೨೮ ರಿಂದ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ; ಕೆಲವು ವೈಶಿಷ್ಟ್ಯಗಳು

ಮೊದಲ ಬಾರಿಗೆ ಮಾನ್ಯ ಮುಖ್ಯಮಂತ್ರಿಗಳು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸಂಘಟನಾ ಸಮಿತಿಯ ಗೌರವಾಧ್ಯಕ್ಷರಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
-ಮೊದಲ ಬಾರಿಗೆ ಮಾನ್ಯ ಮುಖ್ಯಮಂತ್ರಿಗಳು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸಂಘಟನಾ ಸಮಿತಿಯ ಗೌರವಾಧ್ಯಕ್ಷರಾಗಿದ್ದಾರೆ. 
-ಖ್ಯಾತ ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಜಯಮಾಲ ಅವರು ಕಲಾತ್ಮಕ ನಿರ್ದೇಶಕರಾಗಿದ್ದಾರೆ. 
-ಮೊದಲ ಬಾರಿಗೆ  ಬೆಂಗಳೂರು ಹಾಗೂ ಮೈಸೂರುಗಳಲ್ಲಿ ಏಕಕಾಲಕ್ಕೆ ಚಿತ್ರೋತ್ಸವ.
ಒಂದೇ ಸೂರಿನಡಿ ಚಲನಚಿತ್ರಗಳ ಪ್ರದರ್ಶನ.
-ಬೆಂಗಳೂರಿನ ರಾಜಾಜಿನಗರದ ಓರಿಯನ್ ಮಾಲ್‍ನಲ್ಲಿರುವ ಪಿವಿಆರ್ ಸಿನಿಮಾದ 11  ಸ್ಕ್ರೀನ್‍ಗಳಲ್ಲಿ ಚಿತ್ರ ಪ್ರದರ್ಶನ 
-ಮೈಸೂರಿನ ಮಾಲ್ ಆಫ್ ಮೈಸೂರಿನ ಐನಾಕ್ಸ್ ಚಿತ್ರಮಂದಿರದ 4 ತೆರೆಗಳಲ್ಲಿ   ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. 
-ಪ್ರತಿ ತೆರೆಯಲ್ಲಿ ಪ್ರತಿ ದಿನ 5 ಚಿತ್ರಗಳ ಪ್ರದರ್ಶನ 
-ಪ್ರತಿ ದಿನ ಬೆಂಗಳೂರು ಮತ್ತು ಮೈಸೂರುಗಳಲ್ಲಿ 12,000 ಪ್ರೇಕ್ಷಕರು ಚಿತ್ರ ವೀಕ್ಷಿಸಲು ಅವಕಾಶ.  
ಚಿತ್ರೋತ್ಸವದ ವಿವರಗಳು:
50 ದೇಶಗಳ  172 ಚಿತ್ರಗಳು 7 ದಿನಗಳ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. 
ಸ್ಫರ್ಧಾತ್ಮಕ ವಿಭಾಗವನ್ನು 3 ಭಾಗವಾಗಿ ವಿಂಗಡಿಸಲಾಗಿದೆ. 
1. ಏಶಿಯನ್ ಸ್ಪರ್ಧೆ 
2. ಭಾರತೀಯ ಚಿತ್ರಗಳು 
3. ಕನ್ನಡ ಚಿತ್ರಗಳು. 
ಚಿತ್ರೋತ್ಸವದ ಸ್ಪರ್ಧೆಯಲ್ಲಿ  
ಏಶಿಯಾ ವಿಭಾಗದಿಂದ 12 ಚಿತ್ರಗಳು,  
ಭಾರತೀಯ ವಿಭಾಗದಲ್ಲಿ 13 ಚಿತ್ರಗಳು,  
ಕನ್ನಡ ವಿಭಾಗದಲ್ಲಿ 15 ಚಿತ್ರಗಳು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com