ವಿಶೇಷಚೇತನರಿಗೆ ಸೂಕ್ತ ಅನುದಾನ, ಸೌಲಭ್ಯ ಬಜೆಟ್ ನಲ್ಲಿ ಸಿಕ್ಕಿಲ್ಲ: ವಿಕಲಾಂಗರ ಅಸಮಾಧಾನ

ವಿಶೇಷಚೇತನರಿಗೆ ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳು ಮತ್ತು ಸಾಲಮನ್ನಾ ಕಡಿಮೆಯಾಗಿದ್ದು ...
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ
Updated on

ಬೆಂಗಳೂರು: ವಿಶೇಷಚೇತನರಿಗೆ ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳು ಮತ್ತು ಸಾಲಮನ್ನಾ ಕಡಿಮೆಯಾಗಿದ್ದು ಮಾತ್ರವಲ್ಲದೆ ಅಸಮರ್ಪಕವಾಗಿದೆ ಎಂದು ರಾಜ್ಯ ವಿಶೇಷಚೇತನರು ಮತ್ತು ಆರೈಕೆದಾರರ ಒಕ್ಕೂಟದ ಅಧ್ಯಕ್ಷ ಜಿ ಎನ್ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಶಕ್ತರ ಹಕ್ಕುಗಳ ಕಾಯ್ದೆ 2016ನ್ನು ಜಾರಿಗೆ ತರಲು ಕಾರ್ಯಪಡೆ ರಚನೆಯನ್ನು ಸರ್ಕಾರ ಘೋಷಣೆ ಮಾಡಿಲ್ಲ ಎಂದು ನಾಗರಾಜ್ ಹೇಳಿದ್ದಾರೆ. ಇತ್ತೀಚೆಗೆ ಎಲ್ಲಾ ವಸ್ತುಗಳಿಗೂ ಬೆಲೆ ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿ ವಿಕಲಾಂಗರು ಮತ್ತು ವಿಶೇಷಚೇತನರ ಮಾಸಾಶನವನ್ನು ಕೂಡ ಹೆಚ್ಚಳ ಮಾಡಬೇಕಾಗಿತ್ತು ಎಂದು ಅವರು ಹೇಳಿದರು.

21 ವಿಧದ ಅಶಕ್ತತೆ ಹೊಂದಿರುವವರ ಸಾಮಾಜಿಕ-ಆರ್ಥಿಕ ಸಮೀಕ್ಷೆ, ವಿಶೇಷ ಶಿಕ್ಷಕರಿಗೆ ತರಬೇತಿ ಕೇಂದ್ರ, ವಿಶೇಷಚೇತನರು ವಿದೇಶಗಳಲ್ಲಿ ಅಧ್ಯಯನ ಮಾಡಲು ಆಸಕ್ತಿಯಿದ್ದರೆ ಅವರಿಗೆ ನೆರವು ಮತ್ತು ವಿಶೇಷಚೇತನರಿಗೆ ಚಿಕಿತ್ಸಾ ಕೇಂದ್ರಗಳು ಮತ್ತು ಭಿಕ್ಷುಕರ ಕಾಲೊನಿ ಹತ್ತಿರ 20 ಎಕರೆ ಪ್ರದೇಶದಲ್ಲಿ ಟಚ್ ಸೆನ್ಸಿಟಿವಿಟಿ ಗಾರ್ಡನ್ ಸ್ಥಾಪನೆಯ ಸರ್ಕಾರದ ಘೋಷಣೆಯನ್ನು ನಾಗರಾಜ್ ಸ್ವಾಗತಿಸಿದ್ದಾರೆ.

ರಾಷ್ಟ್ರೀಯ ವಿಕಲಾಂಗ ಹಣಕಾಸು ನಿಗಮದಿಂದ ಪಡೆದುಕೊಂಡ ಸಾಲಮನ್ನಾ ಮಾಡಲು 4 ಕೋಟಿ ರೂಪಾಯಿ ನೀಡುವುದರಿಂದ ಕೆಲವು ವಿಕಲಾಂಗರಿಗೆ ಮಾತ್ರ ಅನುಕೂಲವಾಗುತ್ತದೆಯಷ್ಟೇ ಇದಕ್ಕೆ ಹೆಚ್ಚಿನ ಹಣ ಮೀಸಲಿಡಬೇಕಾಗಿತ್ತು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com