
ನವದೆಹಲಿ: ಬಹು ನಿರೀಕ್ಷಿತ 2016-17ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಆರಂಭವಾಗಿದ್ದು, ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮೂರನೇ ಬಾರಿಗೆ ಮುಂಗಡ ಪತ್ರವನ್ನು ಸಂಸತ್ ನಲ್ಲಿ ಮಂಡಿಸುತ್ತಿದ್ದಾರೆ.
ಬೆಳಗ್ಗೆ 11 ಗಂಟೆ ಬಜೆಟ್ ಮಂಡನೆ ಆರಂಭವಾಗಿದ್ದು, ವಿಶ್ವ ಆರ್ಥಿಕತೆ ಸಂಕಷ್ಟದಲ್ಲಿರುವ ಹೊತ್ತಿನಲ್ಲಿ ನಾವು ಬಜೆಟ್ ಮಂಡನೆ ಮಾಡುತ್ತಿದ್ದೇವೆ. ಆದರೆ ಭಾರತದ ಆರ್ಥಿಕತೆ ಸ್ಥಿರವಾಗಿದೆ ಎಂದು ಅರುಣ್ ಜೇಟ್ಲಿ ಹೇಳಿದರು. "ನಮ್ಮ ಮುಂದೆ ಸಾಕಷ್ಟು ಸವಾಲುಗಳಿದ್ದು, ಸವಾಲುಗಳನ್ನು ಅವಕಾಶಗಳನ್ನಾಗಿ ಮಾರ್ಪಡಿಸಲು ಯತ್ನಿಸುತ್ತಿದ್ದೇವೆ. ವಿಶ್ವ ಆರ್ಥಿಕ ಸಂಸ್ಥೆ ಭಾರತದ ಆರ್ಥಿಕ ವ್ಯವಸ್ಥೆಯ ಬಗ್ಗೆ ಬೆನ್ನುತಟ್ಟಿದೆ. ಜಿಡಿಪಿ ದರ ಶೇ.7 .6 ಕ್ಕೆ ಹೆಚ್ಚಳವಾಗಬೇಕಿದೆ".
ಭಾರತೀಯ ಆರ್ಥಿಕತೆ ಕುರಿತು ವಿಶ್ವಕ್ಕೆ ಅಶಾಭಾವವಿದೆ. ಭಾರತವನ್ನು ಆರ್ಥಿಕ ಬೆಳವಣಿಗೆಯ ಆಶಾಕಿರಣ ಎಂದು ಐಎಂಎಫ್ ಮೆಚ್ಚುಗೆ ವ್ಯಕ್ತಪಡಿಸಿದೆ. ವಿಶ್ವ ಮಾರುಕಟ್ಟೆ ಅಭಿವೃದ್ಧಿ ದರ ಕುಂಠಿತವಾಗಿದೆ. ಅತ್ಯಂತ ಅಸಹಕಾರದ ರಾಜಕೀಯ ವ್ಯವಸ್ಥೆಯಲ್ಲೂ ನಾವು ಕೆಲಸ ಮಾಡಿದ್ದೇವೆ. ದೇಶದಲ್ಲಿ ಹಣದುಬ್ಬರ ಕಡಿಮೆಯಾಗುತ್ತಿದೆ. ದೇಶದಲ್ಲಿ ಶೇ.13ರಷ್ಟು ಮಾನ್ಸೂನ್ ಕೊರತೆಯಾಗಿದೆ.
ಬಿಪಿಎಲ್ ಕುಟುಂಬಗಳಿಗೆ ಎಲ್ ಪಿಜಿ ಸಬ್ಸಿಡಿ. ರೈತರಿಗಾಗಿ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಒತ್ತು. ಬಡಕುಟುಂಬಗಳ ಒಳಿತಿಗಾಗಿ ಆರೋಗ್ಯ ವಿಮಾ ಯೋಜನೆ ಘೋಷಣೆ ಮಾಡಲಾಗಿದೆ ಮತ್ತು ಕೃಷಿ, ರೈತರ ಕಲ್ಯಾಣಕ್ಕಾಗಿ ಕೇಂದ್ರದ ಆದ್ಯತೆ. 9 ಅಂಶಗಳ ಆಧಾರದಲ್ಲಿ ಈ ಬಾರಿಯ ಕೇಂದ್ರ ಬಜೆಟ್ ಮಂಡನೆ ಮಾಡಲಾಗುತ್ತದೆ ಎಂದು ಅರುಣ್ ಜೇಟ್ಲಿ ಹೇಳಿದರು.
ಕಳೆದ ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ನಮ್ಮ ಸರ್ಕಾರದ ಅವಧಿಯಲ್ಲಿ ಜಿಡಿಪಿ ಏರಿಕೆಯಾಗಿದ್ದು, ಜಿಡಿಪಿ ದರ ಶೇ.7 .6 ಕ್ಕೆ ಹೆಚ್ಚಳವಾಗಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಆರೋಗ್ಯ ವ್ಯವಸ್ಥೆಗೆ ಹೆಚ್ಚಿನ ಆಧ್ಯತೆ. ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ 35,984 ಕೋಟಿ ರೂ ಅನುದಾನ ನೀಡಲಾಗುತ್ತಿದೆ. ನೀರಾವರಿ ಯೋಜನೆಗಳಿಗೆ 17 ಸಾವಿರ ಕೋಟಿ ಅನುದಾನ ಮತ್ತು ಅಂರ್ತಜಲ ಅಭಿವೃದ್ಧಿಗೆ 60 ಸಾವಿರ ಕೋಟಿ, ಇ ಮಾರ್ಕೆಟಿಂಗ್ ಗೆ 20 ಸಾವಿರ ಕೋಟಿ ಮೀಸಲು. ಗ್ರಾಮ್ ಸಡಕ್ ಯೋಜನೆಗೆ 19 ಸಾವಿರ ಕೋಟಿ ರೂ ಅನುದಾನ, ಪರಂಪರಾಗತ್ ಕೃಷಿ ವಿಕಾಸ್ ಯೋಜನೆ ಜಾರಿಗೆ ಸರ್ಕಾರ ಬದ್ಧ.
ಕೃಷಿ ಕ್ಷೇತ್ರಕ್ಕಾಗಿ 35,984 ಕೋಟಿ ರೂಪಾಯಿ ಅನುದಾನ. 28.5 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಗುರಿ. ನೀರಾವರಿಗೆ 17 ಸಾವಿರ ಕೋಟಿ. 12 ರಾಜ್ಯಗಳಲ್ಲಿ ಕೃಷಿ ಇ ಮಾರ್ಕೆಟ್ ಪ್ಲಾನ್ ಮತ್ತು ಬರ ನಿರ್ವಹಣೆ ವ್ಯವಸ್ಥೆ ಗೆ ದೀನ ದಯಾಳ್ ಮಿಷನ್, ಕೃಷಿ ಸಾಲಕ್ಕೆ 9 ಲಕ್ಷ ಕೋಟಿ, ಮಣ್ಣು ಆರೋಗ್ಯ ಕಾರ್ಡ್ ಯೋಜನೆಗೆ 367 ಕೋಟಿ, ಇ ಮಾರ್ಕೆಟಿಂಗ್ ಗಾಗಿ 20 ಸಾವಿರ ಕೋಟಿ ಮೀಸಲಿಡಲಾಗುತ್ತದೆ ಎಂದು ಅರುಣ್ ಜೇಟ್ಲಿ ಹೇಳಿದರು.
Advertisement