ಸಿದ್ದರಾಮಯ್ಯ ಬಜೆಟ್ ನಲ್ಲಿ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಕ್ಕೆ ಸಿಕ್ಕಿದ್ದೇನು?

2018-19 ನೆ ಸಾಲಿನ ಹಾಗೂ ಈಗಿನ ಸರ್ಕಾರದ ಕೊನೆಯ ಬಜೆಟ್ ಮಂಡನೆ ಮಾಡಿರುವ ಸಿಎಂ ಸಿದ್ದರಾಮಯ್ಯ ವಿಜ್ಞಾನ- ತಂತ್ರಜ್ಞಾನ ಕ್ಷೇತ್ರಕ್ಕೆ 247 ಕೋಟಿ ಹಣವನ್ನು ಮೀಸಲಿರಿಸುವುದಾಗಿ ತಿಳಿಸಿದ್ದಾರೆ.
ವಿಜ್ಞಾನ ತಂತ್ರಜ್ಞಾನ
ವಿಜ್ಞಾನ ತಂತ್ರಜ್ಞಾನ
ಬೆಂಗಳೂರು: 2018-19 ನೆ ಸಾಲಿನ ಹಾಗೂ ಈಗಿನ ಸರ್ಕಾರದ ಕೊನೆಯ ಬಜೆಟ್ ಮಂಡನೆ ಮಾಡಿರುವ ಸಿಎಂ ಸಿದ್ದರಾಮಯ್ಯ ವಿಜ್ಞಾನ- ತಂತ್ರಜ್ಞಾನ ಕ್ಷೇತ್ರಕ್ಕೆ 247 ಕೋಟಿ ಹಣವನ್ನು ಮೀಸಲಿರಿಸುವುದಾಗಿ ತಿಳಿಸಿದ್ದಾರೆ. 
ವಿಜ್ಞಾನ-ಎಂಜಿನಿಯರಿಂಗ್ ಪಿಹೆಚ್ ಡಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನ ಪ್ರಾರಂಭಕ್ಕೆ 1 ಕೋಟಿ ರೂಪಾಯಿ ಮೀಸಲು ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 
ವಿಜ್ಞಾನ ತಂತ್ರಜ್ಞಾನ ಕ್ಷೇತ್ರಕ್ಕೆ ಘೋಷಣೆಯಾದ ಅನುದಾನ, ಘೋಷಣೆಗಳು
ಉದ್ಯಮಗಳ ವಿನ್ಯಾಸ ಉತ್ತೇಜಿಸಲು 'ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಡಿಸೈನ್' ಸ್ಥಾಪನೆ.
ವಿವಿಧ ವಲಯಗಳ ಉತ್ತೇಜನಕ್ಕೆ 'ಕರ್ನಾಟಕ ನಾವೀನ್ಯಾತಾ ಪ್ರಧಿಕಾರ' ಸ್ಥಾಪನೆ.
ಕಲ್ಬುರಗಿಯಲ್ಲಿ 5 ಕೋಟಿ ವೆಚ್ಚದಲ್ಲಿ ಇನ್ಕ್ಯೂಬೇಷನ್ ಸೆಂಟರ್ ಸ್ಥಾಪನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com