ರೈಲ್ವೆ ಬಜೆಟ್ 2016-17: ಮಹಿಳೆಯರಿಗೆ ಏನೇನು ಸೌಲಭ್ಯ?

ಎಲ್ಲ ವಿಭಾಗದಲ್ಲಿಯೂ ಮಹಿಳೆಯರಿಗೆ ಶೇ. 33 ಸೀಟುಗಳು ಮೀಸಲು. ಅಮ್ಮನೊಂದಿಗೆ ಪ್ರಯಾಣಿಸುವ ಪುಟ್ಟ ಮಕ್ಕಳಿಗೆ ರೈಲಿನಲ್ಲಿ ಹಾಲು, ಬಿಸಿ ನೀರು, ಬೇಬಿ ಫುಡ್ ಸೌಲಭ್ಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: 2016-17 ಆರ್ಥಿಕ ವರ್ಷದ ರೈಲ್ವೆ ಬಜೆಟ್ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಸಂಸತ್‌ನಲ್ಲಿ ಮಂಡನೆ ಮಾಡಿದ್ದಾರೆ.
ಇದು ಜನ ಸಾಮಾನ್ಯರ ಬಜೆಟ್ ಎಂದು ಹೇಳುವ ಮೂಲಕ ಸುರೇಶ್ ಪ್ರಭು ಬಜೆಟ್ ಮಂಡನೆ ಆರಂಭ ಮಾಡಿದ್ದರು.  ಪ್ರಸ್ತುತ ಬಜೆಟ್‌ನಲ್ಲಿ ಮಹಿಳೆಯರಿಗೆ ರಕ್ಷಣೆ ನೀಡಲು ಪ್ರಾಧಾನ್ಯತೆ ನೀಡಬೇಕೆಂಬುದು ಎಲ್ಲರ ಒಕ್ಕೊರಲ ಒತ್ತಾಯವಾಗಿತ್ತು. ಅಂದ ಹಾಗೆ ಈ ಬಜೆಟ್‌ನಲ್ಲಿ ಮಹಿಳೆಯರಿಗೆ ಮತ್ತು ಹಿರಿಯ ನಾಗರಿಕರಿಗೆ ಯಾವೆಲ್ಲಾ ಸೌಕರ್ಯಗಳನ್ನು ಕಲ್ಪಿಸಲಾಗಿದೆ?
ಇಲ್ಲಿದೆ ಬಜೆಟ್ ಅಪ್‌ಡೇಟ್
  • ಮಹಿಳೆಯರಿಗೆ ಮತ್ತು ಹಿರಿಯ ನಾಗರಿಕರಿಗೆ ಹೆಚ್ಚಿನ ಸೀಟುಗಳು ಮೀಸಲು
  • ರೈಲಿನ ಮಧ್ಯ ಭಾಗದಲ್ಲಿ ಲೇಡಿಸ್ ಕಂಪಾರ್ಟ್‌ಮೆಂಟ್
  • ಎಲ್ಲ ನಿಲ್ದಾಣಗಳಲ್ಲಿ ಸಿಸಿಟಿವಿ ಅಳವಡಿಕೆ
  • ಹಿರಿಯ ನಾಗರಿಕರಿಗೆ ಶೇ. 50 ಸೀಟು ಹೆಚ್ಚಳ
  • ಎಲ್ಲ ವಿಭಾಗದಲ್ಲಿಯೂ ಮಹಿಳೆಯರಿಗೆ ಶೇ. 33 ಸೀಟುಗಳು ಮೀಸಲು
  • ಅಮ್ಮನೊಂದಿಗೆ ಪ್ರಯಾಣಿಸುವ ಪುಟ್ಟ ಮಕ್ಕಳಿಗೆ ರೈಲಿನಲ್ಲಿ ಹಾಲು, ಬಿಸಿ ನೀರು, ಬೇಬಿ ಫುಡ್ ಸೌಲಭ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com