
ನವದೆಹಲಿ: ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಗುರುವಾರ 2016ನೇ ಸಾಲಿನ ರೈಲ್ವೇ ಬಜೆಟ್ ಮಂಡಿಸಿದ್ದು, ಕಾಯ್ದಿರಿಸದ ಟಿಕೆಟ್ ಗಳಿಗಾಗಿ ನೂತನ ನಿಯಮವನ್ನು ಘೋಷಣೆ ಮಾಡಿದ್ದಾರೆ.
ನೂತನ ನಿಯಮದನ್ವಯ ಕಾಯ್ದಿರಿಸದ ಟಿಕೆಟ್ ನ ಪ್ರಯಾಣವನ್ನು 199 ಕಿ.ಮೀಗೆ ಏರಿಸಲಾಗಿದ್ದು, ಪ್ರಯಾಣಿಕರು ಟಿಕೆಟ್ ಕೊಂಡ ಅವಧಿಯಿಂದ 3 ಗಂಟೆಯೊಳಗೆ ಪ್ರಯಾಣ ಆರಂಭಿಸಬೇಕು. ಅವಧಿ ಮೀರಿದರೆ ಟಿಕೆಟ್ ರದ್ದಾಗಲಿದೆ. ಈ ನೂತನ ನಿಯಮ ಇದೇ ಮಾರ್ಚ್ 1 ಜಾರಿಯಾಗುವಂತೆ ಕೇಂದ್ರ ರೈಲ್ವೇ ಇಲಾಖೆ ಜಾರಿಗೆ ತಂದಿದೆ. ಇನ್ನು ಕಾಯ್ದಿರಿಸದ ಟಿಕೆಟ್ ನ199 ಕಿ.ಮೀ ಅಂತರದ ವಾಪಸ್ ಪ್ರಯಾಣ ನಿಯಮವನ್ನು ಹಿಂತೆಗೆದುಕೊಳ್ಳಲಾಗಿದೆ.
ಈ ಬಗ್ಗೆ ಮಾತನಾಡಿದ ರೈಲೇ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಅವರು, ಕಾಯ್ದಿರಿಸದ ಟಿಕೆಟ್ ನಿಯಮಾವಳಿಗಳಿಗೆ ತಿದ್ದುಪಡಿ ತರಲಾಗಿದ್ದು, ನೂತನ ನಿಯಮ ಇದೇ ಮಾರ್ಚ್ 1ರಿಂದ ಜಾರಿಗೆ ಬರಲಿದೆ. ಇನ್ನು ದೇಶದ ಸುಮಾರು 29 ರೈಲ್ವೇ ನಿಲ್ದಾಣಗಳಲ್ಲಿ ಈಗಾಗಲೇ ಮೊಬೈಲ್ ಫೋನ್ ಗಳ ಮೂಲಕ ಕಾಗದ ರಹಿತ ಫ್ಲಾಟ್ ಫಾರ್ಮ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
Advertisement