

ಬೆಂಗಳೂರು: ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆಯೇ ಬಟ್ಟೆ ಹರಿದುಕೊಂಡಿದ್ದಾಳೆ. ಬಿಜೆಪಿ ರಾಜಕೀಯ ಆರೋಪ ಮಾಡುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇಶ್ವಾಪುರದ ಚಾಲುಕ್ಯ ನಗರದಲ್ಲಿನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯನ್ನು ವಶಕ್ಕೆ ಪಡೆಯಲು ಹೋದಾಗ, ಅವರೇ ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಲ್ಲದೆ ತಾವೇ ವಿವಸ್ತ್ರಗೊಂಡು ಗಲಾಟೆ ಮಾಡಿದ್ದಾರೆ. ಆ ಮಹಿಳೆಯೇ ಪೊಲೀಸರಿಗೆ ಕಚ್ಚಿದ್ದಾಳೆ. 10 ಜನ ಕಾನ್‌ಸ್ಟೇಬಲ್‌ಗಳ ಮೇಲೆ ಹಲ್ಲೆ ಮಾಡಿದ್ದಾಳೆ. ಕರ್ನಾಟಕದಲ್ಲಿ ನಮ್ಮ ಪೊಲೀಸರು ಬಟ್ಟೆ ಬಿಚ್ಚುವ ಸಂಪ್ರದಾಯ ಯಾವತ್ತು ಇಟ್ಟುಕೊಂಡಿಲ್ಲ ಎಂದು ತಿಳಿಸಿದರು.
ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೂ ಹಲ್ಲೆ ನಡೆಸಿರುವ ಸಾಕ್ಷಿಗಳು ಇವೆ. ಇದರಲ್ಲಿ ಪೊಲೀಸರದ್ದು ಯಾವ ತಪ್ಪಿಲ್ಲ. ವಿಡಿಯೋ ನೋಡಿದಾಗ ಯಾರಿಗಾದರೂ ಮಹಿಳೆ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದೆನಿಸುತ್ತದೆ. ಆದರೆ ವಿಷಯದ ಸತ್ಯಾಸತ್ಯತೆ ಮರೆಮಾಚಿ, ಪೊಲೀಸರ ಮೇಲೆ ಆರೋಪಿಸಲಾಗುತ್ತದೆ. ಘಟನೆಯ ಮಾಹಿತಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ವಿವರಿಸಿದ್ದೇನೆ ಎಂದು ಸಚಿವ ಲಾಡ್ ಹೇಳಿದರು.
ಆಕೆಯ ಮೇಲೆ ಹಲ್ಲೆ ಆಗಿರೋದು ನಿಜ. ಹಲ್ಲೆ ಆಗಿರುವ ವಿಚಾರಕ್ಕೆ ಕ್ರಮ ಆಗಬೇಕು. ದೂರು ದಾಖಲಾಗಿದೆ ಕಾನೂನು ಪ್ರಕಾರ ಕ್ರಮ ಆಗುತ್ತದೆ. ನಾನೇ ಉಸ್ತುವಾರಿ ಸಚಿವನಾಗಿ ಹಲ್ಲೆ ವಿಚಾರಕ್ಕೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ ಎಂದರು. ಬಳ್ಳಾರಿಯಲ್ಲಾದ ಗಲಾಟೆ ಪ್ರಕರಣಕ್ಕೆ ನನ್ನ ಬೆಂಬಲ ಇಲ್ಲ. ಅ ಘಟನೆ ನಾನು ಸಮರ್ಥನೆ ಮಾಡುವುದಿಲ್ಲ. ಈಗಾಗಲೇ ಸಿಎಂ ಸಿದ್ದರಾಮಯ್ಯಕ್ರಮ ತೆಗೆದುಕೊಂಡಿದ್ದಾರೆ ಎಂದರು.
Advertisement