ಸಿನಿಮೋತ್ಸವಕ್ಕೆ ವರ್ಣರಂಜಿತ ತೆರೆ; ಕನ್ನಡ ಸಿನೆಮಾ ಸ್ಪರ್ಧೆ ವಿಭಾಗದಲ್ಲಿ 'ರಾಮ ರಾಮ ರೇ'ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಗರಿ

೯ ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಗುರುವಾರ ತೆರೆ ಬಿತ್ತು. ಆರು ಸಾವಿರಕ್ಕೂ ಹೆಚ್ಚು ಜನಕ್ಕೆ ದೇಶ ವಿದೇಶಗಳ ಅತ್ಯುತ್ತಮ ಸಿನೆಮಾಗಳನ್ನು ತೋರಿಸಿದ ಸಿನಿಮೋತ್ಸವದಲ್ಲಿ ಹಲವು ವಿಭಾಗಗಳಲ್ಲಿ ನಡೆಸಿದ ಸ್ಪರ್ಧೆಯ ವಿಜೇತರನ್ನು
ಮೈಸೂರಿನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ನೃತ್ಯ ಪ್ರದರ್ಶನ
ಮೈಸೂರಿನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ನೃತ್ಯ ಪ್ರದರ್ಶನ
ಬೆಂಗಳೂರು: ೯ ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಗುರುವಾರ ತೆರೆ ಬಿತ್ತು. ಆರು ಸಾವಿರಕ್ಕೂ ಹೆಚ್ಚು ಜನಕ್ಕೆ ದೇಶ ವಿದೇಶಗಳ ಅತ್ಯುತ್ತಮ ಸಿನೆಮಾಗಳನ್ನು ತೋರಿಸಿದ ಸಿನಿಮೋತ್ಸವದಲ್ಲಿ ಹಲವು ವಿಭಾಗಗಳಲ್ಲಿ ನಡೆಸಿದ ಸ್ಪರ್ಧೆಯ ವಿಜೇತರನ್ನು ನೆನ್ನೆ ಮೈಸೂರಿನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಘೋಷಿಸಲಾಯಿತು. 
ಪ್ರಶಸ್ತಿಯ ವಿವರಗಳು ಹೀಗಿವೆ 
* ಏಷ್ಯಾ ವಿಭಾಗದ ಸಿನಿಮಾ ಪ್ರಶಸ್ತಿ ಕಿರ್ಗಿಸ್ತಾನದ ''ಎ ಫಾದರ್ ವಿಲ್ ಚಲನಚಿತ್ರದ ಪಾಲು
* ಸ್ಪೆಷಲ್ ಜ್ಯೂರಿ ಪ್ರಶಸ್ತಿ 'ಲೇತ್ ಜೋಷಿ' ಚಲನಚಿತ್ರದ ಪಾಲು.
* ಕನ್ನಡದ 'ಹರಿಕಥಾ ಪ್ರಸಂಗ' ಚಲನಚಿತ್ರಕ್ಕೆ ಬೆಸ್ಟ್ ಇಂಡಿಯಾ ಸಿನಿಮಾ ಪ್ರಶಸ್ತಿಯ ಗರಿ
* ಕನ್ನಡ ಚಲನಚಿತ್ರ ವಿಭಾಗದಲ್ಲಿ 'ರಾಮ ರಾಮ ರೇ' ಚಲನಚಿತ್ರಕ್ಕೆ ಮೊದಲನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪ್ರದಾನ.
'ಪಲ್ಲಟ' ಚಲನಚಿತ್ರಕ್ಕೆ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪ್ರದಾನ.
'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಲನಚಿತ್ರಕ್ಕೆ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪ್ರದಾನ.
* ಜನಪ್ರಿಯ ಮನರಂಜನಾ ಚಲನಚಿತ್ರ ವಿಭಾಗದಲ್ಲಿ 'ಕೋಟಿಗೊಬ್ಬ-2' ಮೊದಲನೇ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆ.
'ಜಗ್ಗುದಾದಾ' ಚಲನಚಿತ್ರ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆ.
'ದೊಡ್ಮನೆ ಹುಡುಗ' ಮೂರನೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಆಯ್ಕೆ.
* ಬಿ ಸುರೇಶ ನಿರ್ದೇಶನದ 'ಉಪ್ಪಿನ ಕಾಗದ' ಸಿನೆಮಾಗೆ ನೆಟ್ ಪ್ಯಾಕ್ ಜ್ಯುರಿ ಪ್ರಶಸ್ತಿ ಮತ್ತು ಮಣಿಪುರದ 'ಲೇಡಿ ಆಫ್ ಲೇಕ್'ಗೆ ಫಿಪ್ರಿಸ್ಕಿ ವಿಮರ್ಶಕರ ಪ್ರಶಸ್ತಿ ಸಿಕ್ಕಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com