ರಾಖಿ ಕಳುಹಿಸುವ ಅಭ್ಯಾಸವು ವ್ಯಾಪಕವಾಗಿದೆ. ಸಹೋದರ ಮತ್ತು ಸಹೋದರಿಯರ ನಡುವಿನ ಸಂಬಂಧದ ಮಹತ್ತ್ವವನ್ನು ನೆನಪಿಸುವ ಈ ದಿನವು ಕುಟುಂಬಕ್ಕೆ ಹೆಚ್ಚಿನ ಗೌರವವನ್ನು ನೀಡುತ್ತದೆ. ಒಂದು ಸಣ್ಣ ನೂಲಿನಲ್ಲಿ ದೊಡ್ಡ ಒಂದು ಸ್ನೇಹ ಸಂಬಂಧ ಗಟ್ಟಿಯಾಗಿರುತ್ತದೆ. ಪರಸ್ಪರ ಪ್ರೀತಿ ಮತ್ತು ಕಾಳಜಿಯುಳ್ಳ ಸಂಬಂಧಗಳ ನಿಜವಾದ ಶಕ್ತಿಯೆಂದು ಈ ಆಚರಣೆಯು ನಮಗೆ ನೆನಪಿಸುತ್ತದೆ.

ಡಾ. ಪಿ.ಬಿ ರಾಜೇಶ್

ಜ್ಯೋತಿಷಿಗಳು ಮತ್ತು ಸಂಖ್ಯಾಶಾಸ್ತ್ರಜ್ಞರು

File image
ವಾಮನ-ತ್ರಿವಿಕ್ರಮ; ಮಹಾಬಲಿ-ಮಹಾಭಕ್ತ; ಧರ್ಮ ಸಂರಕ್ಷಿಸಲು ಭೂಮಿಗೆ ಬಂದ ಭಗವಂತ; ವಿಷ್ಣುವಿನ 5ನೇ ಅವತಾರದ ಸಂದೇಶವೇನು?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com