ಸಿದ್ದು ಬಜೆಟ್ ನಲ್ಲಿ ಜಲಸಂಪನ್ಮೂಲ ಇಲಾಖೆಗೆ ಸಿಕ್ಕಿದ್ದೇನು..?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸೌಧದಲ್ಲಿ ಮಂಡಿಸಿದ 2015-16 ಸಾಲಿನ ಬಜೆಟ್ ನಲ್ಲಿ ಜಲಸಂಪನ್ಮೂಲ ಇಲಾಖೆಗೆ ವಿವಿಧ ಯೋಜನೆಗಳನ್ನು ಘೋಷಣೆ ಮಾಡಲಾಗಿದ್ದು...
ನಿರಾವರಿ ಯೋಜನೆಗಳು
ನಿರಾವರಿ ಯೋಜನೆಗಳು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸೌಧದಲ್ಲಿ ಮಂಡಿಸಿದ 2015-16 ಸಾಲಿನ ಬಜೆಟ್ ನಲ್ಲಿ ಜಲಸಂಪನ್ಮೂಲ ಇಲಾಖೆಗೆ ವಿವಿಧ ಯೋಜನೆಗಳನ್ನು ಘೋಷಣೆ ಮಾಡಲಾಗಿದ್ದು, ಆಯೋಜನೆಗಳ ಪೂರ್ಣ ಪಾಠ ಇಲ್ಲಿದೆ.

ಭಾರಿ ಮತ್ತು ಮಧ್ಯಮ ನೀರಾವರಿ

• ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 - ಮುಳವಾಡ, ಚಿಮ್ಮಲಗಿ, ಇಂಡಿ, ಮಲ್ಲಾಬಾದ್, ರಾಮಪುರ, ಕೊಪ್ಪಳ ಹಾಗೂ ಹೆರಕಲ್ ಏತನೀರಾವರಿ ಮತ್ತು ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ.
• ಸಿಂಗಟಾಲೂರು ಏತನೀರಾವರಿ ಯೋಜನೆ-5,768.04 ಕೋಟಿ ರೂ. ಪರಿಷ್ಕೃತ ಯೋಜನೆಯ ಅಂದಾಜಿನ ಅನುಮೋದನೆ.
• ಶಿಂಷಾ ಅಣೆಕಟ್ಟೆಯ ಬಲದಂಡೆ ನಾಲೆಯ ಆಧುನೀಕರಣ ಕಾಮಗಾರಿ.
• ರಾಮನಗರ ತಾಲ್ಲೂಕಿನ ಬಿಡದಿ ಕಸಬ ಹೋಬಳಿ ಹಾಗೂ ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಹೋಬಳಿಗೆ ನೀರು ತುಂಬಿಸುವ ಯೋಜನೆ ಜಾರಿ.
• ಕೆ.ಆರ್.ಎಸ್ ಜಲಾಶಯದ ಬೃಂದಾವನ ಉದ್ಯಾನವನವನ್ನು ವಿಶ್ವದರ್ಜೆಗೇರಿಸಲು ಕ್ರಮ.
• ಮೇಕೆದಾಟು ಮೇಲ್ಭಾಗದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸಮತೋಲನಾ ಜಲಾಶಯಗಳ ನಿರ್ಮಾಣ - ವಿವರ ಯೋಜನಾ ವರದಿ ತಯಾರಿಕೆ - 25 ಕೋಟಿ ರೂ.
• ರಾಜ್ಯದ ಕೆಲವು ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿನ ಕಬ್ಬು ಬೆಳೆಗಳಿಗೆ ಹನಿ ನೀರಾವರಿ ಪದ್ಧತಿಯನ್ನು ಪ್ರಾಯೋಗಿಕವಾಗಿ ಅಳವಡಿಕೆ.
• ಕಲಬುರ್ಗಿ, ರಾಯಚೂರು, ಕೊಪ್ಪಳ, ವಿಜಯಪುರ, ಹಾವೇರಿ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ 12 ಪ್ರಮುಖ ಯೋಜನೆಗಳಲ್ಲಿ ಸೂಕ್ಷ್ಮ ನೀರಾವರಿ ಯೋಜನೆ ಅಳವಡಿಕೆ.
• ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಹಾಗೂ ವಾಲ್ಮಿ ಸಂಸ್ಥೆಗಳ ಬಲವರ್ಧನೆ.
• ಟಿ.ನರಸೀಪುರ ತಾಲ್ಲೂಕಿನ ತಲಕಾಡು ಗ್ರಾಮದ ಹತ್ತಿರ ಕಾವೇರಿ ನದಿಗೆ ಕಟ್ಟಿರುವ ಮಾಧವಮಂತ್ರಿ ಅಣೆಕಟ್ಟಿನ ಆಧುನೀಕರಣ.
• ಹೇಮಾವತಿ ಅಣೆಕಟ್ಟೆಯ ಕೆಳಭಾಗದಲ್ಲಿ ಉದ್ಯಾನವನ ನಿರ್ಮಾಣ.
• ಚನ್ನಗಿರಿ ತಾಲ್ಲೂಕು ಸಂತೇಬೆನ್ನೂರು ಮತ್ತು ಕಸಬ ಹೋಬಳಿಯಲ್ಲಿ ಏತನೀರಾವರಿ ಯೋಜನೆ.

ಸಣ್ಣ ನೀರಾವರಿ
• ರಾಯಚೂರು, ಬಾಗಲಕೋಟೆ, ಚಿತ್ರದುರ್ಗ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಸರಣಿ ಪಿಕಪ್‍ಗಳ ನಿರ್ಮಾಣ - 100 ಕೋಟಿ ರೂ.
• `ಕೆರೆ ಅಭಿವೃದ್ಧಿ-ನಾಡಿನ ಶ್ರೇಯೋಭಿವೃದ್ಧಿ' ಕಾರ್ಯಕ್ರಮ - 191 ಕೆರೆಗಳ ಸಮಗ್ರ ಅಭಿವೃದ್ಧಿ - 192.30 ಕೋಟಿ ರೂ.
• ಕೆರೆಗಳ ಒತ್ತುವರಿ ತೆರವು ಅಭಿಯಾನ ಆಯೋಜನೆ ಮತ್ತು ಕೆರೆಗಳ ಪೋಷಕ ಕಾಲುವೆ/ರಾಜ ಕಾಲುವೆಗಳ ದುರಸ್ತಿ ಕಾರ್ಯ - 100 ಕೋಟಿ ರೂ.
• ಕೊಳಚೆ ನೀರು ಸಂಸ್ಕರಿಸಿ ಕೆರೆ ತುಂಬಿಸಲು ಕೆಳಕಂಡ ಏತ ನೀರಾವರಿ ಯೋಜನೆ-
1. ಕೋರಮಂಗಲ-ಚಲ್ಲಘಟ್ಟ ಕಣಿವೆಯಿಂದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ.
2. ದಕ್ಷಿಣಾ ಪಿನಾಕಿನಿ ಕಣಿವೆಯಿಂದ ಆನೇಕಲ್ ತಾಲ್ಲೂಕಿನ 60 ಕೆರೆಗಳಿಗೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com