ಸಿನಿಮೋತ್ಸವ ಮೊದಲ ದಿನದ ಮುಖ್ಯಾಂಶಗಳು; ಇಂದಿನ ಸಿನೆಮಾ ವೀಕ್ಷಣೆಗೆ ಸಲಹೆ

೯ನೆ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಶುಕ್ರವಾರವೇ ಭಾರಿ ಸಂಖ್ಯೆಯಲ್ಲಿ ಜನ ಭಾಗಿಯಾಗಿ ಸಿನೆಮಾಗಳನ್ನು ವೀಕ್ಷಿಸಿದ್ದು ವಿಶೇಷ. ಇಂದು ವಾರಾಂತ್ಯವಾಗಿದ್ದು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸುವ ಸಾಧ್ಯತೆಯಿದೆ.
ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಮೊದಲ ದಿನ ಅಪಾರ ಸಂಖ್ಯೆಯಲ್ಲಿ ಸಿನೆಮಾಗಳನ್ನು ವೀಕ್ಷಿಸಿದ ಜನ
ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಮೊದಲ ದಿನ ಅಪಾರ ಸಂಖ್ಯೆಯಲ್ಲಿ ಸಿನೆಮಾಗಳನ್ನು ವೀಕ್ಷಿಸಿದ ಜನ
ಬೆಂಗಳೂರು: ೯ನೆ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ  ಶುಕ್ರವಾರವೇ ಭಾರಿ ಸಂಖ್ಯೆಯಲ್ಲಿ ಜನ ಭಾಗಿಯಾಗಿ ಸಿನೆಮಾಗಳನ್ನು ವೀಕ್ಷಿಸಿದ್ದು ವಿಶೇಷ. ಇಂದು ವಾರಾಂತ್ಯವಾಗಿದ್ದು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸುವ ಸಾಧ್ಯತೆಯಿದೆ. 
ಇಲ್ಲಿಯವರೆಗೂ ಸುಮಾರು ೫೦೦೦ ಪಾಸ್ ಗಳನ್ನು ವಿತರಿಸಲಾಗಿದ್ದು, ನೆನ್ನೆ ಮಾತ್ರವೇ ೪೦೦೦ ಕ್ಕೂ ಹೆಚ್ಚು ದಿನದ ಪಾಸುಗಳನ್ನು ವಿತರಿಸಲಾಗಿದೆ ಎಂದು ಆಯೋಜಕರು ಹೇಳಿದ್ದಾರೆ. ಒಟ್ಟಾರೆ ನೆನ್ನೆ ೧೧ ತೆರೆಯಲ್ಲಿ ಪ್ರದರ್ಶನವಾದ ೫೦ ಕ್ಕೂ ಹೆಚ್ಚು ಸಿನೆಮಾ ಪ್ರದರ್ಶನಗಳನ್ನು ೧೦ ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. 
ರಷ್ಯಾ ದೇಶದ 'ಪ್ಯಾರಡೈಸ್' ಮತ್ತು ಕ್ರೊಯೇಷಿಯಾದ 'ಕಾಂಸ್ಟಿಟ್ಯೂಷನ್' ಸಿನೆಮಾಗಳು, ನೋಡಿದ ಪ್ರೇಕ್ಷಕರ ನಡುವೆ ಹೆಚ್ಚು ಚರ್ಚೆಗೆ ಗ್ರಾಸವಾದರೆ, ಹಿಂದಿನ ವರ್ಷ ಕನ್ನಡ ಸಿನೆಮಾ 'ತಿಥಿ'ಯನ್ನು ಕಾದು ನೋಡಿದಂತೆ ಈ ವರ್ಷವೂ ಸತ್ಯಪ್ರಕಾಶ್ ನಿರ್ದೇಶನದ 'ರಾಮ ರಾಮ ರೇ' ಸಿನೆಮಾವನ್ನು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿದ್ದಾರೆ. 
ಇಂದು ಕೂಡ ವಿಶ್ವದ ಅತ್ಯುತ್ತಮ ಸಿನೆಮಾಗಳು ಪ್ರದರ್ಶನಗೊಳ್ಳಲಿದ್ದು, ಇಂದಿನ ಆಯ್ಕೆಗೆ ಇದೊಂದು ಸಲಹೆ ನಿಮಗೆ 
೧. ದ ಬೆಯ್ಟ್  / ೯:೪೦ ಬೆಳಗ್ಗೆ/ ಭಾರತ/ ೮೮ ನಿಮಿಷ/ ಸ್ಕ್ರೀನ್ ೫/ ನಿ:ಬುದ್ಧದೇವ್ ದಾಸಗುಪ್ತ
ಅಥವಾ 
    ಅಪ್ಪಿಯರೆನ್ಸ್   / ೯:೪೦ ಬೆಳಗ್ಗೆ/ ಸಿಂಗಾಪುರ್/೧೧೫ ನಿಮಿಷ/ ಸ್ಕ್ರೀನ್ ೧೦/ ನಿ:ಬೂ ಜುಂಗ್ಫೆನ್
೨. ಗ್ಲೋರಿ/ ೧೨:೦೦ ಮಧ್ಯಾಹ್ನ/ ಬಲ್ಗೇರಿಯಾ/೧೦೧ನಿಮಿಷ/ ಸ್ಕ್ರೀನ್ ೫/ ನಿ: ಪೀಟರ್ ವ್ಯಾಲ್ಕನೋವ್ 
ಅಥವಾ 
     ಐ, ಡೇನಿಯಲ್ ಬ್ಲೇಕ್/ ೧೨:೩೦ ಮಧ್ಯಾಹ್ನ/ ಇಂಗ್ಲೆಂಡ್/೧೦೦ನಿಮಿಷ/ ಸ್ಕ್ರೀನ್ ೭/ ನಿ: ಕೆನ್ ಲೋಚ್  
೩. ದ ಸ್ಟೂಡೆಂಟ್/ ೩:೦೦ ಮಧ್ಯಾಹ್ನ/ ಎಸ್ಟೋನಿಯಾ/೧೧೮ ನಿಮಿಷ/ ಸ್ಕ್ರೀನ್ ೭/ ನಿ:ಕಿರಿಲ್ ಸೆರೆಬ್ರೆನ್ನಿಕೋವ್ 
ಅಥವಾ 
     ವೆರಿ ಬಿಗ್ ಶಾಟ್/೨:೨೦ ಮಧ್ಯಾಹ್ನ/ಲೆಬನನ್/೧೦೭ನಿಮಿಷ/ ಸ್ಕ್ರೀನ್ ೪/ ನಿ: ಮಿರ್- ಜಾನ್ ಬೌ ಛಾಯ  
೪. ದ ಸೇಲ್ಸ್ ಮ್ಯಾನ್/ ೫:೪೫ ಸಂಜೆ/ಇರಾನ್/೧೨೫ ನಿಮಿಷ/ ಸ್ಕ್ರೀನ್ ೫/ ನಿ: ಅಸಘರ್ ಪರ್ಹಾದಿ
ಅಥವಾ 
     ಉಪ್ಪಿನ ಕಾಗದ/೫:೩೦ ಮಧ್ಯಾಹ್ನ/ಭಾರತ/೧೨೦ ನಿಮಿಷ/ ಸ್ಕ್ರೀನ್ ೪/ ನಿ: ಬಿ ಸುರೇಶ 
೫. ಟ್ರೇನ್ ಡ್ರೈವರ್ಸ್ ಡೈರಿ/ ೮:೧೦ ರಾತ್ರಿ/ ಸರ್ಬಿಯಾ/ ೮೫ ನಿಮಿಷ/ ಸ್ಕ್ರೀನ್ ೫/ ನಿ:ಮಿಲೋಸ್ ರ್ಯಾಡೋವಿಕ್ 
ಅಥವಾ 
    ಲೈನ್ಸ್/ ೦೮:೩೦ ರಾತ್ರಿ/ ಗ್ರೀಸ್/೮೮ನಿಮಿಷ/ ಸ್ಕ್ರೀನ್ ೭/ ನಿ: ವ್ಯಾಸಿಲಿಸ್ ಮಜೊಮಿನೋಸ್ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com