ಸ್ವಚ್ಛಭಾರತ್, ಕ್ಲೀನ್‍ಗಂಗಾಕ್ಕೆ ಕಾರ್ಪೋರೇಟ್ ಟಚ್

ನೀವು ಬೆಣ್ಣೆ ಕೊಟ್ರೆ ನಾವ್ ತುಪ್ಪ ಕೊಡ್ತೀವಿ' ಅನ್ನೋ ಪಾಲಿಸಿಯನ್ನು ಜೇಟ್ಲಿ ಗಟ್ಟಿಯಾಗಿ ಪ್ರತಿಪಾದಿಸಿದ್ದಾರೆ...
ಕ್ಲೀನ್‍ಗಂಗಾ (ಸಂಗ್ರಹ ಚಿತ್ರ)
ಕ್ಲೀನ್‍ಗಂಗಾ (ಸಂಗ್ರಹ ಚಿತ್ರ)

`ನೀವು ಬೆಣ್ಣೆ ಕೊಟ್ರೆ ನಾವ್ ತುಪ್ಪ ಕೊಡ್ತೀವಿ' ಅನ್ನೋ ಪಾಲಿಸಿಯನ್ನು ಜೇಟ್ಲಿ ಗಟ್ಟಿಯಾಗಿ ಪ್ರತಿಪಾದಿಸಿದ್ದಾರೆ. ಸ್ವಚ್ಛಭಾರತ ಕೋಶ ಮತ್ತು ಗಂಗಾ ಶುದ್ಧಿ ನಿಧಿಗೆ ನೀವೇನಾದ್ರೂ ದಾನ ಕೊಟ್ರೆ ಅದಕ್ಕೆ ಟ್ಯಾಕ್ಸ್ ಫ್ರೀ.

ಆದಾಯ ತೆರಿಗೆಯ 80ಜಿ ಸೆಕ್ಷನ್ ಅಡಿ ಸರ್ಕಾರ ಈ ಆಫರ್ ಕೊಟ್ಟಿದೆ. ಭಾರತವನ್ನು ಸ್ವಚ್ಛ ಮಾಡುವ ಉದ್ದೇಶ ಮಾತ್ರ ಈ ಆಫರ್ ಹಿಂದೆ ಇಲ್ಲ, ದೊಡ್ಡ ದೊಡ್ಡ ಕಂಪನಿಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂಬ ಆಶಯ ಜೇಟ್ಲಿಯವರದ್ದು. ಸರ್ಕಾರಿ ಕೆಲ್ಸಕ್ಕೆ ಕಾರ್ಪೋರೇಟ್ ಟಚ್. ಈ ಮೂಲಕ `ಕಾರ್ಪೋರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆ' (ಸಿಎಸ್‍ಆರ್) ಇನ್ನೂ ಹೆಚ್ಚಲಿದೆ.

ಇಲ್ಲಿಯ ತನಕ ಕಾರ್ಪೋರೇಟ್ ಕಂಪನಿಗಳು ವಾರ್ಷಿಕ ಆದಾಯದಲ್ಲಿ ಶೇ.2ರಷ್ಟನ್ನು ಸಾಮಾಜಿಕ ಕೆಲಸಗಳಿಗೆ ವಿನಿಯೋಗಿಸಬೇಕಿತ್ತು. ಇದು ಕೂಡ ತೆರಿಗೆ ವ್ಯಾಪ್ತಿಗೊಳಪಡುತ್ತಿತ್ತು. ಒಂದುವೇಳೆ ಕಂಪನಿಗಳು ಸ್ವಚ್ಛಭಾರತ್ ಯೋಜನೆಗೆ ಗಂಗಾ ಶುದ್ಧೀಕರಣ ನಿಧಿಗೆ ಸಿಎಸ್ ಆರ್ ಹಣ ನೀಡುವುದಾದರೆ ಅದಕ್ಕೆ ಶೇ.100ರಷ್ಟು ತೆರಿಗೆ ವಿನಾಯಿತಿ ಸಿಗಲಿದೆ. ವಾರ್ಷಿಕ 5 ಕೋಟಿ ರು. ಲಾಭ ಅಥವಾ 500 ಕೋಟಿ ವ್ಯವಹಾರ ಹೊಂದಿದ ಸಂಸ್ಥೆ ಸಿಎಸ್‍ಆರ್ ಗೆ ಒಳಪಡುತ್ತವೆ. ಕ್ಲೀನ್ ಗಂಗಾ:ದೇವನದಿ ಗಂಗೆಯ ಶುದ್ಧೀಕರಣಕ್ಕೆ ಈಗಾಗಲೇ `ನಮಾಮಿ ಗಂಗಾ ಮಿಶನ್' ಸಜ್ಜಾಗಿದ್ದು ಗೊತ್ತೇ ಇದೆ. ಈ ಪ್ರಕ್ರಿಯೆಗೂ 4,173 ಕೋಟಿ ರು. ಮೀಸಲಿರಿಸಲಾಗಿದೆ. ಉತ್ತರ ಭಾರತ ಅಷ್ಟೇ ಅಲ್ಲ, ದಕ್ಷಿಣ ಭಾರತದ ಕಾರ್ಪೋರೇಟ್ ಸಂಸ್ಥೆಗಳೂ ಸಿಎಸ್‍ಆರ್ ಹಣವನ್ನು ಗಂಗಾ ಶುದ್ಧಿಗೆ ನೀಡಬಹುದು.

ಏನು ಲಾಭ?
ಖಾಸಗಿರಂಗವನ್ನೂ `ಸ್ವಚ್ಛಭಾರತ್'ಗೆ ಎಳೆದು ತಂದರೆ ಈ ಸರ್ಕಾರಿ ಯೋಜನೆಗೆ ಇನ್ನಷ್ಟು ಬಲ. ಎನ್‍ಜಿಒ ಸೇರಿದಂತೆ ಬೇರೇ ಬೇರೆ ಸಾಮಾಜಿಕ ಸಂಸ್ಥೆಗಳ ಪಾಲಾಗುತ್ತಿದ್ದ ಹಣ ಸರ್ಕಾರಿ ಯೋಜನೆಗೆ ಬಳಕೆ. ಎರಡೂ ಯೋಜನೆಗಳ ರಿಸಲ್ಟ್ ಶೀಘ್ರವೇ ಕೈಸೇರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com