ಸುದೀರ್ಘ ಸಮಯ ಕುಳಿತು ಕೆಲಸ ಮಾಡುವ ಮಹಿಳೆಯರಿಗೆ 'ಮೂಳೆ ಸಮಸ್ಯೆ' ಕಟ್ಟಿಟ್ಟ ಬುತ್ತಿ!

30 ಮತ್ತು 40 ರ ದಶಕದ ಮಧ್ಯಭಾಗದಲ್ಲಿರುವ ಮಹಿಳೆಯರು ಈಗ ನಿರಂತರ ಕೀಲು ನೋವು, ಸ್ನಾಯು ಸೆಳೆತ ಅನುಭವಿಸುತ್ತಿದ್ದಾರೆ ಎಂದು ವೈದ್ಯರು ಹೇಳುತ್ತಾರೆ, ಈ ಮೊದಲು 50 ವರ್ಷ ವಯಸ್ಸಿನ ನಂತರ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿತ್ತು.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ಆರೋಗ್ಯ ಕಾಳಜಿ ಹೆಚ್ಚುತ್ತಿದೆ, ಏಕೆಂದರೆ ಹಿಂದಿನ ದಶಕಗಳಿಗಿಂತ ಬಹಳ ಮುಂಚೆಯೇ ಹೆಚ್ಚಿನ ಮಹಿಳೆಯರಿಗೆ ಮೂಳೆ ಮತ್ತು ಕೀಲು ಅಸ್ವಸ್ಥತೆಗಳು ಪತ್ತೆಯಾಗುತ್ತಿದೆ.

30 ಮತ್ತು 40 ರ ದಶಕದ ಮಧ್ಯಭಾಗದಲ್ಲಿರುವ ಮಹಿಳೆಯರು ಈಗ ನಿರಂತರ ಕೀಲು ನೋವು, ಸ್ನಾಯು ಸೆಳೆತ ಅನುಭವಿಸುತ್ತಿದ್ದಾರೆ ಎಂದು ವೈದ್ಯರು ಹೇಳುತ್ತಾರೆ, ಈ ಮೊದಲು 50 ವರ್ಷ ವಯಸ್ಸಿನ ನಂತರ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿತ್ತು ಆದರೆ ಆಧುನಿಕ ಜೀವನ ಶೈಲಿಯಿಂದಾಗಿ 35 ವರ್ಷಕ್ಕೆ ಸಮಸ್ಯೆಗಳು ಕಾಣಿಸುತ್ತಿವೆ.

ನಗರದ ಐಟಿ-ಚಾಲಿತ ಕೆಲಸದ ಪ್ರಮುಖ ಕೊಡುಗೆ ಇದಾಗಿದೆ. ದೀರ್ಘಾವಧಿ ಕುಳಿತೇ ಕೆಲಸಮಾಡುವುದು, ಸುದೀರ್ಘ ಪ್ರಯಾಣ ಮತ್ತು ದೀರ್ಘ ಸಮಯದವರೆಗೆ ಮನೆಯೊಳಗೆ ಕುಳಿತು ಕೆಲಸ ಮಾಡುವ ಮಹಿಳೆಯರಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗಿದೆ, ಸೂರ್ಯನ ಬೆಳಕಿಗೆ ಬರುವುದನ್ನು ತೀವ್ರವಾಗಿ ಕಡಿಮೆ ಮಾಡಿದೆ. ಇದರಿಂದ ವ್ಯಾಪಕವಾದ ವಿಟಮಿನ್ ಡಿ ಕೊರತೆ ಮತ್ತು ಕಳಪೆ ಮೂಳೆ ಖನಿಜ ಸಾಂದ್ರತೆಗೆ ಕಾರಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದು ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ವರ್ಕ್ ಫ್ರಂ ಹೋಮ್ ಮಾಡುವ ದಿನಚರಿಯಿಂದಾಗಿ ಮೂಳೆ ಸಮಸ್ಯೆ ಹೆಚ್ಚಾಗಿದೆ.

Representational image
Vitamin D-Rich Foods: ವಿಟಮಿನ್ ಡಿ ಕೊರತೆ ನೀಗಿಸಲು ತಿನ್ನಬೇಕಾದ ಆಹಾರಗಳು

ಮೂಳೆ ತಜ್ಞರ ಪ್ರಕಾರ, 35 ರಿಂದ 45 ವರ್ಷ ವಯಸ್ಸಿನ ಮಹಿಳೆಯರು ಮೊಣಕಾಲು ಮತ್ತು ಕೀಲು ನೋವು ಸಮಸ್ಯೆ ಹೆಚ್ಚಾಗಿದೆ. ವಿಳಂಬ ಗರ್ಭಧಾರಣೆಯು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತಿದೆ ಎಂದು ಆಸ್ಟರ್ ಆರ್‌ವಿ ಆಸ್ಪತ್ರೆಯ ಮೂಳೆ ಮತ್ತು ಕೀಲು ಬದಲಿ ಪ್ರಮುಖ ಹಿರಿಯ ಸಲಹೆಗಾರ ಡಾ. ಜೆ.ವಿ. ಶ್ರೀನಿವಾಸ್ ಹೇಳಿದ್ದಾರೆ. ಗರ್ಭಧಾರಣೆಯ ಕೊನೆಯಲ್ಲಿ ಕ್ಯಾಲ್ಸಿಯಂ ನಷ್ಟವು ಹೆಚ್ಚಾಗಿರುತ್ತದೆ ಮತ್ತು ಮೂಳೆ ಶಕ್ತಿಯನ್ನು ಪುನ ಪಡೆಯಲು ಸಾಕಷ್ಟು ಸಮಯ ಬೇಕಾಗುತ್ತದೆ. ಸೂಕ್ತ ಜೀವನ ಶೈಲಿಯಲ್ಲದೇ ಮಹಿಳೆಯರು ಆರಂಭಿಕ ಮೂಳೆ ಮತ್ತು ಕಾರ್ಟಿಲೆಜ್ ಕ್ಷೀಣತೆಗೆ ಗುರಿಯಾಗುತ್ತಾರೆ ಎಂದು ಅವರು ವಿವರಿಸಿದರು.

30 ರ ದಶಕದ ಮಧ್ಯಭಾಗದಲ್ಲಿರುವ ಮಹಿಳೆಯರು ಈಗ 50 ವರ್ಷದ ಮಹಿಳೆಯರು ಅನುಭವಿಸುವ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಕ್ರಾ ವರ್ಲ್ಡ್ ಆಸ್ಪತ್ರೆಯ ಮೂಳೆಚಿಕಿತ್ಸಕ ಹಿರಿಯ ಸಲಹೆಗಾರ ಡಾ. ಬನಾರ್ಜಿ ಬಿ.ಎಚ್ ವಿವರಿಸಿದ್ದಾರೆ. ದೀರ್ಘಕಾಲ ಕುಳಿತುಕೊಳ್ಳುವುದು, ಕೆಲಸಕ್ಕೆ ಸಂಬಂಧಿಸಿದ ಒತ್ತಡ ಮತ್ತು ಹಾರ್ಮೋನುಗಳ ಅಸಮತೋಲನವು ಸ್ನಾಯು ಮತ್ತು ಮೂಳೆಯನ್ನು ದುರ್ಬಲಗೊಳಿಸುತ್ತಿದೆ. ಬೊಜ್ಜು ಮತ್ತು ಅನಿಯಂತ್ರಿತ ಔಷಧಿಗಳ ಸೇವನೆ ಅಸುರಕ್ಷಿತ ತೂಕ ನಷ್ಟ ವಿಧಾನಗಳು ಅಸ್ಥಿರಜ್ಜು ಮತ್ತು ಕೀಲು ಗಾಯಗಳಿಗೆ ಕಾರಣವಾಗುತ್ತಿವೆ ಎಂದು ಅವರು ಹೇಳಿದರು.

ಮಹಿಳೆಯರ ಮೂಳೆ ಶಕ್ತಿಯು ಹಾರ್ಮೋನುಗಳ ಆರೋಗ್ಯ ನಿರ್ಣಯದಲ್ಲಿ ಪಾತ್ರ ವಹಿಸುತ್ತದೆ. ಆರಂಭಿಕ ಋತುಬಂಧ, ಥೈರಾಯ್ಡ್ ಅಸ್ವಸ್ಥತೆ ಹಾಗೂ ಸಂಧಿವಾತದಂತಹ ಸ್ವಯಂ ನಿರೋಧಕ ಸ್ಥಿತಿಗಳು ಆಸ್ಟಿಯೊಪೊರೋಸಿಸ್ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ ಎಂದು ಮದರ್‌ಹುಡ್ ಆಸ್ಪತ್ರೆಗಳ ಸ್ತ್ರೀರೋಗ ತಜ್ಞೆ ಡಾ. ಮಾಧುರಿ ವಿದ್ಯಾಶಂಕರ್ ತಿಳಿಸಿದ್ದಾರೆ.

Representational image
ಸಮೃದ್ಧ ಪೋಷಕಾಂಶ ವಿಟಮಿನ್ ಸಿ (ಕುಶಲವೇ ಕ್ಷೇಮವೇ)

ಈಸ್ಟ್ರೋಜೆನ್ ಮೂಳೆ ಸಾಂದ್ರತೆಯನ್ನು ರಕ್ಷಿಸುತ್ತದೆ. ಋತುಬಂಧವು ಬೇಗನೆ ಸಂಭವಿಸಿದಾಗ, ನೈಸರ್ಗಿಕವಾಗಿ ಗರ್ಭಕಂಠದ ಸಮಯದಲ್ಲಿ ಅಂಡಾಶಯವನ್ನು ತೆಗೆದುಹಾಕುವುದರಿಂದ ಮೂಳೆ ಮುರಿತದ ಅಪಾಯ ತೀವ್ರವಾಗಿ ಹೆಚ್ಚಾಗುತ್ತದೆ. ವೈದ್ಯಕೀಯವಾಗಿ ಅಗತ್ಯವಿಲ್ಲದಿದ್ದರೆ ಅಂಡಾಶಯಗಳನ್ನು ಕನಿಷ್ಠ 55 ವರ್ಷಗಳವರೆಗೆ ಸಂರಕ್ಷಿಸಬೇಕು ಎಂದು ಅವರು ಸಲಹೆ ನೀಡಿದರು.

ಆಸ್ಟಿಯೊಪೊರೋಸಿಸ್ ಮೊದಲೇ ಪತ್ತೆಯಾದರೆ ಚಿಕಿತ್ಸೆ ನೀಡಬಹುದು ಎಂದು ವೈದ್ಯರು ಹೇಳಿದರು. ದೀರ್ಘಾವಧಿಯ ಅಂಗವೈಕಲ್ಯ ಮತ್ತು ಮೂಳೆ ಮುರಿತಗಳನ್ನು ತಡೆಗಟ್ಟಲು ನಿಯಮಿತ ಶಕ್ತಿ ತರಬೇತಿ, ಸಾಕಷ್ಟು ಕ್ಯಾಲ್ಸಿಯಂ ಸೇವನೆ, ವಿಟಮಿನ್ ಡಿ ಪೂರಕ, ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಅಪಾಯ ತಪ್ಪಿಸಬಹುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com