ಕೇಂದ್ರ ಬಜೆಟ್ 2016: ಯಾವುದು ಅಗ್ಗ, ಯಾವುದು ತುಟ್ಟಿ

ಕೇಂದ್ರ ಆಡಳಿತಾರೂಢ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ 2016-17ನೇ ಸಾಲಿನ ಆಯವ್ಯಯವನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ ಮಂಡಿಸಿದ್ದು,...
ಕೇಂದ್ರ ಬಜೆಟ್ 2016: ಯಾವುದು ಅಗ್ಗ ಯಾವುದು ತುಟ್ಟಿ
ಕೇಂದ್ರ ಬಜೆಟ್ 2016: ಯಾವುದು ಅಗ್ಗ ಯಾವುದು ತುಟ್ಟಿ
Updated on

ನವದೆಹಲಿ: ಕೇಂದ್ರ ಆಡಳಿತಾರೂಢ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ 2016-17ನೇ ಸಾಲಿನ ಆಯವ್ಯಯವನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ ಮಂಡನೆ ಮಾಡಿದ್ದು, ಬಜೆಟ್ ನಲ್ಲಿ ಘೋಷಣೆಯಾದಂತೆ ಯಾವುದರ ಬೆಲೆ ಅಗ್ಗ, ಯಾವುದರ ಬೆಲೆ ತುಟ್ಟಿ ಎಂಬುದರ ಬಗೆಗಿನ ವಿವರ ಇಲ್ಲಿದೆ...

ತುಟ್ಟಿಯಾದದ್ದು...

  • ಐಷಾರಾಮಿ ಕಾರುಗಳ ಮೇಲೆ ಶೇ.4 ರಷ್ಟು ಹೆಚ್ಚಳ
  • ಪೆಟ್ರೋಲ್, ಡೀಸೆಲ್ ನ ಸೆಸ್ ಹೆಚ್ಚಳ
  • ಐಷಾರಾಮಿ, ಲಕ್ಸುರಿ ಹಾಗೂ ಎಸ್ ಯುವಿ ಕಾರುಗಳ ಬೆಲೆ ಏರಿಕೆ
  • ಬೀಡಿಯೊಂದು ಬಿಟ್ಟು ಎಲ್ಲಾ ತಂಬಾಕು ಉತ್ಪನ್ನಗಳ ಬೆಲೆ ಏರಿಕೆ
  • ಬ್ರ್ಯಾಂಡೆಡ್ ಬಟ್ಟೆಗಳಾದ ಶರ್ಟು, ಪ್ಯಾಂಟು, ಮಹಿಳಾ ಉಡುಪುಗಳ ಬೆಲೆ ಏರಿಕೆ
  • ಚಿನ್ನಾಭರಣ, ವಜ್ರಗಳು ಇನ್ನು ಮತ್ತಷ್ಟು ದುಬಾರಿ
  • ದುಬಾರಿಯಾದ ಎಟಿಎಂ
  • ಜಿಮ್, ಹೋಟೆಲ್ ಗಳು, ರೇಡಿಯೋ ಟ್ಯಾಕ್ಸಿ, ಜೀವ ವಿಮೆ
  • ಸಿಗರೇಟು, ಗುಟ್ಕಾ ಹಾಗೂ ಇನ್ನಿತರೆ ತಂಬಾಕುಗಳ ಬಲೆ ಏರಿಕೆ
ಅಗ್ಗವಾದದ್ದು...
  • 60 ಚದರ ಮೀಟರ್ ವರೆಗೂ ಮನೆ ನಿರ್ಮಾಣದ ಮೇಲೆ ಸೇವಾ ತೆರಿಗೆ ವಿನಾಯಿತಿ.
  • ಇಪಿಎಫ್ ಒ ನೀಡುವ ಸೇವೆಗಳಲ್ಲಿ ಸೇವಾ ತೆರಿಗೆ ಅನ್ವಯವಿಲ್ಲ.
  • ಪುರುಷ ಪ್ರಿಯ ಮದ್ಯದ ಮೇಲೆಯೂ ಯಾವುದೇ ಅಬಕಾರಿ ಸುಂಕ ಹೆಚ್ಚಳವಿಲ್ಲ.
  • ಡಯಾಲಿಸೀಸ್ ಯಂತ್ರಗಳ ಮೇಲಿನ ತೆರಿಗೆ ಇಳಿಕೆ
  • ಸಣ್ಣ ತೆರಿಗೆದಾರರಿಗೆ ನಿರಾಳ. ಮನೆ ಬಾಡಿಗೆ ಭತ್ಯೆ ಮಿತಿ ವಾರ್ಷಿಕ ರು.24 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಳ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com