ಬಜೆಟ್ 2016: ಶಿಕ್ಷಣ ಕ್ಷೇತ್ರಕ್ಕೆ ದಕ್ಕಿದ್ದೇನು..?

2016 ಮತ್ತು 17 ಸಾಲಿನ ಬಜೆಟ್ ಮಂಡಿಸಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಶಿಕ್ಷಣಕ್ಕೂ ಕೊಡುಗೆ ನೀಡಿದ್ದು, ಉನ್ನತ ಶಿಕ್ಷಣಕ್ಕಾಗಿ ಸುಮಾರು 1 ಸಾವಿರ ಕೋಟಿ ರು.ಗಳನ್ನು ಮೀಸಲಿರಿಸಿದ್ದಾರೆ...
ಶಿಕ್ಷಣ ಕ್ಷೇತ್ರ (ಸಾಂದರ್ಭಿಕ ಚಿತ್ರ)
ಶಿಕ್ಷಣ ಕ್ಷೇತ್ರ (ಸಾಂದರ್ಭಿಕ ಚಿತ್ರ)

ನವದೆಹಲಿ: 2016 ಮತ್ತು 17 ಸಾಲಿನ ಬಜೆಟ್ ಮಂಡಿಸಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಶಿಕ್ಷಣಕ್ಕೂ ಕೊಡುಗೆ ನೀಡಿದ್ದು, ಉನ್ನತ ಶಿಕ್ಷಣಕ್ಕಾಗಿ ಸುಮಾರು 1 ಸಾವಿರ ಕೋಟಿ  ರು.ಗಳನ್ನು ಮೀಸಲಿರಿಸಿದ್ದಾರೆ.

ಉನ್ನತ ಶಿಕ್ಷಣಕ್ಕಾಗಿ 1000 ಕೋಟಿ ರೂಪಾಯಿ ನೆರವು ನೀಡಲಾಗುವುದು ಮತ್ತು ಹಣವನ್ನು ಉನ್ನತ ಶಿಕ್ಷಣಕ್ಕೆ ಏಜೆನ್ಸಿಗಳ ಮೂಲಕ ನೀಡಲಾಗುವುದು ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.  ಇದಲ್ಲದೆ ದೇಶಾದ್ಯಂತ ಸುಮಾರು 15 ಸಾವಿರ ಕೌಶಲಾಭಿವೃದ್ಧಿ ಕೇಂದ್ರ ಆರಂಭ ಮತ್ತು ಇದಕ್ಕಾಗಿ 17 ಸಾವಿರ ಕೋಟಿ ರುಪಾಯಿಯನ್ನು ಮೀಸಲಿಡುವುದಾಗಿ ಹೇಳಿದರು. 3 ವರ್ಷದಲ್ಲಿ 1 ಕೋಟಿ  ಯುವಕರಿಗೆ ಕೌಶಲ್ಯ ತರಬೇತಿ ಗುರಿ ಹೊಂದಲಾಗಿದ್ದು, ಇದಕ್ಕಾಗಿ ದೇಶಾದ್ಯಂತ 17 ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ  1 ,500 ಬಹುಕೌಶಲ್ಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು  ಎಂದು ಜೇಟ್ಲಿ ತಿಳಿಸಿದರು. ಇದಲ್ಲದೆ ವಿಶ್ವದರ್ಜೆ ಸಂಶೋಧನೆಗಾಗಿ ಕೇಂದ್ರ ಸರ್ಕಾರ ಹೊಸ ಯೋಜನೆಯನ್ನೇ ಜಾರಿಗೆ ತರಲು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

ಇನ್ನು ಶಿಕ್ಷಣ ಕ್ಷೇತ್ರದ ಡಿಜಿಟಲೀಕರಣಕ್ಕೆ ಕ್ರಮ ಕೈಗೊಂಡಿರುವ ಜೇಟ್ಲಿ ಅವರು ಡಿಜಿಟಲ್ ಸಾಕ್ಷರತೆಗಾಗಿ ಎರಡು ವಿಶೇಷ ಯೋಜನೆಗಳನ್ನು ಘೊಷಿಸಿದ್ದಾರೆ. ಶೈಕ್ಷಣಿಕ ಪ್ರಮಾಣ ಪತ್ರ  ಸಂಗ್ರಹಿಸಿಡಲು ಡಿಜಿಟಲ್ ಡೆಪಾಸಿಟರ್ ಯೋಜನೆ ಮತ್ತು 'ಡಿಜಿಟಲ್ ಸಾಕ್ಷರತಾ ಮಿಷನ್' ಯೋಜನೆಗಳ ಜಾರಿಗೆ ಸಿದ್ಧತೆ ಜೇಟ್ಲಿ ಸಿದ್ಧತೆ ನಡೆಸಿದ್ದಾರೆ. ಇನ್ನು ದೇಶಾದ್ಯಂತ 62 ಹೊಸ  ನವೋದಯ ವಿದ್ಯಾಲಯಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com