• Tag results for women

ಕಾಮನ್ ವೆಲ್ತ್ ಗೇಮ್ಸ್ 2022: ಜುಲೈ ನಲ್ಲಿ ಮಹಿಳಾ ಟಿ20 ಕ್ರಿಕೆಟ್; ಟೀಂ ಇಂಡಿಯಾ ಸೇರಿ ಎಂಟು ತಂಡಗಳು ಭಾಗಿ!

2022ರ ಬರ್ಮಿಂಗ್ಹ್ಯಾಮ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ ಟಿ-20 ಕ್ರಿಕೆಟ್ ಪಂದ್ಯಾವಳಿ ಜುಲೈ 29ರಿಂದ ಆಗಸ್ಟ್ 7ರವರೆಗೆ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕಾಮನ್‌ವೆಲ್ತ್ ಕ್ರೀಡಾಕೂಟದ ಸಂಘಟಕರು ಪ್ರಕಟಿಸಿದ್ದಾರೆ.

published on : 16th June 2021

ಮಹಿಳೆಯರ ಋತುಚಕ್ರದ ಮೇಲೆ ಕೊರೋನಾ ಪರಿಣಾಮ! ಇಲ್ಲಿದೆ ಮಾಹಿತಿ...

ಋತುಸ್ರಾವ ಅಥವಾ ಪೀರಿಯಡ್ಸ್ ಆದಾಗ ಒಬ್ಬೊಬ್ಬ ಹೆಣ್ಣುಮಕ್ಕಳಿಗೆ ಒಂದೊಂದು ರೀತಿ ಸಮಸ್ಯೆ ಕಾಣಿಸಿಕೊಂಡು, ತೊಂದರೆಯುಂಟಾಗುವುದು ಸಾಮಾನ್ಯ. ಅದರಲ್ಲೂ ಹಾರ್ಮೋನುಗಳ ಅಸಮತೋಲನ, ಅಧಿಕ ತೂಕ ಅಥವಾ ಕಡಿಮೆ ತೂಕ ಮತ್ತು ಜಡ ಜೀವನಶೈಲಿಯಿಂದ ಅನಿಯಮಿತ ಋತುಸ್ರಾವವಾಗುತ್ತದೆ.

published on : 10th June 2021

ಜಾರಕಿಹೊಳಿ ಸಿಡಿ ಪ್ರಕರಣ: ಎಸ್‌ಐಟಿ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ ಸಂತ್ರಸ್ತೆ!

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿ.ಡಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಹೊರಡಿಸಿರುವ ಆದೇಶ ರದ್ದು ಕೋರಿ ಸಂತ್ರಸ್ತ ಯುವತಿ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. 

published on : 10th June 2021

ಕೊರೋನಾ 3ನೇ ಅಲೆ ಎದುರಿಸಲು ತಜ್ಞರ ಸಮಿತಿ ರಚನೆ: ತಂಡದಲ್ಲಿ ಮಹಿಳಾ ವೈದ್ಯರಿಗೆ ಸ್ಥಾನ ಇಲ್ಲ!

ರಾಜ್ಯದಲ್ಲಿ ಕೊರೋನಾ ಮೂರನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಸಲಹೆ ಹಾಗೂ ಮಾರ್ಗದರ್ಶನ ನೀಡುವ ಸಲುವಾಗಿ ರಾಜ್ಯ ಸರ್ಕಾರ ಕೋವಿಡ್ ಉನ್ನತ ವೈದ್ಯ ಸಮಿತಿ ರಚನೆ ಮಾಡಿದ್ದು, ಸಮಿತಿಯಲ್ಲಿ ಒಬ್ಬ ಮಹಿಳಾ ವೈದ್ಯೆಗೂ ಸ್ಥಾನ ನೀಡದಿರುವುದು ಕಂಡು ಬಂದಿದೆ. 

published on : 27th May 2021

8 ತಿಂಗಳಿಂದ ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ವೇತನ ಪಾವತಿ ಇಲ್ಲ ಎಂಬ ವರದಿಗಳ ಅಲ್ಲಗಳೆದ ಬಿಸಿಸಿಐ!

ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ 8 ತಿಂಗಳಿಂದ ವೇತನ ಪಾವತಿ ಮಾಡಿಲ್ಲ ಎಂಬ ವರದಿಗಳನ್ನು ಬಿಸಿಸಿಐ ಅಲ್ಲಗಳೆದಿದ್ದು, ಒಪ್ಪಂದದ ಪ್ರಕಾರ ಪ್ರತೀಯೊಬ್ಬ ಆಟಗಾರ್ತಿಯರಿಗೂ ತಿಂಗಳ ವೇತನ ಪಾವತಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

published on : 26th May 2021

ಕೋವಿಡ್ ಕೇರ್ ಕೇಂದ್ರಗಳಲ್ಲಿ ಮಹಿಳಾ ಮಾರ್ಷಲ್ ಗಳ ನೇಮಕ: ರೋಗಿಗಳಿಗೆ ಹೆಚ್ಚಿನ ಆರೈಕೆ, ಪ್ರೀತಿ ನಿರೀಕ್ಷೆ 

ಹೊಸಕೋಟೆಯಿಂದ ಪ್ರತಿದಿನ ಮುಂಜಾನೆ 5 ಕಿಲೋ ಮೀಟರ್ ನಡೆದು ಮಹದೇವಪುರ ಕೋವಿಡ್ ಕೇಂದ್ರಕ್ಕೆ ಬೆಳಗ್ಗೆ 6 ಗಂಟೆಗೆ ಮೊದಲು 25 ವರ್ಷದ ಭವಾನಿ ಕೆ ಜಿ ತಲುಪುತ್ತಾರೆ. ಬೆಂಗಳೂರಿನಲ್ಲಿ ನಿಯೋಜನೆಗೊಂಡಿರುವ 'ಮಹಿಳೆಯರ ಮಾರ್ಷಲ್' ತಂಡದ 12 ಮಹಿಳೆಯರಲ್ಲಿ ಭವಾನಿ ಕೂಡ ಒಬ್ಬರಾಗಿದ್ದಾರೆ.

published on : 25th May 2021

ಕೋವಿಡ್ ಟೆಸ್ಟ್ ವರದಿ ಇಲ್ಲವೆಂದು ಆಡ್ಮಿಟ್ ಮಾಡಿಕೊಳ್ಳದ ಸಿಬ್ಬಂದಿ, ಆಸ್ಪತ್ರೆ ಮುಂದೆಯೇ ಮಗುವಿಗೆ ಜನ್ಮ ನೀಡಿದ ಮಹಿಳೆ!

ಕೋವಿಡ್-19 ಟೆಸ್ಟ್ ವರದಿ ಇಲ್ಲವೆಂದು ಆಸ್ಪತ್ರೆ ಸಿಬ್ಬಂದಿ ಆಡ್ಮಿಟ್ ಮಾಡಿಕೊಳ್ಳಲು ನಿರಾಕರಿಸಿದ ನಂತರ ಮಹಿಳೆಯೊಬ್ಬರು ಗುರುವಾರ  ತಡರಾತ್ರಿ ಹಾಸನ ಜಿಲ್ಲೆಯ ಶಾಂತಿಗ್ರಾಮ ಪ್ರಾಥಮಿಕ ಆರೋಗ್ಯ ಘಟಕದ ಮುಂಭಾಗ ಮಗುವೊಂದಕ್ಕೆ ಜನ್ಮ ನೀಡಿರುವ ಘಟನೆ ನಡೆದಿದೆ.

published on : 21st May 2021

ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಕಾಂಟ್ರ್ಯಾಕ್ಟ್ ಪಟ್ಟಿ ಪ್ರಕಟ: 'ಎ' ಗ್ರೇಡ್ ನಲ್ಲಿ ಹರ್ಮನ್ ಪ್ರೀತ್, ಪೂನಂ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಪರಿಷ್ಕೃತ ಪಟ್ಟಿ ಪ್ರಕಟಿಸಿದ್ದು 19 ಆಟಗಾರ್ತಿಯರು ಕೇಂದ್ರೀಯ ಗುತ್ತಿಗೆಯಲ್ಲಿ ಸ್ಥಾನ ಪಡೆದಿದ್ದಾರೆ. 

published on : 20th May 2021

ಕೊರೋನಾದಿಂದ ತಾಯಿ, ಸೋದರಿ ಕಳೆದುಕೊಂಡಿದ್ದ ವೇದಾಗೆ ಮತ್ತೊಂದು ಶಾಕ್: ಇಂಗ್ಲೆಂಡ್ ಪ್ರವಾಸದಿಂದ ಔಟ್

ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ. 

published on : 15th May 2021

ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಗಿ ರಮೇಶ್ ಪೊವಾರ್ ನೇಮಕ

ಟೀಮ್ ಇಂಡಿಯಾದ ಹಿರಿಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಭಾರತದ ಮಾಜಿ ಆಫ್ ಸ್ಪಿನ್ನರ್ ರಮೇಶ್ ಪೊವಾರ್ ಅವರನ್ನು ಮತ್ತೆ ನೇಮಕ ಮಾಡಲಾಗಿದೆ.

published on : 13th May 2021

ಮಂಗಳೂರು: 29 ಗರ್ಭಿಣಿಯರು, ಎರಡು ಶಿಶು, ಹೊಸ ತಾಯಂದಿರಿಗೆ ಕೋವಿಡ್ ಪಾಸಿಟಿವ್!

ದಕ್ಷಿಣ ಕನ್ನಡ ಆರೋಗ್ಯ ಇಲಾಖೆ ಮಂಗಳೂರಿನ ಸರ್ಕಾರಿ ಲೇಡಿ ಗೊಸ್ಚೆನ್ ಆಸ್ಪತ್ರೆಯಲ್ಲಿ ಹೆಚ್ಚುವರಿ 14 ಬೆಡ್ ಗಳ ವಾರ್ಡ್ ಅನ್ನು ಗರ್ಭಿಣಿಯರು ಮತ್ತು ಕೋವಿಡ್ ಪಾಸಿಟಿವ್ ಬಂದಿರುವ ಹೊಸ ತಾಯಂದಿರಿಗಾಗಿ ನಿಗದಿಪಡಿಸಿದೆ. 

published on : 13th May 2021

ಬೆಡ್ ಗಾಗಿ 4 ಜಿಲ್ಲೆಗಳಲ್ಲಿ ಸೋಂಕಿತೆ ಅಲೆದಾಟ; ಆಸ್ಪತ್ರೆ ಆವರಣದಲ್ಲಿ ಬಿಟ್ಟು ಹೋದ ಆ್ಯಂಬುಲೆನ್ಸ್ ಚಾಲಕ; ಚಿಕಿತ್ಸೆ ಸಿಗದೆ ಸಾವು

ಕೊರೋನಾ ಸೋಂಕಿತೆಯೊಬ್ಬರು ಬೆಡ್ ಗಾಗಿ ನಾಲ್ಕು ಜಿಲ್ಲೆಗಳಲ್ಲಿ ಅಳೆದಾಡಿ, ಕೊನೆಗೆ ಎಲ್ಲಿಯೂ ಸಿಗದ ಕಾರಣ ಆ್ಯಂಬುಲೆನ್ಸ್ ಚಾಲಕ ಆಕೆಯನ್ನು ಮಂಡ್ಯದಲ್ಲಿ ಇಳಿಸಿಹೋಗಿದ್ದಾನೆ.

published on : 13th May 2021

ಬೆಂಗಳೂರು: ತಾಯಿ ಮತ್ತು ಸಹೋದರನ ಶವದೊಂದಿಗೆ ಎರಡು ದಿನ ಕಳೆದ ಮಹಿಳೆ!

ಮಹಿಳೆಯೊಬ್ಬರು ತನ್ನ ತಾಯಿ ಹಾಗೂ ಸಹೋದರನ ಶವಗಳ ಜೊತೆಗೆ ಎರಡು ದಿನ ಮನೆಯಲ್ಲೇ ಕಳೆದಿರುವ ಘಟನೆ ರಾಜರಾಜೇಶ್ವರಿ ನಗರ ಠಾಣಾ ವ್ಯಾಪ್ತಿಯ ಬಿಇಎಂಎಲ್ ಬಡಾವಣೆಯಲ್ಲಿ ನಡೆದಿದೆ.

published on : 13th May 2021

ಇಸ್ರೇಲ್ ಮೇಲೆ ಹಮಾಸ್ ಮಾರ್ಟರ್ ಶೆಲ್ಲಿಂಗ್: ಭಾರತೀಯ ಮೂಲದ ಮಹಿಳೆ ಸಾವು; ಸಾವಿನ ಸಂಖ್ಯೆ 32ಕ್ಕೆ ಏರಿಕೆ

ಗಾಜಾ ಗಡಿಯಲ್ಲಿ ಹಮಾಸ್ ನಡೆಸಿದ ಮಾರ್ಟರ್ ಶೆಲ್ಲಿಂಗ್ ನಿಂದ ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಭಾರತೀಯ ಮಹಿಳೆ ಸೇರಿ ಮೂವರು ಸಾವನ್ನಪ್ಪಿದ್ದಾರೆ.

published on : 12th May 2021

ಚಾಮರಾಜನಗರ: ಮೊಮ್ಮಕ್ಕಳಿಗೆ ಕೊರೋನಾ ಸೋಂಕು ಹರಡುವ ಭೀತಿಗೆ ಹೆದರಿ ವೃದ್ಧೆ ನೇಣಿಗೆ ಶರಣು

ತನಗೆ‌ ಬಂದ ಕೊರೋನಾ ಸೋಂಕು ಮೊಮ್ಮಕ್ಕಳಿಗೂ ಹರಡಬಹುದು ಎಂದು ಹೆದರಿದ ವೃದ್ಧೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನಲ್ಲಿ ನಡೆದಿದೆ.

published on : 10th May 2021
1 2 3 4 5 6 >