ಸಿನಿಮೋತ್ಸವಗಳಲ್ಲಿ ಕಲಿಕೆಗೆ ಹೆಚ್ಚು ಪ್ರಾಶಸ್ತ್ಯ ಇರುತ್ತದೆ: 'ರಾಮ ರಾಮ ರೇ' ನಿರ್ದೇಶಕ ಸತ್ಯಪ್ರಕಾಶ್

ಕಳೆದ ವರ್ಷ ತೆರೆಕಂಡ ಡಿ ಸತ್ಯಪ್ರಕಾಶ್ ನಿರ್ದೇಶನದ 'ರಾಮ ರಾಮ ರೇ' ಸಿನೆಮಾ ಪ್ರೇಕ್ಷಕರಿಂದಲೂ, ವಿಮರ್ಶಕರಿಂದಲೂ ಮೆಚ್ಚುಗೆ ಕಂಡು ಶತದಿನ ಪ್ರದರ್ಶನ ಪೂರೈಸಿದೆ. ಇದು ಈಗ ಬೆಂಗಳೂರು ಅಂತಾರಾಷ್ಟ್ರೀಯ
'ರಾಮ ರಾಮ ರೇ' ನಿರ್ದೇಶಕ ಸತ್ಯಪ್ರಕಾಶ್
'ರಾಮ ರಾಮ ರೇ' ನಿರ್ದೇಶಕ ಸತ್ಯಪ್ರಕಾಶ್
ಬೆಂಗಳೂರು: ಕಳೆದ ವರ್ಷ ತೆರೆಕಂಡ ಡಿ ಸತ್ಯಪ್ರಕಾಶ್ ನಿರ್ದೇಶನದ 'ರಾಮ ರಾಮ ರೇ' ಸಿನೆಮಾ ಪ್ರೇಕ್ಷಕರಿಂದಲೂ, ವಿಮರ್ಶಕರಿಂದಲೂ ಮೆಚ್ಚುಗೆ ಕಂಡು ಶತದಿನ ಪ್ರದರ್ಶನ ಪೂರೈಸಿದೆ. ಇದು ಈಗ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿಯೂ ಪ್ರದರ್ಶನ ಕಾಣುತ್ತಿದ್ದು, ಕನ್ನಡ ಸಿನೆಮಾ ವಿಭಾಗದಲ್ಲಿ ಪ್ರಶಸ್ತಿಗಾಗಿಯೂ ಸ್ಪರ್ಧಿಸಿದೆ. 
ಕನ್ನಡಪ್ರಭ[ಡಾಟ್]ಕಾಮ್ ನೊಂದಿಗೆ ಮಾತನಾಡಿದ ನಿರ್ದೇಶಕ ಸತ್ಯಪ್ರಕಾಶ್ ಸಿನಿಮೋತ್ಸವ ಮತ್ತು 'ರಾಮ ರಾಮ ರೇ' ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. 
೧. 'ರಾಮ ರಾಮ ರೇ' ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಪ್ರತಿಕ್ರಿಯೆ ಹೇಗಿತ್ತು?
ನಾನು ಪೂರ್ವನಿಗದಿತ ಕಾರ್ಯಕ್ರಮಗಳಿಂದ ಇಂದು ಸಿನಿಮೋತ್ಸವಕ್ಕೆ ಬರಲಾಗಲಿಲ್ಲ. ಆದರೆ ನಮ್ಮ ಚಿತ್ರತಂಡ ಅಲ್ಲಿ ಬೀಡುಬಿಟ್ಟಿದೆ. 'ರಾಮ ರಾಮ ರೇ' ತುಂಬಿದ ಪ್ರದರ್ಶನ ಕಂಡ ಬಗ್ಗೆ ಕೇಲ್ಪಟ್ಟೆ,. ಬಹಳ ಸಂತಸವಾಯಿತು. 
೨. ಕನ್ನಡ ಚಿತ್ರೋದ್ಯಮಕ್ಕೆ ಸಾಮಾನ್ಯವಾಗಿ ಮತ್ತು ನಿರ್ದೇಶಕರಾಗಿ ನಿಮಗೆ ಈ ಸಿನಿಮೋತ್ಸವಗಳು ಹೇಗೆ ಸಹಕರಿಸುತ್ತವೆ?
ನಾನು ಕೆಲವೇ ಸಿನಿಮೋತ್ಸವಗಳಿಗೆ ಹೋಗಿರುವುದು ಮತ್ತು ಅಲ್ಲಿ ಕೆಲವೇ ಸಿನೆಮಾಗಳನ್ನು ನೋಡಿದ್ದೇನೆ. ಆದರೆ ಸಿನೆಮೋತ್ಸವಗಳಲ್ಲಿ ಪಾಲ್ಗೊಂಡವರ ಜೊತೆಗೆ ಬಹಳ ಚರ್ಚೆ ಮಾಡಿದ್ದೇನೆ. ಇಲ್ಲಿ ಕಲಿಕೆಗೆ ಬಹಳ ಪ್ರಾಶಸ್ತ್ಯವಿರುತ್ತದೆ. ವಿಭಿನ್ನ ವಿಷಯಗಳ ಸೃಜನಶೀಲ ಸಿನೆಮಾಗಳನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂದು ತಿಳಿಯುತ್ತದೆ. ಮಾನವತೆಯ ಬಗ್ಗೆಯೂ, ಕ್ರೌರ್ಯದ ಬಗ್ಗೆಯೂ ಬೇರೆ ಬೇರೆ ದೇಶಗಳಲ್ಲಿ ಹೇಗೆ ಸಿನೆಮಾಗಳನ್ನು ನಿರ್ದೇಶಿಸುತ್ತಾರೆ ಮತ್ತು ಅವುಗಳು ಜನರಿಗೆ ಹೇಗೆ ಪ್ರಭಾವಿಸುತ್ತಾರೆ ಎಂದು ಕೂಡ ಗ್ರಹಿಕೆಗೆ ಸಿಗುತ್ತದೆ. ನಾನು ಹಿಂದೊಮ್ಮೆ ಭಾಗವಹಿಸಿದ್ದ ಉತ್ಸವದಲ್ಲಿ 'ಸಾಂಗ್ ಆಫ್ ಸ್ಪ್ಯಾರೋ' (ಮಾಜಿದ್ ಮಾಜಿದಿ ನಿರ್ದೇಶನದ ಇರಾನಿ ಸಿನೆಮಾ) ಎಂಬ ಸಿನೆಮಾ ನೋಡಿದ್ದೆ ಅದು ಹಲವು ವರ್ಷಗಳ ಕಾಲ ನನಗೆ ಕಾಡಿತ್ತು. ಆ ದೇಶದ ಕಷ್ಟ ಸುಖ, ಜನ ಜೀವನ ಎಲ್ಲವು ನನಗೆ ಕಾಣಸಿಕ್ಕಿತ್ತು. 
೩. ಸಿನಿಮೋತ್ಸವಗಳಲ್ಲಿ ಅಲ್ಲದೆ ಹೋದರು ಸಾಮಾನ್ಯವಾಗಿ ಹೆಚ್ಚೆಚ್ಚು ಸಿನೆಮಾಗಳನ್ನು ನೋಡ್ತೀರಾ?
ಇಲ್ಲ ನಾನು ಸಿನೆಮಾಗಳನ್ನು ನೋಡೋದೇ ಕಡಿಮೆ. ನನಗೆ ಓದಿನಲ್ಲಿ ಹೆಚ್ಚು ಆಸಕ್ತಿ. ನಾನು ಹೆಚ್ಚೆಚ್ಚು ಓದುತ್ತಾ ಬೆಳೆದವನು. 
೪. ಸಿನೆಮಾಗಳನ್ನು ಕಡಿಮೆ ನೋಡಿದ್ದರು, ನಿಮ್ಮ ಸೃಜನಶೀಲತೆಯನ್ನು ಅಭಿವ್ಯಕ್ತಿಸುವುದಕ್ಕೆ ಸಿನೆಮಾ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡದ್ದು ಹೇಗೆ?
ಇದು ಹೇಗೆಂದರೆ ನಾನು ಹೆಚ್ಚೆಚ್ಚು ಕಥೆಗಳನ್ನು ಕೇಳುತ್ತಾ, ಓದುತ್ತಾ ಬೆಳೆದವನು. ಇಂತಹ ಸಮಯದಲ್ಲಿ ನಮ್ಮದೇ ಆದ ಕೃಷ್ಣನನ್ನೋ, ನಮ್ಮದೇ ಆದ ರಾಮನನ್ನೋ ಇನ್ನಿತರ ಪಾತ್ರಗಳನ್ನೂ ಕಲ್ಪನೆ ಮಾಡಿಕೊಂಡಿರುತ್ತೇವೆ. ಅವುಗಳನ್ನು ಹೆಚ್ಚೆಚ್ಚು ದೃಶ್ಯ ರೂಪದಲ್ಲಿಯೇ ಕಲ್ಪನೆ ಮಾಡಿಕೊಂಡಿರುತ್ತೇವೆ. ನಾನು ಬಹುಷಃ ಒಳ್ಳೆಯ ಬರಹಗಾರನಾಗಿದ್ದರೆ ಕಾದಂಬರಿಯನ್ನೋ, ಕಥೆಯನ್ನೋ ಬರೆದಿರುತ್ತಿದ್ದೆ. ಅಥವಾ ಒಳ್ಳೆಯ ಕಲಾವಿದನಾಗಿದ್ದರೆ ಅತ್ಯುತ್ತಮವಾದ ಚಿತ್ರ ಬಿಡಿಸಿರುತ್ತಿದೆ. ನನ್ನ ಕಲ್ಪನೆಗೆ ಮೂರ್ತರೂಪ ನೀಡಲು ದೃಶ್ಯಮಾಧ್ಯಮ ನನಗೆ ಸಹಕರಿಸಿ ನಾನು ನಿರ್ದೇಶಕನಾಗಿದ್ದೇನೆ. 
೫. 'ರಾಮ ರಾಮ ರೇ' ಶತದಿನ ಪೂರೈಸಿದೆ. ಇದರ ಬಗ್ಗೆ ಏನನಿಸುತ್ತಿದೆ. 
ನಮ್ಮ ಸಿನೆಮಾ ಕೆಲವರು ನೋಡಿದರೆ ಸಾಕು, ಒಂದು ವಾರ ಚಿತ್ರಮಂದಿರಗಳಲ್ಲಿ ಉಳಿದರೆ ಸಾಕು ಎಂಬ ಭಯದಿಂದಲೇ ಬಿಡುಗಡೆ ಮಾಡಿದ್ದು. ಆದರೆ ಜನರು ಅದನ್ನು ಅತಿ ಪ್ರೀತಿಯಿಂದ ಸ್ವೀಕರಿಸಿ ನೋಡಿದ್ದಾರೆ. ಇದಕ್ಕೆ ಸಂತಸವಾಗುತ್ತಿದೆ. ಕನ್ನಡ ಪ್ರೇಕ್ಷಕರಿಗೆ ನಾನು ಋಣಿ. 
೬. ನಟ ಗಣೇಶ್ ಜೊತೆಗೆ ಹೊಸ ಸಿನೆಮಾ ಮಾಡ್ತೀರಾ ಅನ್ನುವ ಸುದ್ದಿ ಹರಡಿತ್ತು. ಇದರಲ್ಲಿ ನಿರತರಾಗಿದ್ದೀರಾ?
ಇಲ್ಲ. ಗಣೇಶ್ ಅವರು 'ರಾಮ ರಾಮ ರೇ' ಸಿನೆಮಾ ನೋಡಿ ಬಹಳ ಮೆಚ್ಚಿ, ಯಾವುದಾದರೂ ಒಳ್ಳೆ ಕಥೆ ಇದ್ದರೆ ಹೇಳಿ ಸಿನೆಮಾ ಮಾಡೋಣ ಅಂದಿದ್ದರು. ಅವರಿಗೆ ಹೊಂದುವಂತಹ ಕಥೆ ಸದ್ಯಕ್ಕೆ ನನ್ನಲ್ಲಿಲ್ಲ. ಈಗ ಸದ್ಯಕ್ಕೆ ವಿವಿಧ ಚಲನಚಿತ್ರೋತ್ಸವಗಳಿಗೆ ನಮ್ಮ ಸಿನೆಮಾವನ್ನು ಕಳುಹಿಸುವ ಕಾರ್ಯದಲ್ಲಿ ನಿರತನಾಗಿದ್ದೇನೆ. ಈ ಮಧ್ಯೆ ದಕ್ಷಿಣ ಭಾರತದ ಎಲ್ಲ ಭಾಷೆಗಳಿಗೆ ನಮ್ಮ ಸಿನೆಮಾದ ರಿಮೇಕ್ ಹಕ್ಕುಗಳನ್ನು ಮಾರಲು ಸಾಧ್ಯವಾಗಿರುವುದಕ್ಕೆ ಸಂತಸವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com