• Tag results for ಚಾಮರಾಜನಗರ

ತೆರಕಣಾಂಬಿ, ಹನೂರು ಕಾಲೇಜುಗಳ ಮುಂದುವರಿಕೆಗೆ ಕಾಲೇಜು ಶಿಕ್ಷಣ ಇಲಾಖೆ ಆದೇಶ

ಹನೂರು ತಾಲೂಕಿನ ಹನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ರವರ ಕೋರಿಕೆಯಂತೆ ಅದೇ ಸ್ಥಳಗಳಲ್ಲಿ ಮುಂದುವರೆಸಲಾಗಿದೆ. 

published on : 24th September 2020

ಕುಡಿದ ಅಮಲಿನಲ್ಲಿ ನೇಣಿಗೆ ಶರಣಾದ ಯುವಕ  

ಅತಿಯಾಗಿ ಮದ್ಯದ ಚಟಕ್ಕೆ ದಾಸನಾಗಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಕೊಳ್ಳೇಗಾಲ ಪಟ್ಟಣದಲ್ಲಿ ನಡೆದಿದೆ.

published on : 23rd September 2020

ವಿದ್ಯುತ್ ಸ್ಪರ್ಶದಿಂದ ಹಸು ಮೇಯಿಸುತ್ತಿದ್ದ ವೃದ್ಧ ಸಾವು

ವಿದ್ಯುತ್ ಪ್ರವಹಿಸಿ ಹಸು ಮೇಯಿಸುತ್ತಿದ್ದ ವೃದ್ಧನೋರ್ವ ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಗುಂಡೇಗಾಲ ಗ್ರಾಮದಲ್ಲಿ ನಡೆದಿದೆ.

published on : 21st September 2020

ಗಾಯಗೊಂಡಿದ್ದ ಮರಿಯಾನೆ ಮೇಲೆ ದಾಳಿ ಮಾಡಿ ಕೊಂದ ಹುಲಿ; ಬಂಡೀಪುರ ಅರಣ್ಯದಲ್ಲಿ ಘಟನೆ

ಗಾಯಗೊಂಡಿದ್ದ ಮರಿಯಾನೆಯನ್ನು ಹುಲಿಯೊಂದು ಬೇಟೆಯಾಡಿ ತಿಂದಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.

published on : 19th September 2020

ಚಾಮರಾಜನಗರ: ಬೈಕ್ ಗೆ ಜಿಂಕೆ ಢಿಕ್ಕಿ, ಜಿಂಕೆ ಸಾವು, ಸವಾರನಿಗೆ ಗಂಭೀರ ಗಾಯ

ಜಿಂಕೆಗೆ ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಜಿಂಕೆ ಮೃತಪಟ್ಟಿದ್ದು, ಸವಾರನ ಸ್ಥಿತಿ ಗಂಭೀರವಾಗಿರುವ ಘಟನೆ ಚಾಮರಾಜನಗರದ ಉಡಿಗಾಲ ಗ್ರಾಮದ ಸಮೀಪ ನಡೆದಿದೆ.

published on : 19th September 2020

ಸಹಕಾರ ಸಂಘದ ಮೊದಲ ತೆಂಗು ಸಂಸ್ಕರಣಾ ಘಟಕ ಲೋಕಾರ್ಪಣೆ

ಸಹಕಾರ ಸಂಘ ಸ್ಥಾಪಿಸಿರುವ ರಾಜ್ಯದ ಮೊದಲ ತೆಂಗು ಸಂಸ್ಕರಣಾ ಘಟಕ ಶುಕ್ರವಾರ ಚಾಮರಾಜನಗರ ತಾಲೂಕಿನ ಮುನಚನಹಳ್ಳಿಯಲ್ಲಿ ಲೋಕಾರ್ಪಣೆಗೊಂಡಿತು.

published on : 18th September 2020

ಕಾರಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ವರ ಬಂಧನ; 2 ಕೆಜಿ ಮಾದಕ ಗಾಂಜಾ ವಶ!

ಕಾರಲ್ಲಿ ಮೈಸೂರಿಗೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಚಾಮರಾಜನಗರ ಹೊರವಲಯದ ದೊಡ್ಡರಾಯಪೇಟೆ ಗೇಟ್ ಬಳಿ ಪೊಲೀಸರು ಬಂಧಿಸಿದ್ದಾರೆ.

published on : 13th September 2020

ಚಾಮರಾಜನಗರದ ಹಂಗಳ ಗ್ರಾಮದಲ್ಲಿ ವ್ಯಕ್ತಿ ಸಾವು: ಕೊಲೆ ಶಂಕೆ, ಪ್ರಕರಣ ದಾಖಲು

ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ವೈನ್ ಸ್ಟೋರ್​ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಕುಟುಂಬಸ್ಥರು ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

published on : 12th September 2020

ಹುಲಿ ಉಗುರು ಮಾರಾಟ ಯತ್ನ: ಇಬ್ಬರು ಆರೋಪಿಗಳ ಬಂಧನ

ಅಕ್ರಮವಾಗಿ ಹುಲಿ ಉಗುರು ದಾಸ್ತಾನು ಮಾಡಿಕೊಂಡಿದ್ದೂ ಅಲ್ಲದೆ ಅದನ್ನು ಮಾರಾಟಕ್ಕೆ ಯತ್ನಿಸಿದ್ದ ಆರೋಪಿಗಳಿಬ್ಬರನ್ನು ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

published on : 12th September 2020

ಕೊರೊನಾ ಸೋಂಕು ಗೆದ್ದು ಪ್ಲಾಸ್ಮಾ ದಾನಕ್ಕೆ ಮುಂದಾದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್

ಕೊರೊನಾ ಮಹಾಮಾರಿಯಿಂದ ಚಾಮರಾಜನಗರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಸಂಪೂರ್ಣ ಗುಣಮುಖರಾಗಿ ಈಗ ಪ್ಲಾಸ್ಮಾ ದಾನಕ್ಕೆ ಮುಂದಾಗಿದ್ದಾರೆ.

published on : 11th September 2020

ಚಾಮರಾಜನಗರ: ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ

ಸಾಲಬಾಧೆ ತಾಳಲಾರದೇ ರೈತನೋರ್ವ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಆಲೂರಿನಲ್ಲಿ ನಡೆದಿದೆ.

published on : 10th September 2020

ಕೊರೊನಾ ಆರ್ಭಟಕ್ಕೆ ಪೊಲೀಸ್ ಪೇದೆ ಬಲಿ

ಕೊರೊನ ಆರ್ಭಟಕ್ಕೆ ಸಿಲುಕಿ ಮತ್ತೊಬ್ಬ ಪೊಲೀ ಸ್ ಪೇದೆ ಮೃತಪಟ್ಟಿದ್ದಾರೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಎನ್.ಸುರೇಶ್(46) ಕೊರೊನಾಗೆ ಬಲಿಯಾದವರು.

published on : 31st August 2020

ಕೋವಿಡ್‌ನಿಂದ ಗುಣಮುಖರಾದ ಮಾಜಿ ಕೇಂದ್ರ ಸಚಿವ ಶ್ರೀನಿವಾಸ್‌ ಪ್ರಸಾದ್‌; ಆಸ್ಪತ್ರೆಯಿಂದ ಡಿಸ್ಚಾರ್ಜ್

ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಕೋವಿಡ್ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದು, ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

published on : 28th August 2020

ನಕ್ಷತ್ರ ಆಮೆ ಮಾರಾಟ ಯತ್ನ: ಐವರ ಬಂಧನ, ಓರ್ವ ಪರಾರಿ

ನಕ್ಷತ್ರ ಆಮೆ ಮಾರಾಟಕ್ಕೆ ಯತ್ನಿಸಿದ ಜಾಲವೊಂದನ್ನು ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ. 

published on : 27th August 2020

ಚಾಮರಾಜನಗರ:  ಸ್ಮಾರ್ಟ್‌ಫೋನ್ ಕೊಡಿಸದ್ದಕ್ಕೆ ಕೀಟನಾಶಕ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸ್ಮಾರ್ಟ್‌ಫೋನ್ ಖರೀದಿಸಲು ಸಾಧ್ಯವಾಗದೆ ಮನನೊಂದ 15 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆ ಸಾಗಡೆ ಎಂಬಲ್ಲಿ ನಡೆದಿದೆ. 

published on : 19th August 2020
1 2 3 4 5 6 >