೮ನೆ ಸಿನೆಮೋತ್ಸವ; ವಿಚಾರ ಸಂಕಿರಣ, ಕಮ್ಮಟ ಮತ್ತು ಮಾಸ್ಟರ್ ಕ್ಲಾಸ್ ಗಳ ವಿವರ

ಅಂತರರಾಷ್ಟ್ರೀಯ ಖ್ಯಾತಿಯ ನಿರ್ದೇಶಕರು, ಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ಮಾಸ್ಟರ್ ಕ್ಲಾಸ್ ನಲ್ಲಿ ಭಾಗವಹಿಸುವರು.
ಗುಲ್ಜಾರ್
ಗುಲ್ಜಾರ್

-ಅಂತರರಾಷ್ಟ್ರೀಯ ಖ್ಯಾತಿಯ ನಿರ್ದೇಶಕರು, ಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ಮಾಸ್ಟರ್ ಕ್ಲಾಸ್ ನಲ್ಲಿ ಭಾಗವಹಿಸುವರು.
-ಶ್ರೀ ಗುಲ್ಜಾರ್, ಶ್ರೀಮತಿ ಜಯಬಚ್ಚನ್, ಶ್ರೀ ಅಶೋಕ್ ಅಮೃತರಾಜ್, ಶ್ರೀ ಮಣಿರತ್ನಂ,  ಶ್ರೀಮತಿ ಸುಹಾಸಿನಿ ಮಣಿರತ್ನಂ, ಶ್ರೀ ಸಂಜಯ್ ಲೀಲಾ ಬನ್ಸಾಲಿ, ಶ್ರೀ ನಾನಾ ಪಾಟೇಕರ್, ಶ್ರೀಮತಿ ಅಪರ್ಣ ಸೇನ್, ಶ್ರೀ ಪಣಿ ಎಗೋನ್ ಮುಂತಾದ ಚಿತ್ರ ತಜ್ಞರು ಸಂವಾದದಲ್ಲಿ ಭಾಗವಹಿಸುವರು.  
-ಛಾಯಾಗ್ರಹಣಕ್ಕೆ ಸಂಬಂಧಿಸಿದ ದಾದಾ ಸಾಹೇಬ ಪಾಲ್ಕೆ ಪ್ರಶಸ್ತಿ ಪುರಸ್ಕøತ            ವಿ.ಕೆ.ಮೂರ್ತಿ ಸ್ಮಾರಕ ಉಪನ್ಯಾಸವನ್ನು ಲಗಾನ್, ವೀರಜಾರ ಖ್ಯಾತಿಯ ಛಾಯಾಗ್ರಾಹಕ ಶ್ರೀ ಅನಿಲ್ ಮೆಹತಾ ನಡೆಸಿಕೊಡಲಿದ್ದಾರೆ.
-ಧ್ವನಿ ತಂತ್ರ ವಿನ್ಯಾಸದ ಕಮ್ಮಟವನ್ನು ಆಸ್ಕರ್ ಪ್ರಶಸ್ತಿ ಪುರಸ್ಕøತ ಧ್ವನಿ ವಿನ್ಯಾಸಗಾರ ಶ್ರೀ ರಸೂಲ್ ಪೂಕುಟ್ಟಿ ನಡೆಸಲಿದ್ದಾರೆ.
-ಹೊಸ ಡಿಜಿಟಲ್ ತಂತ್ರಜ್ಞಾನದ ಕುರಿತಂತೆ ವಿಶೇಷ ಚರ್ಚೆಯನ್ನು ಬಾಹುಬಲಿ ಚಿತ್ರಕ್ಕೆ ಕೆಲಸ ಮಾಡಿದ ಶ್ರೀ ಪಣಿ ಎಗೋನ್ ನಡೆಸಿಕೊಡಲಿದ್ದಾರೆ.
-ಜನವಾದಿ ಮಹಿಳಾ ಸಂಘಟನೆಯ ಆಶ್ರಯದಲ್ಲಿ ಲಿಂಗ ಸಂವೇದನೆ (ಜಂಡರ್ ಸೆನ್ಸ್‍ಟಿವಿಟಿ) ಕುರಿತು ವಿಚಾರ ಸಂಕಿರಣ.
-ಚಿತ್ರಕಥಾ ರಚನೆ, ಸಾಕ್ಷ್ಯಚಿತ್ರ ನಿರ್ಮಾಣ ಕುರಿತ ಮಾಸ್ಟರ್ ಕ್ಲಾಸ್‍ಗಳಲ್ಲಿ ದೆಹಲಿಯ ಶ್ರೀಮತಿ ಸಮೀರಾಜೈನ್, ಶ್ರೀಲಂಕಾದ ಪ್ರಸನ್ನ ವಿತನಗೆ ಮತ್ತು ಅರ್ಮೇನಿಯಾದ ಹರುತ್ಯುನ್ ಕಚಾಥ್ರಿಯನ್ ಮುಂತಾದವರು ಭಾಗವಹಿಸಲಿದ್ದಾರೆ.
-ನೆಟ್‍ಪ್ಯಾಕ್ ನಿಂದ ಏಶ್ಯನ್ ಚಿತ್ರಗಳನ್ನು ವಿವಿಧ ಚಿತ್ರೋತ್ಸವಗಳಲ್ಲಿ ಪಾಲ್ಗೊಳ್ಳಲು ಕೈಗೊಂಡ ಕಾರ್ಯಗಳ ಕುರಿತ ವಿವರ.
-ಫಿಪ್ರೆಸ್ಕಿ 90 ವರ್ಷಗಳಾದ ಸಂದರ್ಭದಲ್ಲಿ ಚಲನಚಿತ್ರ ವಿಮರ್ಶೆಯ ಕುರಿತಂತೆ ಚಿತ್ರ ನಿರ್ಮಾತೃಗಳು ಮತ್ತು ವಿಮರ್ಶಕರ ನಡುವೆ ಸಂವಾದ.
-ಈ ಎಲ್ಲಾ ಕಾರ್ಯಕ್ರಮಗಳು ಚಿತ್ರಗಳು ಪ್ರದರ್ಶನಗೊಳ್ಳುವ ಪಿವಿಆರ್ ಸಿನಿಮಾಸ್‍ನಲ್ಲಿ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com