
ನವದೆಹಲಿ: 2016-17ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಸೋಮವಾರ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿದ್ದು, ಪ್ರಮುಖವಾಗಿ ಗ್ರಾಮೀಣ ಆರ್ಥಿಕತೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.
ಭಾರತಿಯ ಆರ್ಥಿಕತೆ ಕುರಿತು ವಿಶ್ವಕ್ಕೆ ಅಶಾಭಾವವಿದ್ದು, ಭಾರತವನ್ನು ಆರ್ಥಿಕ ಬೆಳವಣಿಗೆಯ ಆಶಾಕಿರಣ ಎಂದು ಐಎಂಎಫ್ ಮೆಚ್ಚುಗೆ ವ್ಯಕ್ತಪಡಿಸಿದೆ. ಭಾರತದ ಆರ್ಥಿಕ ಅಭಿವೃದ್ಧಿ ದರ ಶೇ.7 .6 ಕ್ಕೆ ಹೆಚ್ಚಳವಾಗಬೇಕಿದೆ. ನಾವು ಸವಾಲುಗಳನ್ನು ಅವಕಾಶಗಳನ್ನಾಗಿ ಮಾರ್ಪಡಿಸಲು ಯತ್ನಿಸುತ್ತಿದ್ದೇವೆ. ವಿಶ್ವ ಆರ್ಥಿಕ ಸಂಸ್ಥೆ ಭಾರತದ ಆರ್ಥಿಕ ವ್ಯವಸ್ಥೆಯ ಬಗ್ಗೆ ಬೆನ್ನುತಟ್ಟಿದೆ ಎಂದು ಜೇಟ್ಲಿ ಹೇಳಿದರು. ಅಂತೆಯೇ ತಮ್ಮ ಬಜೆಟ್ ಪ್ರಮುಖವಾಗಿ 9 ಬುನಾದಿಗಳನ್ನು ಒಳಗೊಂಡಿದ್ದು, ಕೃಷಿ, ಸಾಮಾಜಿಕ ಕಾರ್ಯಕ್ರಮಗಳು, ಗ್ರಾಮೀಣ ಅಭಿವೃದ್ಧಿ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ, ಮೂಲಸೌಕರ್ಯ, ಆರ್ಥಿಕ ಸುಧಾರಣೆ, ವ್ಯಾಪಾರ, ಆರ್ಥಿಕ ಶಿಸ್ತು ಮತ್ತು ತೆರಿಗೆ ನೀತಿ ಸುಧಾರಣೆ ಮಾಡುವ ಮೂಲಕ ಅಭಿವೃದ್ಧಿ ಸಾಧಿಸುವುದು ಸರ್ಕಾರ ಪ್ರಮುಖ ಉದ್ದೇಶವಾಗಿದೆ ಎಂದು ಜೇಟ್ಲಿ ತಿಳಿಸಿದರು.
2015 ಮತ್ತು 2016ನೇ ಸಾಲಿನಲ್ಲಿ ನಮ್ಮ ಸರ್ಕಾರ 8.5 ಲಕ್ಷ ಕೋಟಿ ಕೃಷಿ ಆದಾಯ ಗುರಿ ಹೊಂದಿತ್ತು. ಮುಂದಿನ ವರ್ಷ ಈ ಗುರಿಯನ್ನು 9 ಲಕ್ಷ ಕೋಟಿಗೆ ಏರಿಸಲಾಗಿದೆ. ಇದೇ ವೇಳೆ 19 ಸಾವಿರ ಕೋಟಿ ರು.ಗಳನ್ನು ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಗೆ ಮೀಸಲಿಡಲಾಗಿದೆ. ಒಟ್ಟಾರೆ ಗ್ರಾಮಿಣಾಭಿವೃದ್ಧಿಗಾಗಿ ಒಟ್ಟು 87,765 ಕೋಟಿ ರು.ಗಳನ್ನು ಮೀಸಲಿಡಲಾಗಿದೆ. ಮುಂದಿನ ವರ್ಷ ಕೃಷಿಗಾಗಿ 35,984 ಕೋಟಿ ರು.ಗಳನ್ನು ಮೀಸಲಿಡಲಾಗಿದೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಖಾತರಿ ಯೋಜನೆಗಾಗಿ 38,500 ಕೋಟಿ ರು.ಗಳನ್ನು ಮೀಸಲಿಡಲಾಗಿದೆ. ಅಂತೆಯೇ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ನೀರಾವರಿ ಯೋಜನೆಗಳಿಗೆ 17 ಸಾವಿರ ಕೋಟಿ ಅನುದಾನ ನೀಡಲು ಸರ್ಕಾರ ಸಿದ್ಧವಿದ್ದು, 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಲು ಆದ್ಯತೆ ನೀಡಲಾಗುತ್ತದೆ. ಗ್ರಾಮ್ ಸಡಕ್ ಯೋಜನೆಗೆ 19 ಸಾವಿರ ಕೋಟಿ ರೂ ಅನುದಾನ ನೀಡಲಾಗುತ್ತಿದ್ದು, ಅಂರ್ತಜಲ ಅಭಿವೃದ್ಧಿಗೆ 60 ಸಾವಿರ ಕೋಟಿ, ಇ ಮಾರ್ಕೆಟಿಂಗ್ ಗೆ 20 ಸಾವಿರ ಕೋಟಿ ರುಗಶನ್ನು ಮೀಸಲಿಡಲಾಗಿದೆ. ಅಂತೆಯೇ ಪರಂಪರಾಗತ್ ಕೃಷಿ ವಿಕಾಸ್ ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದ್ದು, 2017 ಮಾರ್ಚ್ ನೊಳಗೆ ಇತರೆ 23 ಯೋಜನೆಗಳು ಪೂರ್ಣಗೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆ. 5 ಲಕ್ಷ ಎಕರೆ ಜಮೀನಿನಲ್ಲಿ ಸಾವಯವ ಕೃಷಿಗೆ ಯೋಜನೆ ರೂಪಿಸಲಾಗಿದೆ. 28.5 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಗುರಿ. ನೀರಾವರಿಗೆ 17 ಸಾವಿರ ಕೋಟಿ, ಅಂರ್ತಜಲ ಅಭಿವೃದ್ಧಿಗೆ 60 ಸಾವಿರ ಕೋಟಿ ಮತ್ತು ಮಣ್ಣು ಆರೋಗ್ಯ ಕಾರ್ಡ್ ಯೋಜನೆಗೆ 367 ಕೋಟಿ ರೂ ಅನುದಾನ ನೀಡಲಾಗುತ್ತದೆ.
ಬೆಳೆ ನಷ್ಟ ಅನುಭವಿಸುತ್ತಿರುವ ರೈತರಿಗಾಗಿ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ. ಬರ ನಿರ್ವಹಣೆ ವ್ಯವಸ್ಥೆ ಗೆ ದೀನ ದಯಾಳ್ ಮಿಷನ್, ಕೃಷಿ ಸಾಲಕ್ಕೆ 9 ಲಕ್ಷ ಕೋಟಿ, ಮಣ್ಣು ಆರೋಗ್ಯ ಕಾರ್ಡ್ ಯೋಜನೆಗೆ 367 ಕೋಟಿ, ಇ ಮಾರ್ಕೆಟಿಂಗ್ ಗಾಗಿ 20 ಸಾವಿರ ಕೋಟಿ ಮೀಸಲು. ಅಗ್ರಿ ಇ ಮಾರ್ಕೆಟಿಂಗ್ ಗಳಿಗೆ 20 ಸಾವಿರ ಕೋಟಿ ಹಣ ಅನುದಾನ ನೀಡಲಾಗುತ್ತದೆ.
ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಸಾಕ್ಷರತೆ ಜಾಗೃತಿಗಾಗಿ ಹೆಚ್ಚಿನ ಒತ್ತು ನೀಡಲಾಗುತ್ತದೆ. ಇದಕ್ಕಾಗಿ ಗ್ರಾಮೀಣ ಪ್ರದೇಶಗಳ ವಿದ್ಯುದೀಕರಣಕ್ಕಾಗಿ 8,500 ಕೋಟಿ ರು. ಮೀಸಲಿಡಲಾಗುತ್ತಿದ್ದು, ಮೇ 1 2018ರ ವೇಳೆಗೆ ಶೇ.100ರಷ್ಟು ಸಂಪೂರ್ಣ ವಿದ್ಯುತ್ ಯುಕ್ತ ಗ್ರಾಮ ಗುರಿ ಹೊಂದಲಾಗಿದೆ. ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ 35,984 ಕೋಟಿ ರು.ಗಳನ್ನು ಮೀಸಲಿಡುತ್ತಿದ್ದು, ಈ ಪ್ಯಾಕೇಜ್ ಸೌದೆ ಒಲೆ ಮುಕ್ತ ಗ್ರಾಮ ಗುರಿಯನ್ನು ಕೂಡ ಹೊಂದಲಾಗಿದೆ ಎಂದು ಅರುಣ್ ಜೇಟ್ಲಿ ಹೇಳಿದರು.
Advertisement