ಉದ್ದೇಶ ಒಳ್ಳೆಯದೇ, ಮಾರ್ಗಸೂಚಿ ಸರಿಯಿಲ್ಲ: ಮನಮೋಹನ್ ಸಿಂಗ್

ಜೇಟ್ಲಿ ಅವರ ಚೊಚ್ಚಲ ಪೂರ್ಣ ಬಜೆಟ್‍ಗೆ ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಮನಮೋಹನ್ ಸಿಂಗ್‍ರಿಂದ `ಥಂಬ್ಸ್ ಅಪ್' ಸಿಕ್ಕಿಲ್ಲ...
ಮನಮೋಹನ್ ಸಿಂಗ್ (ಸಂಗ್ರಹ ಚಿತ್ರ)
ಮನಮೋಹನ್ ಸಿಂಗ್ (ಸಂಗ್ರಹ ಚಿತ್ರ)

ನವದೆಹಲಿ: ಜೇಟ್ಲಿ ಅವರ ಚೊಚ್ಚಲ ಪೂರ್ಣ ಬಜೆಟ್‍ಗೆ ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಮನಮೋಹನ್ ಸಿಂಗ್‍ರಿಂದ `ಥಂಬ್ಸ್ ಅಪ್' ಸಿಕ್ಕಿಲ್ಲ. ಸಚಿವ ಜೇಟ್ಲಿ ಅವರ ಉದ್ದೇಶ ಒಳ್ಳೆಯದೇ ಆಗಿದ್ದರೂ, ಸರಿಯಾದ ಮಾರ್ಗಸೂಚಿ ಅನುಸರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಸಿಂಗ್ ಹೇಳಿದ್ದೇನು?
ಜೇಟ್ಲಿ ಅವರು ಅದೃಷ್ಟವಂತ ವಿತ್ತ ಸಚಿವ. ಅವರು ಸಚಿವರಾಗುತ್ತಿದ್ದಂತೆ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿದೆ. ಇದಕ್ಕೆ ಕಾರಣ ಅವರ ಕೆಲಸವಲ್ಲ, ಬದಲಿಗೆ ಜಾಗತಿಕ ಆರ್ಥಿಕ ಸ್ಥಿತಿ. ಈ ಬಜೆಟ್‍ನಲ್ಲಿ ಜೇಟ್ಲಿ ಅವರು ಬೃಹತ್ ಆರ್ಥಿಕ ಚೌಕಟ್ಟನ್ನು ಸ್ಥಿರಗೊಳಿಸಲು ಇನ್ನಷ್ಟು ಕ್ರಮ ಕೈಗೊಳ್ಳಬಹುದಿತ್ತು. ಆ ಮೂಲಕ ವಿತ್ತೀಯ ಸಂಚಯನದತ್ತ ಹೆಜ್ಜೆ  ಹಾಕಬಹುದಿತ್ತು. ಅವರ ಬಜೆಟ್‍ನಲ್ಲಿ ಕೆಲವೊಂದು ಉತ್ತಮ ಯೋಜನೆಗಳು ಹಾಗೂ ಉದ್ದೇಶಗಳಿವೆ.

ಆದರೆ ಉದ್ದೇಶಗಳನ್ನು ಘೋಷಿಸಿದಷ್ಟೇ, ಅದರ ಅನುಷ್ಠಾನವೂ ಮುಖ್ಯವಾಗುತ್ತದೆ. ಆದರೆ ನನಗೆಲ್ಲೂ ಇದಕ್ಕೆ ಸರಿಯಾದ ಮಾರ್ಗಸೂಚಿ ಕಂಡುಬರುತ್ತಿಲ್ಲ ಎಂದಿದ್ದಾರೆ ಮನಮೋಹನ್‍ಸಿಂಗ್. ಜತೆಗೆ, ಕೃಷಿ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸುವಲ್ಲಿಯೂ ಜೇಟ್ಲಿ ವಿಫಲರಾಗಿದ್ದಾರೆ ಎನ್ನುವುದು ಸಿಂಗ್ ಅಂಬೋಣ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com