ಮಹಿಳಾ-ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನರ-ಹಿರಿಯ ನಾಗರೀಕರ ಸಬಲೀಕರಣ

2015-16ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಳನ್ನು ಘೋಷಣೆ ಮಾಡಲಾಗಿದ್ದು...
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಗಳು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಗಳು
Updated on

ಬೆಂಗಳೂರು: 2015-16ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಳನ್ನು ಘೋಷಣೆ ಮಾಡಲಾಗಿದ್ದು, ವಿಕಲ ಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣಕ್ಕಾಗಿಯೂ ಕ್ರಮಗಳನ್ನು ಕೈಗೊಳ್ಳಲಾಗಿದೆ.

• ವಿದ್ಯುನ್ಮಾನ ಮಾಹಿತಿ ನಿರ್ವಹಣಾ (EMIS) ವ್ಯವಸ್ಥೆಯ ಅಭಿವೃದ್ಧಿ -2 ಕೋಟಿ ರೂ.
• ಅಂಗನವಾಡಿ ಕಾರ್ಯಕರ್ತೆಯರಿಗೆ - ರೂ.500 ಮತ್ತು ಸಹಾಯಕಿಯರಿಗೆ ರೂ.250 ಗೌರವಧನ ಹೆಚ್ಚಳ.
• ಆಸಿಡ್ ದಾಳಿಗೊಳಗಾದ ಮಹಿಳೆಯರಿಗಾಗಿ ನಿಧಿ ಸ್ಥಾಪನೆ - 5 ಕೋಟಿ ರೂ. ಚಿಕಿತ್ಸೆಗಾಗಿ ಗರಿಷ್ಠ 2 ಲಕ್ಷ ರೂ ತುರ್ತು ಪರಿಹಾರ, ಮರಣಹೊಂದಿದಲ್ಲಿ 1 ಲಕ್ಷ ರೂ. ಪರಿಹಾರ.
• ಅಂಗನವಾಡಿ ಕೇಂದ್ರಗಳಲ್ಲಿ ಸೌರಶಕ್ತಿ ದೀಪಗಳು, ಫ್ಯಾನ್‍ಗಳ ಅಳವಡಿಕೆ - 5 ಕೋಟಿ ರೂ.
• ಹೆಣ್ಣುಮಕ್ಕಳ ಶೋಷಣೆ ತಡೆ, ಬಾಲ್ಯ ವಿವಾಹ ನಿಷೇಧ, ಅಪೌಷ್ಟಿಕತೆ ನಿವಾರಣೆ ಒಳಗೊಂಡ ಹೆಣ್ಣುಮಕ್ಕಳ ನೀತಿ ಜಾರಿ.
• ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 68.22 ಕೋಟಿ ರೂ.ಗಳಲ್ಲಿ ಈ ಕೆಳಕಂಡ ಕಾರ್ಯಕ್ರಮಗಳು:
• ಮಾಜಿ ದೇವದಾಸಿಯರಿಗೆ ಬ್ಯಾಂಕ್ ಮೂಲಕ ನೀಡುತ್ತಿರುವ ಸಾಲದ ಬದಲು ಸಹಾಯಧನ 20,000 ರೂ.ಗಳಿಗೆ ಹೆಚ್ಚಳ.
• ಮಾಜಿ ದೇವದಾಸಿಯರ ಮಾಸಾಶನ - 1,000 ರೂ.ಗಳಿಗೆ ಹೆಚ್ಚಳ.
• 11,818 ನಿವೇಶನವುಳ್ಳ ವಸತಿ ರಹಿತ ಮಾಜಿ ದೇವದಾಸಿಯರಿಗೆ ವಸತಿ ಸೌಲಭ್ಯ.
• `ಉದ್ಯೋಗಿನಿ' ಯೋಜನೆಯಡಿ 15,000 ಫಲಾನುಭವಿಗಳಿಗೆ ಸಹಾಯಧನ.
• ಸ್ತ್ರೀಶಕ್ತಿ ಸಂಘಗಳಿಗೆ ನೀಡುತ್ತಿರುವ ಬಡ್ಡಿರಹಿತ ಸಾಲ 2 ಲಕ್ಷ ರೂ.ಗಳಿಗೆ ಹೆಚ್ಚಳ
• `ಚೇತನ' ಯೋಜನೆ ಜಾರಿ-1000 ಲೈಂಗಿಕ ಕಾರ್ಯಕರ್ತೆಯರಿಗೆ ತಲಾ 20,000 ರೂ.ಗಳ ಆರ್ಥಿಕ ಸೌಲಭ್ಯ.
• ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ರಾಜ್ಯ ನೀತಿ ಜಾರಿ - ಆದಾಯೋತ್ಪನ್ನ ಚಟುವಟಿಕೆಗಳಿಗೆ 1,000 ಫಲಾನುಭವಿಗಳಿಗೆ 20,000 ರೂ.ಗಳ ಪ್ರೋತ್ಸಾಹಧನ.
• ಶ್ರೀ ನಿಡುಮಾಮಿಡಿ ಮಠದ ಮಹಿಳಾ ಸಾಧನಾಶ್ರಮದ ಕಟ್ಟಡ ನಿರ್ಮಾಣ ಹಾಗೂ ಸೌಲಭ್ಯಕ್ಕೆ - 2 ಕೋಟಿ ರೂ.
• ವಿಕಲಚೇತನ ಗ್ರಾಮೀಣ ಪುನರ್ವಸತಿ ಯೋಜನೆಯಡಿ ವಿ.ಆರ್.ಡಬ್ಲ್ಯೂರವರಿಗೆ ರೂ.2,000ಕ್ಕೆ ಮತ್ತು ಎಂ.ಆರ್.ಡಬ್ಲ್ಯೂರವರಿಗೆ ರೂ.5,000ಕ್ಕೆ ಗೌರವ ಧನ ಹೆಚ್ಚಳ. 3 ಜಿಲ್ಲೆಗಳಿಗೆ ಒಬ್ಬರಂತೆ ರೂ.13,000 ಗೌರವಧನದೊಂದಿಗೆ 10 ಜಿಲ್ಲಾ ಸಂಯೋಜಕರ ನೇಮಕ.
• ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರಗಳು - ಇನ್ನೂ 16 ಜಿಲ್ಲೆಗಳಿಗೆ ವಿಸ್ತರಣೆ.
• ವಿಕಲಚೇತನರ ಸ್ವಯಂ ಉದ್ಯೋಗಕ್ಕಾಗಿ ದಿನಾಂಕ 31.03.2014 ರವರೆಗೆ ನೀಡಲಾದ ಅಸಲು ಮತ್ತು ಬಾಕಿ ಬಡ್ಡಿ ಮನ್ನಾ.
• 46 ಶ್ರವಣದೋಷ ಶಾಲೆಗಳಲ್ಲಿನ 5, 6 ಮತ್ತು 7ನೇ ತರಗತಿಯ ಮಕ್ಕಳಿಗೆ ಉಪಗ್ರಹ ಆಧಾರಿತ ಶಿಕ್ಷಣ ಜಾರಿ - 3.63 ಕೋಟಿ ರೂ.
• 30 ಜಿಲ್ಲೆಗಳಲ್ಲಿ `ವಿಕಲಚೇತನರ ಸಹಾಯವಾಣಿ' ಕೇಂದ್ರ ಪ್ರಾರಂಭ-2.15 ಕೋಟಿ ರೂ.ಗಳ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com