ಸಿಎಂ ಕುಮಾರ ಸ್ವಾಮಿ ಬಜೆಟ್ ನಲ್ಲಿ ಸಿಗಲಿದ್ಯಾ ರೈತರಿಗೆ ಹೆಚ್ಚಿನ ಆದ್ಯತೆ?

ಮುಖ್ಯಮಂತ್ರಿ ಕುಮಾರ ಸ್ವಾಮಿ ತಮ್ಮ ಚೊಚ್ಚಲ ಬಜೆಟ್ ಮಂಡಿಸಲು ಎಲ್ಲಾ ಸಿದ್ಧತೆ ನಡೆಸುತ್ತಿದ್ದಾರೆ, ಗುರುವಾರ ಮಂಡಿಸಲಿರುವ ಬ...
ಎಚ್.ಡಿ ಕುಮಾರ ಸ್ವಾಮಿ
ಎಚ್.ಡಿ ಕುಮಾರ ಸ್ವಾಮಿ
ಬೆಂಗಳೂರು: ಮುಖ್ಯಮಂತ್ರಿ ಕುಮಾರ ಸ್ವಾಮಿ ತಮ್ಮ ಚೊಚ್ಚಲ ಬಜೆಟ್ ಮಂಡಿಸಲು ಎಲ್ಲಾ ಸಿದ್ಧತೆ ನಡೆಸುತ್ತಿದ್ದಾರೆ, ಗುರುವಾರ ಮಂಡಿಸಲಿರುವ ಬಜೆಟ್ ನಲ್ಲಿ ಎಚ್ ಡಿಕೆ  ರೈತರ ಸಾಲಮನ್ನಾ ಸಂಬಂಧ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಇಡೀ ರಾಜ್ಯವೇ ಕಾಯುತ್ತಿದೆ,
ಸಣ್ಣ, ಮಧ್ಯಮ ಹಾಗೂ ಕನಿಷ್ಠ ರೈತರ ಸಾಲಗಳನ್ನು ಮನ್ನಾ ಮಾಡುವುದಾಗಿ ಸರ್ಕಾರ ಘೋಷಿಸಿದೆ.
ಸಾಲಮನ್ನಾಗೆ 52 ಸಾವಿರ ಕೋಟಿ ರು. ಬೇಕಾಗಿದ್ದು, ರಾಷ್ಟ್ರೀಕೃತ, ವಾಣಿಜ್ಯ, ಸಹಕಾರಿ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಲ್ಲಿ ರೈತರು ಪಡೆದಿರುವ ಸಾಲ ಮನ್ನಾ ಮಾಡಲು ನಿರೀಕ್ಷಿಸಲಾಗಿದೆ.
ಸಮ್ಮಿಶ್ರ ಸರ್ಕಾರ ಸಾಲ ಮನ್ನಾ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಅನೇಕರು ಬ್ಯಾಂಕ್ ಗಳಿಗೆ ಸಾಲ ಮರು ಪಾವತಿ ಮಾಡಲು  ನಿರಾಕರಿಸಿದ್ದಾರೆ.
ಸಾಲ ಮನ್ನಾ ವ್ಯಾಪ್ತಿಯನ್ನು ವಿಸ್ತರಿಸುವಂತೆ ಹಲವು ರೈತ ಸಂಘಟನೆಗಳು ಒತ್ತಾಯಿಸಿವೆ, ಹಣಕಾಸು ಸಂಸ್ಥೆಗಳಿಂದ ಪಡೆದ ಬೆಳೆ ಸಾಲ ಮಾತ್ರವಲ್ಲದೇ ಲೇವಾದೇವಿ ಗಾರರಿಂದ ಪಡೆದ ಸಾಲವನ್ನು ಮನ್ನಾ ಮಾಡುವಂತೆ  ಪ್ರಾಂತ್ಯ ರೈತ ಸಂಘ ಕಾರ್ಯದರ್ಶಿ ಬೈರಾ ರೆಡ್ಡಿ ಒತ್ತಾಯಿಸಿದ್ದಾರೆ.
ಲೇವಾದೇವಿ ವ್ಯವಹಾರಸ್ಥರಿಂದ ಪಡೆದ ಸಾಲವನ್ನು ಕೇರಳ ಸರ್ಕಾರ ಮನ್ನಾ ಮಾಡಿದೆ,  ಸರ್ಕಾರ ಕೇವಲ ಸಾಲಮನ್ನಾ ಮಾಡಿದರೇ ಸಾಲದು, ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಳೆ ಒದಗಿಸಬೇಕು, ವೈಜ್ಞಾನಿಕ ಬೆಲೆ, ನೀರಾವರಿ ಸೌಲಭ್, ಗ್ರಾಮೀಣ ಸಮಸ್ಯೆಗಳ ಬಗ್ಗೆಗಮನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸಾಲಮನ್ನಾ ಎಲ್ಲಾ ರೀತಿಯ ರೈತರಿಗೂ ಅನ್ವಯಿಸಬೇಕು, ಸಾಂಪ್ರಾದಾಯಿಕ ಹಾಗೂ ವಾಣಿಜ್ಯ ಬೆಳೆಗಳಿಗೂ ನೀಡಬೇಕು. ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಸೂಕ್ತ ಸಮಯದಲ್ಲಿ ಹಣ ಪಾವತಿಸದಿದ್ದರೇ ರೈತರು ಹೇಗೆ ಸಾಲ ಕಟ್ಟುತ್ತಾರೆ ಎಂದು  ಬೆಳಗಾವಿ ಜಿಲ್ಲೆ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಈರಪ್ಪ ಪ್ರಶ್ನಿಸಿದ್ದಾರೆ,
ನಾನು 1 ಲಕ್ಷ ಬ್ಯಾಂಕ್ ನಿಂದ ಸಾಲ ಪಡೆದಿದ್ದಾನೆ, ಬ್ಯಾಂಕ್ ನವರು ನೋಟಿಸ್ ಮೇಲೆ ನೊಟೀಸ್  ನೀಡಪುತ್ತಿದ್ದಾರೆ. ಹೀಗಾಗಿ ನಾನು ಕುಮಾರ ಸ್ವಾಮಿ ಅವರ ಬಜೆಟ್ ನಿರೀಕ್ಷಿಸುತ್ತಿದ್ದೇನೆ ಎಂದು ಎಂದು ರೈತ ಶಿವಮೂರ್ತಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com