ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕಂದಾಯ ಇಲಾಖೆಗೆ 6,642 ಕೋಟಿ ರು ಅನುದಾನ ನೀಡಿದ್ದು, 65,800 ಕೋಟಿ ರೂ ರಾಜಸ್ವ ಸಂಗ್ರಹ ಗುರಿ ಹೊಂದಿದ್ದಾರೆ.
ಭೂ ಮಾಪನ ಇಲಾಖೆಯಿಂದ 5 ಮೊಬೈಲ್ ಆ್ಯಪ್ -ಸಂಯೋಜನೆ, ಸಮೀಕ್ಷೆ, ಮೌಲ್ಯ, ದಿಶಾಂಕ್, ಆಧಾರ್ ಸಂಗ್ರಹಣೆ, ಪಹಣಿ ದಾಖಲೆ ಉಪಯೋಗಿಸಲು ಲ್ಯಾಂಡ್ ಟೈಟಲಿಂಗ್ ಯೋಜನೆ, 3 ತಾಲೂಕುಗಳಲ್ಲಿ ಪ್ರಾಯೋಗಿಕ ಆರಂಭ 1568 ಜನವಸತಿ ಪ್ರದೇಶ ಕಂದಾಯ ಗ್ರಾಮವಾಗಿ ಘೋಷಣೆ.
ಮುಂದಿನ ವರ್ಷದಲ್ಲಿ 2500 ಗ್ರಾಮ ಪೋಡಿ ಮುಕ್ತ, ಸಾಮಾಜಿಕ ಭದ್ರತಾ ಪಿಂಚಣಿ ಮಾಸಿಕ 500 ರೂ. ನಿಂದ 600 ರೂ. ಗೆ ಹೆಚ್ಚಳ, ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ ಹಾಗೂ ಮೈತ್ರಿ ಫಲಾನುಭವಿಗಳಿಗೆ ಅನ್ವಯ.
ರುದ್ರಭೂಮಿ ಖರೀದಿಗೆ 10 ಕೋಟಿ ರೂ.ಮೀಸಲು, ಹವಾಮಾನ, ಸಿಡಿಲು ಮುನ್ಸೂಚನೆ ಮುನ್ನೆಚ್ಚರಿಕೆ ನೀಡಲು ಮೊಬೈಲ್ ಆ್ಯಪ್, ಅರ್ಚಕರಿಗೆ ತಸ್ತಿಕ್ ನೀಡಲು ವಾರ್ಷಿಕ 20 ಕೋಟಿ ರೂ. ಅನುದಾನ, ತಿರುಮಲದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಅತಿಥಿ ಗೃಹ ನಿರ್ಮಾಣಕ್ಕೆ ಹಣ ಘೋಷಿಸಲಾಗಿದೆ.ಬಾಕಿ ಉಳಿಸಿಕೊಂಡ ತೆರಿಗೆ ಒಂದೇ ಕಂತಿನಲ್ಲಿ ಕಟ್ಟಿದರೆ ದಂಡ ಮನ್ನಾ,
ರಸ್ತೆ ಸುರಕ್ಷತಾ ಕಾರ್ಯಕ್ರಮಗಳನ್ನ ಕೈಗೊಳ್ಳಲು 150 ಕೋಟಿ ರೂ. ದೆಹಲಿಯ ಕರ್ನಾಟಕ ಭವನ ಹಳೇ ಕಟ್ಟಡ ಕೆಡವಿ, 30 ಕೋಟಿ ರು ವೆಚ್ಚದಲ್ಲಿ ಹೊಸ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.