ಬಿಫ್ಸ್: ಅನಂತಮೂರ್ತಿ ಸ್ಮರಣಾರ್ಥ ಚಲನಚಿತ್ರಗಳು

ಕರ್ನಾಟಕದ ಖ್ಯಾತ ಸಾಹಿತಿ ಯು ಆರ್ ಅನಂತಮೂರ್ತಿ ಅವರ ನೆನಪಿನಲ್ಲಿ ...
ಸಂಸ್ಕಾರ ಚಲನಚಿತ್ರದ ಸ್ಟಿಲ್
ಸಂಸ್ಕಾರ ಚಲನಚಿತ್ರದ ಸ್ಟಿಲ್
Updated on

ಬೆಂಗಳೂರು: ಕರ್ನಾಟಕದ ಖ್ಯಾತ ಸಾಹಿತಿ ಯು ಆರ್ ಅನಂತಮೂರ್ತಿ ಅವರ ನೆನಪಿನಲ್ಲಿ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಯು ಆರ್ ಎ  ಕಥೆ-ಕಾದಂಬರಿ ಆಧಾರಿತ 5 ಸಿನೆಮಾಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ದೇಶದ ಅತ್ಯುನ್ನತ ಸಾಹಿತ್ಯಕ ಪ್ರಶಸ್ತಿ ಎನ್ನಲಾಗುವ ಜ್ಞಾನಪೀಠ ಪ್ರಶಸ್ತಿ ವಿಜೇತ ದಿವಂಗತ ಯು ಆರ್ ಅನಂತಮೂರ್ತಿ ಖ್ಯಾತ ಬೂಕರ್ ಪ್ರಶಸ್ತಿಗೂ ಕೊನೆಯ ಹಂತದ ಸ್ಪರ್ಧಿಯಾಗಿ ವಿಶ್ವದ ವಿಶೇಷ ಗಮನ ಸೆಳೆದಿದ್ದರು. ಇವರ ಹಲವಾರು ಕಥೆ-ಕಾದಂಬರಿಗಳು ದೃಶ್ಯಮಾಧ್ಯಮದಲ್ಲಿ ಕೂಡ ಗೆದ್ದಿರುವುದು ವಿಶೇಷ.

ಅಂತಹ ಒಂದು ವಿಶೇಷ ಸಿನೆಮಾ "ಸಂಸ್ಕಾರ". ಯು ಆರ್ ಎ ಅವರ ಸಂಸ್ಕಾರ ಕಾದಂಬರಿ ಆಧಾರಿತ ಈ ಸಿನೆಮಾ ಕೇಂದ್ರ ಸರ್ಕಾರದ ಸ್ವರ್ಣ ಕಮಲ ಪ್ರಶಸ್ತಿಯನ್ನು ಗೆದ್ದಿತ್ತು. ಈ ಸಿನೆಮಾದ ನಿರ್ದೇಶಕ ತೆಲುಗು ಕವಿ ಪಟ್ಟಾಭಿರಾಮ ರೆಡ್ಡಿ. ಈ ಸಿನೆಮಾದಲ್ಲಿ ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡ್, ಖ್ಯಾತ ಪತ್ರಕರ್ತ ಪಿ ಲಂಕೇಶ್ ಮತ್ತು ಸ್ನೇಹಲತಾ ರೆಡ್ಡಿ ನಟಿಸಿದ್ದರು. ಬ್ರಾಹ್ಮಣ ಜಾತಿಯನ್ನು ನಿರಾಕರಿಸಿದ ನಾರಾಣಪ್ಪ (ಪಿ ಲಂಕೇಶ್) ಮೃತಪಟ್ಟ ಮೇಲೆ ಅವನ ಶವಸಂಸ್ಕಾರ ವಿಧಿಗಳನ್ನು ತಿರಸ್ಕರಿಸುವ ಬ್ರಾಹ್ಮಣರ ಮೂಲಕ ಒಂದು ಊರಿನ ಜಡ ಜಾತಿ ವ್ಯವಸ್ಥೆಯ ಕಥೆ ಹೇಳುವ ಈ ಸಿನೆಮಾ ಕನ್ನಡದ ಪ್ಯಾರಲೆಲ್ ಸಿನೆಮಾಗಳಿಗೆ ಆದಿ ಎಂದು ಬಣ್ಣಿಸಲಾಗುತ್ತದೆ.

ಸಂಸ್ಕಾರ ಚಲನಚಿತ್ರವನ್ನು ಒಳಗೋಂದಂತೆ, ಅನಂತಮೂರ್ತಿ ಕಥೆ-ಕಾದಂಬರಿ ಆಧಾರಿತೆ ಈ ಕೆಳಕಂಡ ಚಲನಚಿತ್ರಗಳು ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ  ಪ್ರದರ್ಶನಗೊಳ್ಳಲಿವೆ .

ಘಟಶ್ರಾದ್ಧ- ನಿರ್ದೇಶಕ: ಗಿರೀಶ್ ಕಾಸರವಳ್ಳಿ
ಅವಸ್ಥೆ- ನಿರ್ದೇಶಕ: ಕೃಷ್ಣ ಮಾಸಡಿ
ಮೌನಿ- ನಿರ್ದೇಶಕ: ಲಿಂಗದೇವರು
ಬರ - ನಿರ್ದೇಶಕ: ಎಂ ಎಸ್ ಸತ್ಯು
ಪ್ರಕೃತಿ - ನಿರ್ದೇಶಕ: ಪಂಚಾಕ್ಷರಿ

ಈ ಸಿನೆಮಾಗಳಲ್ಲದೆ, ಗಿರೀಶ್ ಕಾಸರವಳ್ಳಿ ನಿರ್ದೇಶನದ ರಾಷ್ಟ್ರಪ್ರಶಸ್ತಿ ಪಡೆದ ಸಾಕ್ಷ್ಯಚಿತ್ರ "ಯು ಆರ್ ಅನಂತಮೂರ್ತಿ: ನಾಟ್ ಎ ಬಯಾಗ್ರಫಿ, ಬಟ್ ಅ ಹೈಫೊಥೀಸಿಸ್" ಕೂಡ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com