ನಿರ್ಭಯಕ್ಕೆ ಇನ್ನಷ್ಟು ಬಲ

ಯುಪಿಎ ಸರ್ಕಾರ ಮಹಾತ್ವಾಕಾಂಕ್ಷಿ ಯೋಜನೆಯಾದ `ನಿರ್ಭಯ'ಕ್ಕೆ ಮೀಸಲಿಟ್ಟ ರು1 ಸಾವಿರ ಕೋಟಿಯನ್ನು ಹಿಂದಿನ ಸರ್ಕಾರ ಖರ್ಚು ಮಾಡಿರಲಿಲ್ಲ....
ನಿರ್ಭಯಾ ಯೋಜನೆ
ನಿರ್ಭಯಾ ಯೋಜನೆ

ಯುಪಿಎ ಸರ್ಕಾರ ಮಹಾತ್ವಾಕಾಂಕ್ಷಿ ಯೋಜನೆಯಾದ `ನಿರ್ಭಯ'ಕ್ಕೆ ಮೀಸಲಿಟ್ಟ ರು1 ಸಾವಿರ ಕೋಟಿಯನ್ನು ಹಿಂದಿನ ಸರ್ಕಾರ ಖರ್ಚು ಮಾಡಿರಲಿಲ್ಲ.

ಆ ಅನುದಾನಕ್ಕೆ ಮತ್ತೆ ಹೆಚ್ಚುವರಿಯಾಗಿ ರು1 ಸಾವಿರ ಕೋಟಿ ನೀಡಲು ನಿರ್ಧರಿಸಲಾಗಿದೆ. ಮಹಿಳಾ ಸುರಕ್ಷೆ ಹಾಗೂ ಭದ್ರತೆಗಾಗಿ ಈ ಹಣ ಬಳಸಿಕೊಳ್ಳಲಾಗುತ್ತದೆ. ಈ ಹಣವನ್ನು 2015-16ನೇ ಆರ್ಥಿಕ ವರ್ಷದಲ್ಲಿ ಸಂಪೂರ್ಣ ವೆಚ್ಛ ಮಾಡುವ ಭರವಸೆಯನ್ನು ಕೇಂದ್ರ ನೀಡಿದ್ದು, ಆಯಾ ರಾಜ್ಯಗಳ ಬೇಡಿಕೆ ಆಗ್ರಹಿಸಿ ಅನುದಾನ ಹಂಚಲಾಗುವುದು.

ಯೋಗಕ್ಷೇಮ ವಿಚಾರಿಸಿದ ಜೇಟ್ಲಿ
ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ಮೋದಿ ಯೋಗವನ್ನು ವಿಶ್ವವ್ಯಾಪಿ ಪ್ರಚಾರ ಮಾಡಬೇಕೆಂದು ಸಲಹೆ ಮಾಡಿದ್ದರು. ಅದಕ್ಕೆ ಪೂರಕವಾಗಿ ವಿಶ್ವಸಂಸ್ಥೆ ಕೂಡ ಪ್ರತಿ ವರ್ಷದ ಜೂ.21ನ್ನು ವಿಶ್ವ ಯೋಗ ದಿನ ಎಂದು ಘೋಷಿಸಿತ್ತು. ಅದರಿಂದ ಸ್ಫೂರ್ತಿಗೊಂಡಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ಕೂಡ ದೇಶದ ಪಾರಂಪರಿಕ ಕಲೆ ಯೋಗಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಯೋಗಕ್ಕೆ ಸಂಬಂಧಿಸಿದಂತೆ ಯಾವುದೇ ದೇಣಿಗೆ ನೀಡಿದ್ದರೂ ಅವುಗಳಿಗೆ ಆದಾಯ ತೆರಿಗೆ ವ್ಯಾಪ್ತಿಯಿಂದ ವಿನಾಯಿತಿ ನೀಡುವ ಬಗ್ಗೆ ಬಜೆಟ್‍ನಲ್ಲಿ ಘೋಷಣೆ ಮಾಡಲಾಗಿದೆ. ಬಜೆಟ್‍ನಲ್ಲಿ ಕೈಗೊಳ್ಳಲಾಗಿರುವ ಮತ್ತೊಂದು ನಿರ್ಧಾರವೆಂದರೆ ರು25 ಲಕ್ಷದ ಮಿತಿಯಲ್ಲಿ ಯಾವುದೇ ಎನ್‍ಜಿಒಗಳು ವ್ಯಾಪಾರ ವಾಣಿಜ್ಯಿಕ ಉದ್ದೇಶದಿಂದ ಕೊಂಚ ಲಾಭ ಮಾಡಿಕೊಳ್ಳುವ ಉದ್ದೇಶಕ್ಕಾಗಿ ಕಾನೂನಿನಲ್ಲಿ ಸಡಿಲಿಕೆ ಮಾಡುವ ಪ್ರಸ್ತಾಪ ಮಾಡಲಾಗಿದೆ.

ಈಗ 1,78,000 ವಾಸಸ್ಥಳಗಳಿಗೆ ರಸ್ತೆ ಸಂಪರ್ಕವೇ ಇಲ್ಲ. 2022ರ ವೇಳೆಗೆ ಇವೆಲ್ಲ ಪಕ್ಕಾ ರಸ್ತೆಗಳ ಮೂಲಕ ಕನೆಕ್ಟ್ ಆಗಿರುತ್ತವೆ. ನಿರ್ಮಾಣ ಹಂತದಲ್ಲಿರುವ 1 ಲಕ್ಷ ಕಿ.ಮೀ. ರಸ್ತೆ ಮಾರ್ಗವನ್ನು ಪೂರ್ಣಗೊಳಿಸುವ ಮತ್ತು ಹೆಚ್ಚುವರಿ 1 ಲಕ್ಷ ಕಿ.ಮೀ. ವಿಸ್ತೀರ್ಣದ ರಸ್ತೆಯನ್ನು ನಿರ್ಮಿಸುವ ಯೋಜನೆಗೆ ಈಗಿನಿಂದಲೇ ಚುರುಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com