ಮೊದಲನೇ ದಿನದ ಸಿನಿಮೋತ್ಸವ; ಕನ್ನಡ ಚಿತ್ರಗಳ ಪ್ರದರ್ಶನಕ್ಕೇ ಭಾರಿ ಬೇಡಿಕೆ

೮ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ಚಿತ್ರಪ್ರದರ್ಶನಗಳು ಶುಕ್ರವಾರದಿಂದ ಒರಾಯಾನ್ ಮಾಲ್ ನ ಪಿವಿಆರ್ ಚಿತ್ರಮಂದಿರಗಳಲ್ಲಿ
ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡ ದಿನೇಶ್ ಬಾಬು ನಿರ್ದೇಶನದ 'ಪ್ರಿಯಾಂಕ' ಚಿತ್ರದ ಸ್ಟಿಲ್
ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡ ದಿನೇಶ್ ಬಾಬು ನಿರ್ದೇಶನದ 'ಪ್ರಿಯಾಂಕ' ಚಿತ್ರದ ಸ್ಟಿಲ್

ಬೆಂಗಳೂರು: ೮ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ಚಿತ್ರಪ್ರದರ್ಶನಗಳು ಶುಕ್ರವಾರದಿಂದ ಒರಾಯಾನ್ ಮಾಲ್ ನ ಪಿವಿಆರ್ ಚಿತ್ರಮಂದಿರಗಳಲ್ಲಿ ಪ್ರಾರಂಭವಾದವು. ಮೊದಲ ದಿನ ಗಣನೀಯ ಸಂಖ್ಯೆಯಲ್ಲಿ ಚಿತ್ರರಸಿಕರು ಸಿನೆಮಾಗಳನ್ನು ನೋಡಿ ಆನಂದಿಸಿದರೆ ಕೆಲವು ಅಡಚಣೆಗಳಿಂದ ಕಿರಿಕಿರಿಯನ್ನು ಸಹಿಸಿಕೊಂಡರು. ಮೊದಲ ದಿನ ಮುಖ್ಯಾಂಶಗಳು ಹೀಗಿವೆ.

- ಬೆಳಗ್ಗೆಯಿಂದಲೇ ಚಿತ್ರರಸಿಕರ ಲಗ್ಗೆ. ಮಧ್ಯಾಹ್ನದ ನಂತರ ಚುರುಕುಗೊಂಡ ಜನಸ್ತೋಮ. ತುಂಬಿದ ಪ್ರದರ್ಶನ ಕಂಡ ಸಿನೆಮೋತ್ಸವದ ಚಿತ್ರಗಳು.

- ತಾಂತ್ರಿಕ ಅಡಚಣೆಯಿಂದ 'ಸಮ್ಮರ್ ಸಾಲ್ಸ್ಟೈಸ್' ಮತ್ತು 'ವಿಕ್ಟೋರಿಯಾ' ಚಿತ್ರಗಳಲ್ಲಿ ಅಡಿಟಿಪ್ಪಣಿಗಳು (ಸಬ್ ಟೈಟಲ್ಸ್) ಹಾಕದಿದ್ದರಿಂದ ಚಿತ್ರರಸಿಕರಿಗೆ ಬೇಸರ.

- ಮಾಸ್ಟರ್ ಕ್ಲಾಸ್ ನಲ್ಲಿ ಸಿನೆಮಾದಲ್ಲಿ ಶಬ್ದದ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ ಆಸ್ಕರ್ ವಿಜೇತ ರಸಲ್ ಪೊಕುಟ್ಟಿ ಅವರ ಜೊತೆಗೆ ಸಂವಾದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಜನರು.

- ಕನ್ನಡ ಚಿತ್ರಗಳಾದ ದಿನೇಶ್ ಬಾಬು ನಿರ್ದೇಶನದ 'ಪ್ರಿಯಾಂಕ' ಮತ್ತು ಬಿ ಸುರೇಶ್ ನಿರ್ದೇಶನದ 'ದೇವರ ನಾಡಿನಲ್ಲಿ' ಚಿತ್ರ ವೀಕ್ಷಣೆಗೆ ಭಾರಿ ಬೇಡಿಕೆ. ಆಸನ ಸಿಗದೆ ನಿರಾಶೆಗೊಂಡ ಕೆಲವು ಪ್ರೇಕ್ಷಕರು.ಮತ್ತೆ ಪ್ರದರ್ಶಿಸುವಂತೆ ಬೇಡಿಕೆ.

- ಪ್ರತಿ ಬಾರಿ ಹೊರ ಬಂದಾಗಲೂ ಭದ್ರತಾ ದೃಷ್ಟಿಯಿಂದ ಐದಾರು ಕಡೆ ತಪಾಸಣೆ ಮಾಡಿಕೊಳ್ಳುವ ಕಿರಿಕಿರಿಯನ್ನು ಸಹನೆಯಿಂದಲೇ ತಡೆದುಕೊಂಡ ಪ್ರೇಕ್ಷಕರು.

- ನಿರ್ದೇಶಕರಾದ ಬಿ ಎಂ ಗಿರಿರಾಜ್, ಸುಮನಾ ಕಿತ್ತೂರು, ಟಿ ಎನ್ ಸೀತಾರಂ, ಪಿ ಶೇಷಾದ್ರಿ, ಲಿಂಗದೇವರು ಹಳೆಮನೆ ಇತ್ಯಾದಿ ಕನ್ನಡ ಚಿತ್ರೋದ್ಯಮದ ಮಂದಿಯಿಂದ ಉತ್ಸಾಹದಲ್ಲಿ ಸಿನೆಮಾ ವೀಕ್ಷಣೆ.

- ಸಿನೆಮಾಗಳ ಬಗ್ಗೆ ಮಾಹಿತಿಯುಳ್ಳ ಪುಸ್ತಕ ಇನ್ನೂ ನೀಡದಿದ್ದುದು, ಸಿನೆಮಾಗಳನ್ನು ಆಯ್ಕೆ ಮಾಡಿಕೊಳ್ಳಲು ತಡವರಿಸಿ ಆಯೋಜಕರ ಬಗ್ಗೆ ಅಸಮಧಾನ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com