ಕರ್ನಾಟಕ ಬಜೆಟ್ 2018: ಮೈಸೂರಿಗೆ ಗರಿಷ್ಠ, ಚಾಮರಾಜನಗರಕ್ಕೆ ಕನಿಷ್ಠ ಅಭಿವೃದ್ದಿ ಯೋಜನೆ ಭಾಗ್ಯ

ಗುರುವಾರ ಮಂಡನೆಯಾದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ನಲ್ಲಿ ಮೈಸೂರು ಭಾಗಕ್ಕೆ ಸಾಕಷ್ಟು ಯೊಜನೆಗಳು ಲಭಿಸಿದೆ. ಇದೇ ವೇಳೆ ನೆರೆ ಜಿಲ್ಲೆ ಚಾಮರಾಜನಗರಕ್ಕೆ....
ಕರ್ನಾಟಕ ಬಜೆಟ್ 2018: ಮೈಸೂರಿಗೆ ಗರಿಷ್ಠ, ಚಾಮರಾಜನಗರಕ್ಕೆ ಕನಿಷ್ಠ ಅಭಿವೃದ್ದಿ ಯೋಜನೆ ಭಾಗ್ಯ
ಕರ್ನಾಟಕ ಬಜೆಟ್ 2018: ಮೈಸೂರಿಗೆ ಗರಿಷ್ಠ, ಚಾಮರಾಜನಗರಕ್ಕೆ ಕನಿಷ್ಠ ಅಭಿವೃದ್ದಿ ಯೋಜನೆ ಭಾಗ್ಯ
ಮೈಸೂರು: ಗುರುವಾರ ಮಂಡನೆಯಾದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ನಲ್ಲಿ ಮೈಸೂರು ಭಾಗಕ್ಕೆ ಸಾಕಷ್ಟು ಯೊಜನೆಗಳು ಲಭಿಸಿದೆ. ಇದೇ ವೇಳೆ ನೆರೆ ಜಿಲ್ಲೆ ಚಾಮರಾಜನಗರಕ್ಕೆ ಆರೋಗ್ಯ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳಷ್ಟೇ ದೊರಕ್ಲಿದ್ದು ಈ ಹಿಂದಿನ ಸರ್ಕಾರಗಲಂತೆಯೇ ನೂತನ ಸರ್ಕಾರ ಸಹ ಜಿಲ್ಲೆ ಅಭಿವೃದ್ದಿಯನ್ನು ಕಡೆಗಣಿಸಿದೆ.
ಮೈಸೂರಿನಲ್ಲಿ ರೇಷ್ಮೆ  ಹಾಗೂ ಕೊಕೇನ್ ಮಾರುಕಟ್ಟೆ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದ್ದು ಇದಕ್ಕಾಗಿ  ಒಂದು ಕೋಟಿ ರೂ. ಮೀಸಲಿರಿಸಲಾಗಿದೆ. ಧಾರವಾಡ, ಕಲಬುರ್ಗಿ ಜತೆಗೆ  ಮೈಸೂರಿನಲ್ಲಿ ವೀರ್ಯ ನಳಿಕೆ ವಿತರಣೆ ಕೇಂದ್ರ ಸ್ಥಾಪನೆ, ಬೆಳಗಾವಿ ಹಾಗು ಕಲಬುರ್ಗಿ ಜತೆಗೆ  ಮೈಸೂರಿನಲ್ಲಿ ) 2.25 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಪ್ರಸ್ತಾಪವನ್ನು ಈ ಬಜೆಟ್ ನಲ್ಲಿ ಸೇರಿಸಲಾಗಿದೆ.
ಮೈಸೂರು ಉಂಡವಾಡಿ ಸಮೀಪ ಕಾವೇರಿ ಹೆಚ್ಚುವರಿ ನೀರಿನ ಘಟಕ ಸ್ಥಾಪನೆಗಾಗಿ 50 ಕೋಟಿ ರು. ಮೀಸಲು.
ಹಾಸನ, ಕೊಪ್ಪಳ, ಗದಗ ಜತೆಗೆ ಚಾಮರಾಜನಗರದಲ್ಲಿ 450 ಹಾಸಿಗೆಗಳುಳ್ಳ ವೈದ್ಯಕೀಯ ಕಾಲೇಜು ಹಾಗು ಆಸ್ಪತ್ರೆ ಸ್ಥಾಪನೆಗಾಗಿ ಈ ಬಜೆಟ್ ನಲ್ಲಿ 200 ಕೋಟಿ ರು. ಇರಿಸಲಾಗಿದೆ.
ಇದಲ್ಲದೆ ಮೈಸೂರಿನಲ್ಲಿ ಐಸಿಬಿ ಚಿಪ್ಸ್ ಮತ್ತು ಬೋರ್ಡ್ ಉತ್ಪಾದನೆ ಘಟಕ ಸ್ಥಾಪನೆಗೆ ಬಜೆಟ್ ಪ್ರಸ್ತಾಪ ಮಾಡಿದೆ. ಚಾಮರಾಜನಗರದ ಭರಚುಕ್ಕಿ ಗಗನಚುಕ್ಕಿ ಜಲಪಾತ ಅಭಿವೃದ್ದಿ ಪ್ರಸ್ತಾಪವನ್ನು ಸಹ ಕುಮಾರಸ್ವಾಮಿ ಅವರ ಬಜೆಟ್ ಒಳಗೊಂಡಿದೆ. ಇದಕ್ಕಾಗಿ 5 ಕೋಟಿ ಮೀಸಲು ಇರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com