ಅರಣ್ಯ ಮತ್ತು ಪರಿಸರ ಇಲಾಖೆಗೆ ದೊರೆತಿದ್ದು..!

ಪ್ರತಿ ತಾಲ್ಲೂಕಿನಲ್ಲಿಯೂ ಒಂದೊಂದು ಮಾದರಿ ಹಸಿರು ಗ್ರಾಮ ನಿರ್ಮಾಣವನ್ನು ಪ್ರೋತ್ಸಾಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...
ಅರಣ್ಯ ಇಲಾಖೆ (ಸಾಂದರ್ಭಿಕ ಚಿತ್ರ)
ಅರಣ್ಯ ಇಲಾಖೆ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಪ್ರತಿ ತಾಲ್ಲೂಕಿನಲ್ಲಿಯೂ ಒಂದೊಂದು ಮಾದರಿ ಹಸಿರು ಗ್ರಾಮ ನಿರ್ಮಾಣವನ್ನು ಪ್ರೋತ್ಸಾಹಿಸಲು ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು 2015-16ನೇ ಸಾಲಿನ ಬಜೆಟ್ ನಲ್ಲಿ ಹಸಿರು ಗ್ರಾಮ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಅರಣ್ಯ ಇಲಾಖೆಗೆ ಸಂಬಂಧಿಸಿದ ಮತ್ತಷ್ಟು ಯೋಜನೆಗಳ ಪಟ್ಟಿ ಇಲ್ಲಿವೆ.

• `ತಾಲ್ಲೂಕಿಗೊಂದು 'ಹಸಿರು ಗ್ರಾಮ' ಹೊಸ ಯೋಜನೆ - 3 ಕೋಟಿ ರೂ.
• ಅರಣ್ಯ ಮತ್ತು ಪರಿಸರ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು -
• `ಹಸಿರು ಶಾಲಾ ವನ' ಯೋಜನೆ ಜಾರಿ-2.25 ಕೋಟಿ ರೂ.
• `ಚಿಣ್ಣರ ವನದರ್ಶನ' ಯೋಜನೆ ಜಾರಿ-5 ಕೋಟಿ ರೂ.
• ಅರಣ್ಯವಾಸಿಗಳ ಸ್ಥಳಾಂತರ ಹಾಗೂ ಪುನರ್ವಸತಿ ಕಲ್ಪಿಸಲು `ಪುನರ್ವಸತಿ ಘಟಕ' ಸ್ಥಾಪನೆ.
• ಮಡಿವಾಳ ಕೆರೆ ಜೀವ ವೈವಿಧ್ಯ ಉದ್ಯಾನ ನಿರ್ಮಾಣ - 24.72 ಕೋಟಿ ರೂ.
• ಹವಾಮಾನ ಬದಲಾವಣೆ ಕುರಿತು ರಾಜ್ಯದ ಕ್ರಿಯಾಯೋಜನೆ ಜಾರಿಗೆ ಎಂಪ್ರಿ (EMPRI) ಸಂಸ್ಥೆಗೆ ರೂ. 2 ಕೋಟಿ ಸಹಾಯಧನ.
• ಮಹಾನಗರ ಪ್ರದೇಶಗಳಲ್ಲಿನ ಕೆರೆಗಳ ಸಂಸ್ಕರಣೆ, ಅಭಿವೃದ್ಧಿ, ಅಂತರ್ಜಲ ಹೆಚ್ಚಳ ಮತ್ತು ಸೌಂದರ್ಯ ವೃದ್ಧಿ - 5.56 ಕೋಟಿ ರೂ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com