ಆಸ್ಕರ್ ವಿಜೇತ ರಸಲ್ ಪೂಕಟ್ಟಿ ಜೊತೆಗೆ ಮಾಸ್ಟರ್ ಕ್ಲಾಸ್; 'ಶಬ್ದ' ಅಪ್ರಜ್ಞವಸ್ಥೆಯ ಕಲೆ

ಶಬ್ದ ತಂತ್ರಜ್ಞ ರಸಲ್ ಪೂಕಟ್ಟಿ ಅವರ ಜೊತೆಗೆ ಸಿನೆ ರಸಿಕರು ಸಂವಾದ ನಡೆಸುವ ಅವಕಾಶ ೮ ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕಲ್ಪಿಸಲಾಗಿತ್ತು.
ಸಿನಿಮೋತ್ಸವದ ಮಾಸ್ಟರ್ ಕ್ಲಾಸ್ ನಲ್ಲಿ ಭಾಗಿಯಾದ ಆಸ್ಕರ್ ವಿಜೇತ ರಸಲ್ ಪೂಕಟ್ಟಿ
ಸಿನಿಮೋತ್ಸವದ ಮಾಸ್ಟರ್ ಕ್ಲಾಸ್ ನಲ್ಲಿ ಭಾಗಿಯಾದ ಆಸ್ಕರ್ ವಿಜೇತ ರಸಲ್ ಪೂಕಟ್ಟಿ

ಬೆಂಗಳೂರು: ಶಬ್ದ ತಂತ್ರಜ್ಞ ರಸಲ್ ಪೂಕಟ್ಟಿ ಅವರ ಜೊತೆಗೆ ಸಿನೆ ರಸಿಕರು ಸಂವಾದ ನಡೆಸುವ ಅವಕಾಶ ೮ ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕಲ್ಪಿಸಲಾಗಿತ್ತು. 'ಆ ದಿನಗಳು' ಖ್ಯಾತಿಯ ಚೈತನ್ಯ ಮತ್ತು 'ತಿಥಿ' ನಿರ್ದೇಶಕ ರಾಮ್ ರೆಡ್ಡಿ ಈ ಸಂವಾದವನ್ನು ನಡೆಸಿಕೊಟ್ಟರು. ಸಿನೆಮಾದಲ್ಲಿ ಶಬ್ದದ ಮಹತ್ವ ಮತ್ತು ಶಬ್ದ ತಂತ್ರಜ್ಞಾನದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಬೆಳಕು ಚೆಲ್ಲುವಲ್ಲಿ ಪೂಕಟ್ಟಿ ಯಶಸ್ವಿಯಾದರು. ಸಂವಾದದ ಮುಖ್ಯಾಂಶಗಳು ಇಲ್ಲಿವೆ.

'

- ನನಗೆ ಪ್ರತಿ ಸಿನೆಮಾ ಕೂಡ ವಿಶಿಷ್ಟವಾದ ಸವಾಲು. ಸಂಜಲ್ ಲೀಲಾ ಭನ್ಸಾಲಿ ಅವರ 'ಬ್ಲ್ಯಾಕ್' ಸಿನೆಮಾಗೆ ಶಬ್ದ ವಿನ್ಯಾ-ಸಂಯೋಜನೆ ಮಾಡಿದ್ದು ನನ ವೃತ್ತಿಜೀವನದಲ್ಲಿ ಪ್ರಮುಖ ಘಟ್ಟ ಅದಾದ ನಂತರ ನಾನು ಹಿಂದಿರುಗಿ ನೋಡಿದ್ದೇ ಇಲ್ಲ.

- ಭೌತಶಾಸ್ತ್ರದ ಅಧ್ಯಯನ ಮಾಡಿ ನಂತರ ವಕೀಲಿ ಓದಿ ಆಕಸ್ಮಿಕವಾಗಿ ಎಫ್ ಟಿ ಐ ಐ ಪರೀಕ್ಷೆ ಬರೆದೆ. ಮೊದಲ ಬಾರಿಗೆ ಸಂದರ್ಶನದಲ್ಲಿ ಅನುತ್ತೀರ್ಣಗೊಳಿಸಿದ್ದೇ ನನ್ನ ಜೀವನಕ್ಕೆ ತಿರುವು ನೀಡಿದ ಘಟ್ಟ. ನಂತರ ಸಿನೆಮಾ ಬಗ್ಗೆ ಗಂಭೀರನಾದೆ ಒಂದು ವರ್ಷದ ಕಾಲ ಸಿನೆಮಾ ನೋಡದ ದಿನವೇ ಇಲ್ಲ. ಮುಂದಿನ ವರ್ಷ ಈ ಪ್ರಖ್ಯಾತ ಸಿನೆಮಾ ಶಾಲೆಗೆ ಪ್ರವೇಶ ಪಡೆಯಲು ಯಶಸ್ವಿಯಾದೆ. ವಿದ್ಯಾರ್ಥಿ ವೇತನವೂ ದೊರೆಯಿತು.

- ಆಸ್ಕರ್ ಪ್ರಶಸ್ತಿ ದೊರೆತ ನಂತರ ವೈಯಕ್ತಿಕವಾಗಿ ನನ್ನ ಜೀವನದಲ್ಲಿ ಯಾವುದೇ ಬದಲಾವಣೆಯಾಗಿಲ್ಲವಾದರೂ, ನನ್ನ ಕೆಲಸ ಬಗ್ಗೆ ಇತರರು ತೋರುತ್ತಿರುವ ಆಸಕ್ತಿ ಬದಲಾಗಿದೆ.

- ಸಿನೆಮಾದಲ್ಲಿ ಅಮೂರ್ತ ದೃಶ್ಯಗಳಿಗೆ ಶಬ್ದವೇ ಮೂರ್ತತೆ ನೀಡುವುದು, ಆದುದರಿಂದ ಇದು ಅತಿ ಪ್ರಮುಖ ಸಾಧನ ಸಿನೆಮಾಗೆ ಮತ್ತು ಅದರ ಬಗ್ಗೆ ಅತಿ ಎಚ್ಚರಿಕೆಯೂ ಅಗತ್ಯ.

- ಸಿನೆಮಾ ಮಂದಿ ಸಂಗೀತದ ಬಗ್ಗೆ ತಲೆ ಕೆಡಿಸಿಕೊಳ್ಳುವಷ್ಟು ವಾತವರಣದ ಶಬ್ದದ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ ಏಕೆಂದರೆ ಸಂಗೀತವನ್ನು ಸುಲಭವಾಗಿ ಪ್ರಚಾರ ಮಾಡಬಹುದು. ಆದರೆ ಇದು ಬದಲಾಗಬೇಕಿದೆ.

- ಶಬ್ದ' ಅಪ್ರಾಜ್ಞವಸ್ಥೆಯ ಕಲೆ, ಆದರೆ ನೀವು ಸಿನೆಮಾದಲ್ಲಿ ಕೇಳುವುದೆಲ್ಲವೂ ಪ್ರಾಜ್ಞವಸ್ಥೆಯಲ್ಲೆ.

- ನಾನು ಬಾಲಿವುಡ್ ಗೆ ಪಾದಾರ್ಪಣೆ ಮಾಡಿದಾಗ ಸಿಂಕ್ ಸೌಂಡ್ ಅಷ್ಟು ಜನಪ್ರಿಯವಗಿರಲಿಲ್ಲ, ಆದರೆ ಈಗ ಸನ್ನಿವೇಶ ಬದಲಾಗಿದೆ ೩೦ ರಿಂದ್ ೪೦% ಚಲನಚಿತ್ರಗಳಿ ಸಿಂಕ್ ಸೌಂಡ್ ಬಳಕೆ ಮಾಡುತ್ತಾರೆ.

- ಎಫ್ ಟಿ ಟಿ ಐ ಐ ಮುನ್ನಡೆಸುವವರಿಗೆ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಬಲ್ಲ ಛಾತಿ ಇರಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಅರ್ಥವಿದೆ.

-

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com