೯ನೆ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಾಲನೆ

೯ನೆ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ಉದ್ಘಾಟನೆ ಗುರುವಾರ ಸರಳವಾಗಿ ವಿಧಾನ ಸೌಧದ ಮುಂಭಾಗ ನೆರವೇರಿತು. ಕನ್ನಡ ಚಿತ್ರರಂಗದ ಇತಿಹಾಸವನ್ನು ವಿಧಾನಸೌಧದ ಕಂಬಗಳ ನಡುವೆ ವಿಡಿಯೋ ಮ್ಯಾಪಿಂಗ್ ಮೂಲಕ ಪ್ರೇಕ್ಷಕರಿಗೆ
೯ನೆ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನೆ ಸಮಯದಲ್ಲಿ ವಿಡಿಯೋ ಮ್ಯಾಪಿಂಗ್ ಮೂಲಕ ಕನ್ನಡ ಚಲನಚಿತ್ರ ಇತಿಹಾಸ ಮೂಡಿಸಲಾಯಿತು
೯ನೆ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನೆ ಸಮಯದಲ್ಲಿ ವಿಡಿಯೋ ಮ್ಯಾಪಿಂಗ್ ಮೂಲಕ ಕನ್ನಡ ಚಲನಚಿತ್ರ ಇತಿಹಾಸ ಮೂಡಿಸಲಾಯಿತು
ಬೆಂಗಳೂರು: ೯ನೆ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ಉದ್ಘಾಟನೆ ಗುರುವಾರ ಸರಳವಾಗಿ ವಿಧಾನ ಸೌಧದ ಮುಂಭಾಗ ನೆರವೇರಿತು. ಕನ್ನಡ ಚಿತ್ರರಂಗದ ಇತಿಹಾಸವನ್ನು ವಿಧಾನಸೌಧದ ಕಂಬಗಳ ನಡುವೆ ವಿಡಿಯೋ ಮ್ಯಾಪಿಂಗ್ ಮೂಲಕ ಪ್ರೇಕ್ಷಕರಿಗೆ ಉಣಬಡಿಸಿದ್ದು ಈ ವರ್ಷದ ವಿಶೇಷ. 
ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಯುವದಿನಗಳಲ್ಲಿ ಸಿನೆಮಾ ನೋಡುತ್ತಿದ್ದನ್ನು ನೆನಪಿಸಿಕೊಂಡರಲ್ಲದೆ, ಇತ್ತೀಚಿನ ದಿನಗಳ ಕನ್ನಡ ಸಿನೆಮಾಗಳ ಬಗ್ಗೆ ಅಸಮಾಧಾನವನ್ನು ತೋಡಿಕೊಂಡರು. "ಆಗ ನಾನು ರಾಜಕುಮಾರ್ ಅಭಿನಯದ 'ಬಂಗಾರದ ಮನುಷ್ಯ' ಸಿನೆಮಾವನ್ನು ಐದು ಬಾರಿ ನೋಡಿದ್ದೆ. ಇತ್ತೀಚಿನ ದಿನಗಳಲ್ಲಿ ಸಿನೆಮಾ ನೋಡಲು ಸಮಯ ಸಿಗುವುದಿಲ್ಲ. ಆದರೂ ಹೋದ ವರ್ಷ 'ತಿಥಿ' ಎಂಬ ಸಿನೆಮಾ ನೋಡಿದೆ. ಅತ್ಯುತ್ತಮ ಸಿನೆಮಾ. ಇಂತಹ ಸಿನೆಮಾಗಳು ಹೆಚ್ಚೆಚ್ಚು ಬರಬೇಕು. ಆ ದಿನಗಳಲ್ಲಿ ಕೆಲವೇ ನಟ ನಟಿಯರಿದ್ದರು ಆದರೆ ಅತ್ಯುತ್ತಮ ಸಿನೆಮಾಗಳು ಮೂಡಿ ಬರುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ನೂರಾರು ನಟರಿದ್ದಾರೆ ಆದರೆ ಉತ್ತಮ ಸಿನೆಮಾಗಳ ಸಂಖ್ಯೆ ಕುಸಿದಿದೆ. ಕನ್ನಡ ಸಿನೆಮಾಗಳ ಅಭಿವೃದ್ಧಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ ಆದರೆ ಸಿನಿಮಾರಂಗ ಒಳ್ಳೆಯ ಸಿನೆಮಾಗಳನ್ನು ಮೂಡಿಸಬೇಕು" ಎಂದು ಕಿವಿಮಾತು ಹೇಳಿದರು. 
ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಈಜಿಪ್ಟ್ ದೇಶದ ನಿರ್ದೇಶಕಿ ಹಲ ಖಲೀಲ್ ಇದು ತಮ್ಮ ಮೂರನೇ ಪ್ರವಾಸ ಎಂದು ತಿಳಿಸಿದ್ದಲ್ಲದೆ, ಭಾರತ್ ಮತ್ತು ಈಜಿಪ್ಟ್ ನಡುವೆ ಹಲವು ಸಾಮ್ಯಗಳಿದ್ದು "ಇದು ನನ್ನ ಊರಿನಂತೆ ಭಾಸವಾಗುತ್ತದೆ" ಎಂದರು. 
ನಟ ಪುನೀತ್ ರಾಜಕುಮಾರ್ ಮಾತನಾಡಿ "ನಾನು ಸಿನಿಮೋತ್ಸವಕ್ಕೆ ಪರಿಚಯವಾದದ್ದು ೧೯೮೪ ರಲ್ಲಿ. ಅಂದಿನ ಸಿನಿಮೋತ್ಸವದಲ್ಲಿ ನಾನು ಬಾಲನಟನಾಗಿ ಅಭಿನಯಿಸಿದ 'ಬೆಟ್ಟದ ಹೂವು' ಪ್ರದರ್ಶನಗೊಂಡಿತ್ತು. ಅಂದಿನಿಂದ ಹಲವು ಸಿನಿಮೋತ್ಸವಗಳಲ್ಲಿ ಭಾಗಿಯಾಗಿದ್ದೇನೆ.
"ಕಳೆದ ವರ್ಷ ೯-೧೦ ಅತ್ಯುತ್ತಮ ಸಿನೆಮಾಗಳು ಕನ್ನಡ ಚಿತ್ತ್ರರಂಗದಲ್ಲಿ ಮೂಡಿಬಂದವು" ಎಂದು  'ತಿಥಿ', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಯು-ಟರ್ನ್', 'ರಾಮ ರಾಮ ರೇ' ಸಿನೆಮಾಗಳನ್ನು ಉದಾಹರಿಸಿದರು. 
ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಮಾತಾನಾಡಿ ಮಾಲ್ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ಸಾಮಾನ್ಯರು ಸಿನೆಮಾ ನೋಡುವ ವಾತಾವರಣ ಇಲ್ಲ. ಅಲ್ಲಿ ಟಿಕೆಟ್ ದರದಿಂದ ಹಿಡಿದು ಎಲ್ಲವು ದುಬಾರಿ. ಇದರ ಬಗ್ಗೆ ಸರ್ಕಾರ ಕೆಲವು ನಿರ್ಬಂಧಗಳನ್ನು ಹೇರಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ಮನವಿ ಮಾಡಿಕೊಂಡರು. 
ವಿಧಾನ ಸೌಧದ ಬಾಂಕ್ವೆಟ್ ಹಾಲ್ ನಲ್ಲಿ 'ಒನ್ ಮ್ಯಾನ್ ಅಂಡ್ ಕೌ' ಅರೇಬಿಕ್-ಫ್ರೆಂಚ್ ಭಾಷೆಯ ಸಿನೆಮಾದ ಪ್ರದರ್ಶನದೊಂದಿಗೆ ೯ ನೇ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಅಧಿಕೃತ ಚಾಲನೆ ಸಿಕ್ಕಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com