
`ಮೇಕ್ ಇನ್ ಇಂಡಿಯಾ' ದನಿ ಗಟ್ಟಿಯಾಗಿದೆ. ಲೋಹದ ಬಿಡಿಭಾಗಗಳು, ಇನ್ಸುಲೇಟೆಡ್ ವೈರ್ ಮತ್ತು ಕೇಬಲ್, ರೆಫ್ರಿಜರೇಟರ್ ಕಂಪ್ರೇಸರ್ ಭಾಗಗಳು, ಸಲ್ಫರಿಕ್ ಆ್ಯಸಿಡ್‍ಯುಕ್ತ ರಸಗೊಬ್ಬರ ಉತ್ಪಾದನೆ ಮೇಲೆ ತೆರಿಗೆ ಕಡಿತಗೊಳಿಸಿದ್ದಷ್ಟೇ ಅಲ್ಲ, ಪ್ರಾದೇಶಿಕ ಉತ್ಪನ್ನಗಳ ಮೇಲೆ ಹೆಚ್ಚು ಕೃಪೆ ತೋರಲಾಗಿದೆ. ಎಲ್ ಇಡಿ ಬಲ್ಬು ಇನ್ನಷ್ಟು ಹೊಳಪು ಎಲ್ ಇಡಿ ಡ್ರೈವರ್, ಎಲ್‍ಇಡಿ ಬಲ್ಬುಗಳ ಮೇಲಿದ್ದ ಶೇ. 4ರಷ್ಟಿದ್ದ ತೆರಿಗೆಗೆ ಸಂಪೂರ್ಣ ವಿನಾಯಿತಿ. ಸೋಲರ್ ವಾಟರ್ ಹೀಟರ್ ಮೇಲೆ ಶೇ.12.5ರಷ್ಟಿದ್ದ ತೆರಿಗೆಗೂ ವಿನಾಯಿತಿ ಭಾಗ್ಯ ಸಿಕ್ಕಿದೆ.
ದೂರವಾಣಿ ಸಂಬಂಧಿತ ಕೇಬಲ್‍ಗಳ ಮೇಲಿದ್ದ ಶೇ.7.5 ತೆರಿಗೆಯನ್ನು ಸಂಪೂರ್ಣ ಕಡಿತಗೊಳಿಸಲಾಗಿದೆ. ಕಚ್ಚಾ ಕಬ್ಬಿಣ, ಉಕ್ಕು, ತಾಮ್ರ, ಹಿತ್ತಾಳೆ ಹಾಗೂ ಅಲ್ಯೂಮಿನಿಯಂ ಮೇಲಿದ್ದ ಶೇ. 4ರಷ್ಟು ತೆರಿಗೆಯನ್ನು ಶೇ.2ಕ್ಕೆ ಇಳಿಸಲಾಗಿದೆ. ಲೇಥ್ ಯಂತ್ರಗಳ ಮೇಲೆ ಶೇ.7.5ರಷ್ಟಿದ್ದ ತೆರಿಗೆಯನ್ನು ಶೇ.2.5ಕ್ಕೆ ಇಳಿಸಲಾಗಿದೆ. ಟ್ಯಾಬ್ಲೆಟ್ ಕಂಪ್ಯೂಟರ್‍ಗಳ
ಮೇಲಿದ್ದ ಶೇ.12ರಷ್ಟಿದ್ದ ತೆರಿಗೆ ಭಾರವನ್ನು ಶೇ.2ಕ್ಕೆ ಇಳಿಸಲಾಗಿದೆ.
ಡಿಜಿಟಲ್ ಇಂಡಿಯಾ
ಮೋದಿ ಕನಸಾದ ಡಿಜಿಟಲ್ ಇಂಡಿಯಾ ಸಾಕಾರಕ್ಕೆ ಜೇಟ್ಲಿ ಬಜೆಟ್ ಪೆಟ್ಟಿಗೆಯಲ್ಲಿ ಉತ್ತಮ ಸ್ಥಾನ ಕಲ್ಪಿಸಲಾಗಿದೆ. ಜನ್‍ಧನ್, ಆಧಾರ್, ಮೊಬೈಲ್ ಮತ್ತು ಸರಕು, ಸೇವಾ ತೆರಿಗೆಗಳು ಡಿಜಿಟಲ್ ಹಾದಿಯಲ್ಲಿ ಸುಧಾರಣೆ ಕಾಣಲಿವೆ. ಇವುಗಳಿಂದಾಗಿ ಸೋರಿಕೆ ಇಲ್ಲದೆ ಸರ್ಕಾರದ ಯೋಜನೆ ಅನುಷ್ಠಾನಕ್ಕೆ ತರಬಹುದಾಗಿದೆ. ಇದಲ್ಲದೆ ಜಾಗತಿಕ ಮಟ್ಟದ ಐಟಿ ಹಬ್ ನಿರ್ಮಾಣಕ್ಕಾಗಿ ರು.150 ಕೋಟಿ, ತಂತ್ರಜ್ಞಾನ ವಲಯದಲ್ಲಿ ಹೊಸ ಉದ್ದಿಮೆದಾರರನ್ನು ಪ್ರೊತ್ಸಾಹಿಸಲು ರು.1000 ಕೋಟಿ ಮೀಸಲಿಡಲಾಗಿದೆ.
ಏಳೂವರೆ ಲಕ್ಷ ಕಿಮೀಗಳ ರಾಷ್ಟ್ರೀಯ ಆಪ್ಟಿಕಲ್ ಫೈಬರ್ ಪ್ರೊಗ್ರಾಂನಲ್ಲಿ ಎರಡೂವರೆ ಲಕ್ಷ ಹಳ್ಳಿಗಳನ್ನು ಸೇರಿಸಿಕೊಂಡು, ದೂರಸಂಪರ್ಕ ಇಲಾಖೆ ನಿರ್ಣಯಿಸಿದ ವೆಚ್ಚ ಮರುಪಾವತಿಸಿದಲ್ಲಿ ಇಚ್ಛೆ ತೋರುವ ರಾಜ್ಯಗಳಿಗೆ ಯೋಜನೆ ಜಾರಿಗೆ ಅವಕಾಶ ನೀಡಿ ಜಾರಿ ಪ್ರಕ್ರಿಯೆಯನ್ನು ವೇಗಗೊಳಿಸಲಾಗುವುದು. ಈ ವಿಷಯವಾಗಿ ಈಗಾಗಲೇ ಆಂಧ್ರಪ್ರದೇಶ ತನ್ನ ಆಸಕ್ತಿ ತೋರಿದೆ. ಇದು ದೇಶದಲ್ಲೇ ಮೊದಲ ಬಾರಿಗೆ ಈ ರಾಜ್ಯದಲ್ಲಿ ಆರಂಭವಾಗಲಿದೆ.
ಗಂಗೆ ಶುದ್ಧಿಗೆ ಹಣದ ಹೊಳೆ
ಕೇಂದ್ರದ ಹೆಚ್ಚಿನ ಸಚಿವಾಲಯಗಳಿಗೆ ಬಜೆಟಲ್ಲಿ ಭರಪೂರ ಕೊಡುಗೆಗಳು ಇದ್ದರೆ, ಉಮಾ ಭಾರತಿಯವರ ಜಲಸಂಪನ್ಮೂಲ ಖಾತೆಗೆ ನೀಡಲಾಗುತ್ತಿರುವ ಮುಂಗಡ ಪತ್ರ ಕೊಡುಗೆಗೆ ಕತ್ತರಿ ಬಿದ್ದಿದೆ. ಆದರೆ ಅದಕ್ಕೆ ನೀಡಲಾಗುವ ವಿತ್ತೀಯ ನೆರವನ್ನು ಗಂಗಾ ಶುದಿಟಛೀಕರಣ ಯೋಜನೆಗೆ ನೀಡಲಾಗಿದೆ. ಪ್ರಧಾನಿ ಮೋದಿಯವರ ಅಚ್ಚುಮೆಚ್ಚಿನ ಯೋಜನೆಗೆ ರು.2,100 ಕೋಟಿ ನಿಗದಿಗೊಳಿಸಲಾಗಿದೆ. 2014-15ನೇ ಸಾಲಿನ ಪರಿಷ್ಕೃತ ಬಜೆಟ್‍ನಲ್ಲಿ ರು.600 ಕೋಟಿ ನಿಗದಿ ಮಾಡಲಾಗಿತ್ತು. ಜಲಸಂಪನ್ಮೂಲ ಖಾತೆಗೆ ರು4,232.43 ಕೋಟಿ ನಿಗದಿಪಡಿಸಲಾಗಿದೆ.
ಜೇಟ್ಲಿ ಬೆನ್ನು ಹತ್ತಿದ ನೋವು
ಕಳೆದ ವರ್ಷದ ಸಲಿಗೆಯಲ್ಲಿಯೇ ಈ ವರ್ಷವೂ ನೋವು ಹಣಕಾಸು ಸಚಿವರ ಬೆನ್ನು ಹತ್ತಿ ಕುಳಿತಿತ್ತು. ಬಜೆಟ್ ಪ್ರತಿಯನ್ನು ನಿಂತು ಓದುತ್ತಿದ್ದ ಜೇಟ್ಲಿ ಅವರ ಪಡಿಪಾಟಲನ್ನು ಕಂಡ
ಸ್ಪೀಕರ್ ಸುಮಿತ್ರಾ ಮಹಾಜನ್, `ಕುಳಿತೇ ಓದಿ, ಪರವಾಗಿಲ್ಲ' ಎಂದರು. ಸೌಜನ್ಯಯುತವಾಗಿಯೇ ಪ್ರತಿಕ್ರಿಯಿಸಿದ ಜೇಟ್ಲಿ, `ಅಗತ್ಯವೆನಿಸಿದಾಗ ಕೂರುತ್ತೇನೆ' ಎಂದು ತಮ್ಮ ಕೆಲಸ ಮುಂದುವರಿಸಿದರು. ಆದರೆ 20 ನಿಮಿಷಗಳಲ್ಲೇ ಅವರ ಕಾಲು ಹಾಗೂ ಬೆನ್ನು ವಿಶ್ರಾಂತಿ ಕೋರಿದ್ದರಿಂದ, ನಂತರದಲ್ಲಿ ಸ್ಪೀಕರ್ ಸಲಹೆಯಂತೆ ಕುಳಿತೇ ಬಜೆಟ್ ಬಂಡವಾಳ
ಅರುಹಿದರು. ಕಳೆದ ವರ್ಷ ಬೆನ್ನುನೋವಿನ ಕಾರಣ 2 ಗಂಟೆಗಳ ಭಾಷಣವನ್ನು ಕುರ್ಚಿಯ ಮೊರೆ ಹೋಗಿಯೇ ಮಾಡಿದ್ದರು. ನಂತರದ ದಿನಗಳಲ್ಲಿ ತಿಂಗಳ ಕಾಲ ಆಸ್ಪತ್ರೆ ಸೇರಿದ್ದ ಜೇಟ್ಲಿ, ಸಕ್ಕರೆ ಕಾಯಿಲೆಗೆ ಹಾಗೂ ಗ್ಯಾಸ್ಟಿಕ್‍ಗೆ ಬೈಪಾಸ್ ಸರ್ಜರಿಗೊಳಗಾಗಿದ್ದರು.
ಡಿಜಿಟಲ್ ಇಂಡಿಯಾ
ಮೋದಿ ಕನಸಾದ ಡಿಜಿಟಲ್ ಇಂಡಿಯಾ ಸಾಕಾರಕ್ಕೆ ಜೇಟ್ಲಿ ಬಜೆಟ್ ಪೆಟ್ಟಿಗೆಯಲ್ಲಿ ಉತ್ತಮ ಸ್ಥಾನ ಕಲ್ಪಿಸಲಾಗಿದೆ. ಜನ್‍ಧನ್, ಆಧಾರ್, ಮೊಬೈಲ್ ಮತ್ತು ಸರಕು, ಸೇವಾ ತೆರಿಗೆಗಳು ಡಿಜಿಟಲ್ ಹಾದಿಯಲ್ಲಿ ಸುಧಾರಣೆ ಕಾಣಲಿವೆ. ಇವುಗಳಿಂದಾಗಿ ಸೋರಿಕೆ ಇಲ್ಲದೆ ಸರ್ಕಾರದ ಯೋಜನೆ ಅನುಷ್ಠಾನಕ್ಕೆ ತರಬಹುದಾಗಿದೆ. ಇದಲ್ಲದೆ ಜಾಗತಿಕ ಮಟ್ಟದ ಐಟಿ ಹಬ್ ನಿರ್ಮಾಣಕ್ಕಾಗಿ ರು.150 ಕೋಟಿ, ತಂತ್ರಜ್ಞಾನ ವಲಯದಲ್ಲಿ ಹೊಸ ಉದ್ದಿಮೆದಾರರನ್ನು ಪ್ರೊತ್ಸಾಹಿಸಲು ರು1000 ಕೋಟಿ ಮೀಸಲಿಡಲಾಗಿದೆ. ಏಳೂವರೆ ಲಕ್ಷ ಕಿಮೀಗಳ ರಾಷ್ಟ್ರೀಯ ಆಪ್ಟಿಕಲ್ ಫೈಬರ್ ಪ್ರೋಗ್ರಾಂನಲ್ಲಿ ಎರಡೂವರೆ ಲಕ್ಷ ಹಳ್ಳಿಗಳನ್ನು ಸೇರಿಸಿಕೊಂಡು, ದೂರಸಂಪರ್ಕ ಇಲಾಖೆ ನಿರ್ಣಯಿಸಿದ ವೆಚ್ಚ ಮರುಪಾವತಿಸಿದಲ್ಲಿ ಇಚ್ಛೆ ತೋರುವ ರಾಜ್ಯಗಳಿಗೆ ಯೋಜನೆ ಜಾರಿಗೆ ಅವಕಾಶ ನೀಡಿ ಜಾರಿ ಪ್ರಕ್ರಿಯೆಯನ್ನು ವೇಗಗೊಳಿಸಲಾಗುವುದು. ಈ ವಿಷಯವಾಗಿ ಈಗಾಗಲೇ ಆಂಧ್ರಪ್ರದೇಶ ತನ್ನ ಆಸಕ್ತಿ ತೋರಿದೆ. ಇದು ದೇಶದಲ್ಲೇ ಮೊದಲ ಬಾರಿಗೆ ಈ ರಾಜ್ಯದಲ್ಲಿ ಆರಂಭವಾಗಲಿದೆ.
Advertisement