
ಹಿಂದುಳಿದ ವರ್ಗಗಳ ಅಭಿವೃದ್ಧಿ
• ಖಾಸಗಿ ಅನುದಾನಿತ ವಸತಿನಿಲಯದ/ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಮಾಸಿಕ ಭೋಜನ ವೆಚ್ಚ ತಲಾ 100 ರೂ. ಹೆಚ್ಚಳ.
• ಹಿಂದುಳಿದ ವರ್ಗಗಳ 1000 ವಿದ್ಯಾರ್ಥಿಗಳಿಗೆ ಪೂರ್ಣಾವಧಿ ಪಿಎಚ್.ಡಿ, (Full Time) ವ್ಯಾಸಂಗ ವೇತನ/ಫೆಲೋಶಿಪ್ - 5 ಕೋಟಿ ರೂ.
• ಹಿಂದುಳಿದ ವರ್ಗಗಳ ಕೋಶದ (OBC Cell) ಬಲವರ್ಧನೆ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ - 50 ಲಕ್ಷ ರೂ.
• ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಾರ್ಗದರ್ಶನ ಶಾಖೆಯನ್ನು `ಮೀಸಲಾತಿ ತನಿಖಾ ಘಟಕ'ವನ್ನಾಗಿ ಮಾರ್ಪಾಡು.
• ಮಾಜಿ ಮುಖ್ಯಮಂತ್ರಿ ದಿ:ಡಿ.ದೇವರಾಜು ಅರಸು ಶತಮಾನೋತ್ಸವ ಆಚರಣೆ.
- `ಡಿ. ದೇವರಾಜ ಅರಸು'ರವರ ಹೆಸರಿನಲ್ಲಿ 100 ಸಂಖ್ಯಾಬಲದ 100 ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯಗಳ ಪ್ರಾರಂಭ.
- `ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರ' - 4 ಕೋಟಿ ರೂ.
- `ಡಿ.ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನ' - 10 ಕೋಟಿ ರೂ.
• ಇಲಾಖೆಯ ಎಲ್ಲಾ ವಿದ್ಯಾರ್ಥಿನಿಲಯಗಳ/ವಸತಿ ಶಾಲೆಗಳ ವಿದ್ಯಾರ್ಥಿಗಳ ಮಾಸಿಕ ಭೋಜನ ವೆಚ್ಚ ತಲಾ 100 ರೂ. ಹೆಚ್ಚಳ.
• ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಾಣ - 45 ಕೋಟಿ ರೂ.
• 2195 ವಿದ್ಯಾರ್ಥಿ ನಿಲಯಗಳಿಗೆ ಮೂಲಭೂತ ಸೌಕರ್ಯ - 35 ಕೋಟಿ ರೂ.
• 815 ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಸಿಸಿ ಕ್ಯಾಮರಾ ಅಳವಡಿಕೆ - 3 ಕೋಟಿ ರೂ.
• 46 ಅಲೆಮಾರಿ/ಅರೆ ಅಲೆಮಾರಿ ಜನಾಂಗದವರ ಸರ್ವತೋಮುಖ ಅಭಿವೃದ್ಧಿ ಕಾರ್ಯಕ್ರಮಗಳಿಗೆ - 50 ಕೋಟಿ ರೂ.
• ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು - 189 ಕೋಟಿ ರೂ.
• `ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ' - ಶೇಕಡಾ 15ರ ಸಹಾಯಧನದೊಂದಿಗೆ ಗರಿಷ್ಠ 2 ಲಕ್ಷ ರೂ.ಗಳ ಸಾಲ.
• ಸಾಂಪ್ರದಾಯಿಕ ವೃತ್ತಿದಾರ ಸಮುದಾಯಗಳಿಗೆ ವಾರ್ಷಿಕ ಶೇ.2ರ ಬಡ್ಡಿದರದಲ್ಲಿ ರೂ.2.00 ಲಕ್ಷಗಳ ಸಾಲ ಮತ್ತು ಶೇ.15 ರಷ್ಟು ಸಹಾಯಧನ.
• `ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ'ಕ್ಕೆ - 10 ಕೋಟಿ ರೂ.
• `ವಿದ್ಯಾಸಿರಿ ಯೋಜನೆ'-75,000 ವಿದ್ಯಾರ್ಥಿಗಳಿಗೆ ವಿಸ್ತರಣೆ-112.5 ಕೋಟಿ ರೂ.
• ಗಂಗಾ ಕಲ್ಯಾಣ ನೀರಾವರಿ ಯೋಜನೆ-ಘಟಕ ವೆಚ್ಚ 2 ಲಕ್ಷದ ವರೆಗೆ ಹೆಚ್ಚಳ.
• ಡೋಲು ಮತ್ತು ನಾದಸ್ವರ ಸಂಗೀತ ಕಲೆಗಳ ಪುನಶ್ಚೇತನ.
• ಹಿಂದುಳಿದ ವರ್ಗಗಳ ಕೆನೆಪದರ ಮಿತಿಯಲ್ಲಿ 6 ಲಕ್ಷಗಳಿಗೆ ಹೆಚ್ಚಳ.
ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಹಜ್
• ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯ ವಿಸ್ತರಣೆ
• ತಾಂತ್ರಿಕ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಕಲಿಕಾ ಸಾಮಗ್ರಿ ಖರೀದಿಗೆ ಸಹಾಯಧನ.
• ಮಾನ್ಯ ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಯೋಜನೆ ಜಾರಿ.
• ಎಂ.ಎಸ್.ಡಿ.ಪಿ. ಯೋಜನೆಯಡಿ 30 ವಿದ್ಯಾರ್ಥಿನಿಲಯ/ವಸತಿ ಶಾಲೆ/ ವಸತಿ ಕಾಲೇಜುಗಳ ಪ್ರಾರಂಭ. ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿನಿಲಯಗಳಲ್ಲಿ ಸಂಖ್ಯಾಬಲ ಹೆಚ್ಚಳ.
• 4 ಮೊರಾರ್ಜಿ ವಸತಿ ಶಾಲೆ, 2 ಮೊರಾರ್ಜಿ ಪದವಿ ಪೂರ್ವ ಕಾಲೇಜು, ಮೆಟ್ರಿಕ್ ನಂತರದ 5 ವಿದ್ಯಾರ್ಥಿನಿಲಯ ಮತ್ತು 2 ಅಲ್ಪಸಂಖ್ಯಾತರ ಮಾದರಿಯಲ್ಲಿ ವಸತಿ ಶಾಲೆಗಳ ಪ್ರಾರಂಭ.
• ಕಾಮೆಡ್-ಕೆ ಇಂದ ಆಯ್ಕೆಯಾಗುವ ವಿದ್ಯಾರ್ಥಿಗಳಿಗೂ ಅರಿವು ಸಾಲ ಯೋಜನೆಯ ವಿಸ್ತರಣೆ.
• ವಿದೇಶಿ ಉನ್ನತ ವ್ಯಾಸಂಗಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಪೋಷಕರ ಆದಾಯದನ್ವಯ ಗರಿಷ್ಟ 20/10 ಲಕ್ಷಗಳ ಶುಲ್ಕ ಪಾವತಿ.
• ಮೆಟ್ರಿಕ್ ಪೂರ್ವ/ಮೆಟ್ರಿಕ್ ನಂತರ ಮೊರಾರ್ಜಿ ದೇಸಾಯಿ ವಸತಿ ಶಾಲೆ/ಕಾಲೇಜು ಮತ್ತು ಅಲ್ಪಸಂಖ್ಯಾತ ವಸತಿ ಶಾಲೆಗಳಲ್ಲಿ ಭೋಜನ ವೆಚ್ಚ ತಲಾ 100 ರೂ. ಹೆಚ್ಚಳ.
• `ಕಲಿಕಾ ಮತ್ತು ಸಾಮಗ್ರಿ ಯೋಜನೆ'-350 ಉರ್ದು ಶಾಲೆ ಮತ್ತು 65 ವಸತಿ ಶಾಲೆ /ಕಾಲೇಜುಗಳಲ್ಲಿ ಇ-ಲರ್ನಿಂಗ್ ಸೌಲಭ್ಯ.
• ಅಲ್ಪಸಂಖ್ಯಾತರ ಹಾಸ್ಟೆಲ್/ವಸತಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲೀಷ್ ಮತ್ತು ಕಂಪ್ಯೂಟರ್ ತರಬೇತಿ.
• ವಕ್ಫ್ ಆಸ್ತಿಗಳ ಅತಿಕ್ರಮಣ ತೆರವು ಹಾಗೂ ಸಂರಕ್ಷಣೆಗೆ ಟಾಸ್ಕ್ ಫೋರ್ಸ್ ರಚನೆ.
• ಹಜರತ್ ಹಮೀದ್ ಷಾ ಮತ್ತು ಹಜರತ್ ಮೌಹಿದ್ ಷಾ ಖಾದರಿ ವಕ್ಫ್ ಸಂಸ್ಥೆಗೆ 1 ಕೋಟಿ ರೂ.
• ಮೋತಿನಗರ, ಮಲಬಾರ್ ಮುಸ್ಲಿಂ ಅಸೋಸಿಯೇಷನ್, ಬೆಂಗಳೂರು ನಗರ ಜಿಲ್ಲೆ ಇವರ ನೂತನ ಕಟ್ಟಡ ನಿರ್ಮಾಣ- 3 ಕೋಟಿ ರೂ.
• ಶ್ರೀರಂಗಪಟ್ಟಣದ ಗಂಜಾಂನ ಹಜರತ್ ಟಿಪ್ಪು ಸುಲ್ತಾನ್ ಸ್ಮಾರಕದ ಸಮಗ್ರ ಅಭಿವೃದ್ಧಿ-2 ಕೋಟಿ ರೂ.
• ರಾಜ್ಯದ ಜೈನ ದೇವಾಲಯ (ಬಸದಿ)ಗಳ ಜೀರ್ಣೋದ್ಧಾರ - 2 ಕೋಟಿ ರೂ.
• 2001 ರಿಂದ ಇಲ್ಲಿಯವರೆಗೆ ಪೂರ್ಣಗೊಳ್ಳದೇ ಇರುವ ಶಾದಿ ಮಹಲ್ ಮತ್ತು ಸಮುದಾಯ ಭವನಗಳಿಗೆ - 60 ಕೋಟಿ ರೂ. ವಸತಿ
• ನಿವೇಶನ ರಹಿತ ಬಡ ಫಲಾನುಭವಿಗಳಿಗೆ 20,000 ನಿವೇಶನಗಳ ಹಂಚಿಕೆ.
• ವಿವಿಧ ವಸತಿ ಯೋಜನೆಗಳಡಿ 4.58 ಲಕ್ಷ ಹೊಸ ಮನೆ ನಿರ್ಮಾಣ
- ಪ.ಜಾ/ಪ.ಪಂ. ಕುಟುಂಬಗಳಿಗೆ ಪೂರ್ಣ ಸಹಾಯಧನದೊಂದಿಗೆ 2.98 ಲಕ್ಷ ಮನೆಗಳ ನಿರ್ಮಾಣ - 3405 ಕೋಟಿ ರೂ. ಅವಕಾಶ.
• ಸಮಗ್ರ ಕೊಳಗೇರಿ ಅಭಿವೃದ್ಧಿ ನೀತಿ ಜಾರಿ.
• ಕರ್ನಾಟಕ ಕೊಳಗೇರಿ (ಸುಧಾರಣೆ ಮತ್ತು ನಿರ್ಮೂಲನೆ) ಅಧಿನಿಯಮ, 1973ಕ್ಕೆ ತಿದ್ದುಪಡಿ-ಯೋಜಿತ ವಿಧಾನದಲ್ಲಿ ಕೊಳಗೇರಿ ಉಪಕರ ವಸೂಲಿಗೆ ಅವಕಾಶ.
• ಧಾರಣೀಯ ವಸತಿ ನೀತಿಯಲ್ಲಿ ಅಗತ್ಯ ಪರಿಷ್ಕರಣೆ, ವಸತಿ ಸಂಬಂದಿತ ಕಾಯ್ದೆ, ನಿಯಮಗಳು, ವಿಧಾನಗಳ ಸರಳೀಕರಣ ಹಾಗೂ ಕರ್ನಾಟಕ ಗೃಹ ಮಂಡಳಿ ಅಧಿನಿಯಮ, 1962ಕ್ಕೆ ತಿದ್ದುಪಡಿ.
ಕಾರ್ಮಿಕ, ಉದ್ಯೋಗ ಮತ್ತು ತರಬೇತಿ
• ಯುವ ಯುಗ' - ಗ್ರಾಮೀಣ ಮತ್ತು ನಗರ ಪ್ರದೇಶದ ಯುವ ಜನಾಂಗಕ್ಕೆ ವಿವಿಧ ಕೌಶಲ್ಯ ತರಬೇತಿ ನೀಡಲು ಹೊಸ ಕಾರ್ಯಕ್ರಮ ಜಾರಿ - 10 ಕೋಟಿ ರೂ.
• ಆಯ್ದ ಐ.ಟಿ.ಐ.ಗಳಲ್ಲಿ ಬಹುಕೌಶಲ್ಯ ತರಬೇತಿ ಹಾಗೂ ಮಲ್ಟಿ ಟ್ರೇಡ್‍ಗಳ ಅನುಷ್ಠಾನ. 3.5 ಕೋಟಿ ರೂ.
• ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಹೆಚ್ಚುವರಿ ವೃತ್ತಿಗಳ ಪ್ರಾರಂಭ - 12.5 ಕೋಟಿ ರೂ.
• 22 ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಸಿಸಿಟಿವಿ ಅಳವಡಿಕೆ - 50 ಲಕ್ಷ ರೂ.
• ನೂತನ ಕಾರ್ಮಿಕ ನೀತಿ ಜಾರಿ.
• ಅಸಂಘಟಿತ ಕಾರ್ಮಿಕ ವಲಯಕ್ಕೆ `ಸ್ಮಾರ್ಟ್ ಕಾರ್ಡ್' ವಿತರಣೆಗಾಗಿ ಏಕಗವಾಕ್ಷಿ ವ್ಯವಸ್ಥೆ ಜಾರಿ - 10 ಕೋಟಿ ರೂ.ಗಳು.
• `ಬಾಯ್ಲರ್ ಮೆಟೀರಿಯಲ್ ಪರೀಕ್ಷೆ ಮತ್ತು ತರಬೇತಿ ಕೇಂದ್ರ'ದ ಸ್ಥಾಪನೆ.
Advertisement