ಸಾಂದರ್ಭಿಕ ಚಿತ್ರ
ರಾಜ್ಯ ಬಜೆಟ್
ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಕೃಷಿ ವಲಯಕ್ಕೆ ಸಿಂಹಪಾಲು
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕುಗಳಲ್ಲಿ ನಿಧನ ಹೊಂದಿದ ರೈತರ 1 ಲಕ್ಷದವರೆಗಿನ ಸಾಲ ಮನ್ನಾ ಮಾಡುವುದಾಗಿ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 2018-19ನೇ ಸಾಲಿನ ಬಜೆಟ್ ಅನ್ನು ಮಂಡಿಸಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಆರನೇ ಹಣಕಾಸು ಸಚಿವರಾಗಿ ಹದಿಮೂರನೇ ಬಜೆಟ್ ಮಂಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು 2 ಲಕ್ಷ ಕೋಟಿ ರು ಗಾತ್ರದ ಬಜೆಟ್ ಮಂಡಿಸಿದ್ದಾರೆ. ರೈತನ ಮಗನಾಗಿ ನಾನು ಬಜೆಟ್ ಮಂಡಿಸುತ್ತಿರುವುದಾಗಿ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಷಿ ವಲಯಕ್ಕೆ ನೀಡಿರುವ ಅನುದಾನದ ವಿವರ ಇಲ್ಲಿದೆ.
2018–19ನೇ ಸಾಲಿನಲ್ಲಿ ಕೃಷಿ ಇಲಾಖೆಗೆ ರು 5080 ಕೋಟಿ ನೀಡಲಾಗಿದೆ. ಪಶುಸಂಗೋಪನೆಗೆ 2245 ಕೋಟಿ ರೂಪಾಯಿ ಅನುದಾನ, ಜಲಸಂಪನ್ಮೂಲ ಇಲಾಖೆಗೆ 15,929 ಕೋಟಿ ಅನುದಾನ,ಸಣ್ಣ ನೀರಾವರಿಗೆ 2090 ಕೋಟಿ ರೂ. ಅನುದಾನ ನೀಡಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕುಗಳಲ್ಲಿ ನಿಧನ ಹೊಂದಿದ ರೈತರ 1 ಲಕ್ಷದವರೆಗಿನ ಸಾಲ ಮನ್ನಾ ಮಾಡುವುದಾಗಿ ತಿಳಿಸಿದ್ದಾರೆ.
ತೋಟಗಾರಿಕೆಗೆ 1091 ಕೋಟಿ ಅನುದಾನ, ರೇಷ್ಮೆ ಇಲಾಖೆಗೆ 429 ಕೋಟಿ, ಚನ್ನಪಟ್ಟಣದಲ್ಲಿ ಅಂತರರಾಷ್ಟ್ರೀಯ ಮಟ್ಟದ ‘Live Museum’ ಸ್ಥಾಪನೆ, ಬೆಂಗಳೂರು, ಮೈಸೂರು ಕಾಡಿಡಾರ್‌ನಲ್ಲಿ ರೇಷ್ಮೆ ಟೂರಿಸಂ ಅಭಿವೃದ್ಧಿ ಉದ್ದೇಶ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿನ 1000 ಹಮಾಲರಿಗೆ ವಸತಿ ಸೌಲಭ್ಯ
ರೈತರಿಗೆ ಶೇ.3ರ ಬಡ್ಡಿದರದಲ್ಲಿ 10 ಲಕ್ಷ ರೂಪಾಯಿ ಸಾಲ ಘೋಷಿಲಾಗಿದೆ. ಶೇಂಗಾ ಬೆಳೆಗಾರರಿಗೆ 50 ಕೋಟಿ ರೂ. ವಿಶೇಷ ಪ್ಯಾಕೇಜ್.
ಸಿರಿಧಾನ್ಯ ಬೆಳೆಗಾರರಿಗೆ 24 ಕೋಟಿ ಪ್ಯಾಕೇಜ್. ಸಿರಿಧಾನ್ಯ ಬೆಳೆಗಳ ಯೋಜನೆ 60 ಲಕ್ಷ ಹೆಕ್ಟೇರ್ ಗೆ ವಿಸ್ತರಣೆ. ಹಾವು ಕಡಿತದಿಂದ ಮೃತಪಟ್ಟ ರೈತನಿಗೆ 2 ಲಕ್ಷ ರೂಪಾಯಿ ನೆರವು ಘೋಷಿಸಲಾಗಿದೆ. ರೈತರು ಬೆಳೆದ ಮರಗಳನ್ನು ಡಿಪೋಗಳಲ್ಲಿ ಅರಣ್ಯ ಇಲಾಖೆ ಹಾಗೂ ಎಪಿಎಂಸಿ ಸಮನ್ವಯದೊಂದಿಗೆ ಬಹಿರಂಗ ಹರಾಜಿನಲ್ಲಿ ಮಾರಾಟಕ್ಕೆ ವ್ಯವಸ್ಥೆ.
ಕೃಷಿ ಭಾಗ್ಯ ಯೋಜನೆಗೆ 600 ಕೋಟಿ ಅನುದಾನ, ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಚಾಮರಾಜನಗರ ಜಿಲ್ಲೆಯಲ್ಲಿ ನೂತನ ಕೃಷಿ ಕಾಲೇಜು ಸ್ಥಾಪನೆ ಮಾಡಲಾಗುವುದು. ಜಿವಿಕೆಯಲ್ಲಿ ನಂಜುಂಡಸ್ವಾಮಿ ಸಂಶೋಧನಾ ಪೀಠ ಸ್ಥಾಪನೆ, ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ನೂತನ ಕೃಷಿ ಸಂಶೋಧನಾ ಕೇಂದ್ರ, ಕಬ್ಬು ಕಟಾವು ಯಂತ್ರಗಳಿಗೆ 20 ಕೋಟಿರು ಸಹಾಯಧನ ಘೋಷಿಸಲಾಗಿದೆ.
ರೈತರಿಗೆ ನೇರ ಆದಾಯ ಒದಗಿಸುವ ರೈತ ಬೆಳಕು ಯೋಜನೆ ಮೂಲಕ ಗರಿಷ್ಠ 10 ಸಾವಿರ ರೂ ವರೆಗೆ ಸಹಾಯಧನ ನೀಡಲಾಗುವುದು, ಇದರಿಂದ ಸುಮಾರು 70 ಲಕ್ಷ ರೈತರಿಗೆ ಅನುಕೂಲ ವಾಗುವುದು, ಕುರಿ, ಮೇಕೆ ಸಾಕಾಣಿಗೆ ಮಾಡಿದ ಸಾಲಮನ್ನಾ. ರಾಜ್ಯದ 16 ಜಿಲ್ಲೆಗಳಲ್ಲಿ ಕುರಿ ರೋಗ ತಪಾಸಣಾ ಕೇಂದ್ರ ಸ್ಥಾಪನೆ ಮಾಡಲಾಗುವುದು.
ಕೆ.ಆರ್.ಪುರಂ ಸಂಸ್ಕರಣಾ ಘಟಕದಿಂದ ಹೊಸಕೋಟೆ ತಾಲ್ಲೂಕಿನ 30 ಕೆರೆಗಳಿಗೆ ನೀರು, ಇದಕ್ಕಾಗಿ 100 ಕೋಟಿ ವೆಚ್ಚ. ರಾಜ್ಯ ಮೇವು ಭದ್ರತಾ ನೀತಿ ಜಾರಿಗೆ ತರಲಾಗುವುದು. ಒಟ್ಟಿನಲ್ಲಿ ಸಿದ್ದರಾಮಯ್ಯ ಅವರ 13ನೇ ಬಜೆಟ್ ನಲ್ಲಿ ರೈತರಿಗೆ ತುಸು ಹೆಚ್ಚಿನ ಆದ್ಯತೆ ನೀಡಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ