• Tag results for fund

ಬಡವರ ಹಿತ ಕಾಪಾಡುವ ಚಿಟ್ ಫಂಡ್ಸ್ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು

ಚಿಟ್ ಫಂಡ್ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವ ಬಡವರು, ಮತ್ತು ಮಧ್ಯಮ ವರ್ಗದ ಹಿತಾಸಕ್ತಿ ಕಾಪಾಡುವ 2019ರ ಚಿಟ್ ಫಂಡ್ಸ್ (ತಿದ್ದುಪಡಿ) ಮಸೂದೆಯನ್ನು ಲೋಕಸಭೆ ಬುದವಾರ ಧ್ವನಿ ಮತದಿಂದ ಅಂಗೀಕರಿಸಿದೆ.

published on : 20th November 2019

ಬೆಳೆವಿಮೆ ಹಣ ವಿತರಣೆಗಾಗಿ ಪ್ರಧಾನಿಗೆ ಪತ್ರ ಬರೆದ ರೈತ

ಅಡಿಕೆ ಬೆಳೆಗಾರರಿಗೆ ಹವಾಮಾನ ಆಧಾರಿತ ಬೆಳೆವಿಮೆ ಹಣ ವಿತರಣೆಯಾಗಿಲ್ಲ. ಕಡಿಮೆ ಪರಿಹಾರ ಬಂದಿರುವ ರೈತರಿಗೆ ಪೂರ್ಣ ಪ್ರಮಾಣದ ಹಣ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಬೇಕು ಅಂಡಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪ್ರಧಾನಿಗೆ ಪತ್ರ ಬರೆದಿದ್ದಾರೆ.

published on : 10th November 2019

ಅನುದಾನ ಸದ್ಬಳಕೆ ಮಾಡದೆ ನಿರ್ಲಕ್ಷ್ಯ: ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶ್ರೀರಾಮುಲು  

ಆರೋಗ್ಯ ಇಲಾಖೆಯಲ್ಲಿ ಅನುದಾನ ಇದ್ದರೂ ಸದ್ಬಳಕೆ ಮಾಡಿಕೊಂಡು ಬಡವರಿಗೆ ಸೂಕ್ತ ವೈದ್ಯಕೀಯ ಸೇವೆ ನೀಡಲು ನಿರ್ಲಕ್ಷ್ಯವಹಿಸಿದ ಆರೋಗ್ಯಾಧಿಕಾರಿಗಳನ್ನು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. 

published on : 22nd October 2019

ರೋಸ್ ವ್ಯಾಲಿ ಚಿಟ್ ಫಂಡ್ ಹಗರಣ: ಇಡಿಯಿಂದ ಕೆಕೆಆರ್ ಸಿಇಒ ವೆಂಕಿ ಮೈಸೂರು ವಿಚಾರಣೆ

ಐಪಿಎಲ್ ತಂಡವಾದ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಸಿಇಒ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮಾಲೀಕರನ್ನು  ಜಾರಿ ನಿರ್ದೇಶನಾಲಯ ಶುಕ್ರವಾರ ವಿಚಾರಣೆಗೆ ಒಳಪಡಿಸಿದೆ.ಐಪಿಎಲ್ ತಂಡವನ್ನು ಪ್ರಾಯೋಜಿಸಿದ ರೋಸ್ ವ್ಯಾಲಿ ಗ್ರೂಪ್ ಒಳಗೊಂಡ ಮನಿ ಲಾಂಡರಿಂಗ್ ಪ್ರಕರಣದ ಸಂಬಂಧ ಇವರನ್ನು ಪ್ರಶ್ನಿಸಲಾಗಿದೆ.

published on : 19th October 2019

ನೆರೆ-ಬರ ಪರಿಹಾರಕ್ಕೆ ಮತ್ತಷ್ಟು ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ: ಮುಖ್ಯಮಂತ್ರಿ ಬಿಎಸ್ ವೈ

ರಾಜ್ಯದಲ್ಲಿ ನೆರೆ ಹಾಗೂ ಬರಪರಿಹಾರಕ್ಕೆ ಈಗಾಗಲೇ ಕೇಂದ್ರ ಸರ್ಕಾರದಿಂದ ಪರಿಹಾರ ಬಿಡುಗಡೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಪರಿಹಾರ ದೊರಕಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.

published on : 18th October 2019

ಕೇಂದ್ರದಿಂದ ನಯಾಪೈಸೆ ಕೂಡ ಬಂದಿಲ್ಲ, ಈಗ ಬಂದಿರುವುದು ಹಿಂದಿನ ಸರ್ಕಾರದಲ್ಲಾದ ನಷ್ಟಕ್ಕೆ ಪರಿಹಾರ: ಎಚ್ ಡಿ ದೇವೇಗೌಡ

ರಾಜ್ಯದಲ್ಲಿ ಭೀಕರ ಪ್ರವಾಹದಿಂದ ಸುಮಾರು 38000 ಸಾವಿರ ಕೋಟಿ ನಷ್ಟ ಉಂಟಾಗಿದ್ದರೂ ಕೇಂದ್ರ ಸರ್ಕಾರ ಇದುವರೆಗೂ ನಯಾಪೈಸೆ‌ ಕೂಡ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

published on : 8th October 2019

'ಅಧಿಕಾರ ಕಳೆದುಕೊಂಡ ಮೇಲೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಗೆ ಹುಚ್ಚು ಹಿಡಿದಿದೆ'

ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಮೇಲೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ ಕುಮಾರಸ್ವಾಮಿ ಹುಚ್ಚರಾಗುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

published on : 7th October 2019

ಕೊನೆಗೂ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಘೋಷಿಸಿದ ಕೇಂದ್ರ: ವಿವರ ಹೀಗಿದೆ 

ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರ ಗೋಳು ಕೊನೆಗೂ ಕೇಂದ್ರ ಸರ್ಕಾರಕ್ಕೆ ಕೇಳಿಸಿದ್ದು, 60 ದಿನಗಳ ನಂತರ 1,200 ಕೋಟಿ ರೂಪಾಯಿ ಘೋಷಣೆ ಮಾಡಿದೆ. 

published on : 4th October 2019

ನೆರೆ ಪರಿಹಾರ ಬಿಡುಗಡೆಯಲ್ಲಿ ವಿಳಂಬ: ಕ್ಷಮೆಯಾಚಿಸಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು

ಪ್ರವಾಹ ಪರಿಹಾರ ನೀಡುವ ವಿಚಾರದಲ್ಲಿ ವಿಳಂಬವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಗುರುವಾರ ಕ್ಷಮೆಯಾಚಿಸಿದ್ದಾರೆ. 

published on : 4th October 2019

ಅನುದಾನ ಹಂಚಿಕೆಯಲ್ಲಿ ತಾರತಮ್ಯ: ಸಿಎಂ ಭೇಟಿಯಾದ ಕಾಂಗ್ರೆಸ್ ಮುಖಂಡರು

ನಗರಾಭಿವೃದ್ಧಿ ಕಾರ್ಯಗಳ ಅನುದಾನ ಹಂಚಿಕೆಯಲ್ಲಿ ಕಾಂಗ್ರೆಸ್ ಕ್ಷೇತ್ರಗಳಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ. ಈ ತಾರತಮ್ಯವನ್ನು ಬಗೆಹರಿಸಿ ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಕೋರಿ ಕಾಂಗ್ರೆಸ್ ಮುಖಂಡರು ಬುಧವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮನವಿ ಸಲ್ಲಿಸಿದರು. 

published on : 3rd October 2019

ಪ್ರವಾಹ ಪರಿಹಾರ ಕೇಳಲು ಸರ್ವಪಕ್ಷ ನಿಯೋಗ ದೆಹಲಿಗೆ: ವಿಪಕ್ಷಗಳ ವಿರುದ್ಧ ಯಡಿಯೂರಪ್ಪ ಕಿಡಿ

ಪ್ರವಾಹ ಪರಿಹಾರ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಬಳಿ ಮಾತನಾಡಲು ಧೈರ್ಯವಿಲ್ಲ ಎಂದಾದಲ್ಲಿ ಸರ್ವಪಕ್ಷಗಳ ನಿಯೋಗದೊಂದಿಗೆ ತೆರಳಿ ನಾವು ಮಾತನಾಡುತ್ತೇವೆಂದು ಹೇಳಿದ್ದ ವಿರೋಧ ಪಕ್ಷಗಳ ನಾಯಕರ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬುಧವಾರ ತೀವ್ರವಾಗಿ ಕಿಡಿಕಾರಿದ್ದಾರೆ.

published on : 3rd October 2019

ಜೇಬಿನಿಂದ ಪರಿಹಾರ ನೀಡುವುದಕ್ಕೆ ಸಾಧ್ಯವಿಲ್ಲ: ಸಂಸದ ಪ್ರತಾಪ್ ಸಿಂಹ

ಬಿಜೆಪಿಯ 25 ಜನ ಸಂಸದರನ್ನು ಕಾಂಗ್ರೆಸ್ಸಿಗರು ನಿಂದಿಸಿ ಸಾಕಾಗಿದ್ದು ಈಗ ಪ್ರಧಾನಿ ಮೋದಿಯವರನ್ನು ಬೈಯುವುದಕ್ಕೆ ಶುರು ಮಾಡಿದ್ದಾರೆ. ಈ ತರಹದ ಪ್ರಯತ್ನಕ್ಕೆ ಕೈ ಹಾಕದೆ ಇರುವುದು ಒಳ್ಳೆಯದು. ಏಕೆಂದರೆ ಆಕಾಶವನ್ನು ನೋಡಿ ಉಗುಳಿದಂಗೆ ಆಗುತ್ತದೆ...

published on : 2nd October 2019

ನೆರೆ ಹಾನಿಗೊಳಗಾದ ರಸ್ತೆ, ಶಾಲೆಗಳ ದುರಸ್ತಿ ಕಾಮಗಾರಿಗಳಿಗೆ ತುರ್ತಾಗಿ ರೂ.500 ಕೋಟಿ ಬಿಡುಗಡೆ: ಕಂದಾಯ ಸಚಿವ

ನೆರೆ,ಮಳೆಯಿಂದ ಹಾನಿಗೊಳಗಾದ ಆಸ್ತಿಗಳನ್ನು ಪುನರ್ ನಿರ್ಮಾಣ ಮಾಡಲಾಗುತ್ತಿದೆ. ರಸ್ತೆ, ಶಾಲೆ ದುರಸ್ತಿ ಕಾಮಗಾರಿಗಳಿಗಾಗಿ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್ ತಿಳಿಸಿದರು.

published on : 28th September 2019

ಕೊಟ್ಟಿದ್ದನ್ನು ಕಿತ್ತುಕೊಳ್ಳುವುದು ಯಾವ ನ್ಯಾಯ ? ಹೆಚ್.ಡಿ.ಕುಮಾರಸ್ವಾಮಿ

ವಿರೋಧ ಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ಅನುದಾನ ಕಡಿತಗೊಳಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದು, ಕೊಟ್ಟಿದನ್ನು ಕಿತ್ತುಕೊಳ್ಳುವುದು ಯಾವ ರೀತಿಯ ನ್ಯಾಯ? ಎಂದು ಪ್ರಶ್ನಿಸಿದ್ದಾರೆ.

published on : 20th September 2019

ರಾಜೀವ್ ಕುಮಾರ್ ತನಿಖೆಗೆ ಸಹಕರಿಸದಿದ್ದರೆ ಸಿಬಿಐ ಬಂಧಿಸಬಹುದು: ಕೋರ್ಟ್

ಶಾರದಾ ಚಿಟ್ ಫಂಡ್ ಹಗರಣದಲ್ಲಿ ಕೋಲ್ಕತಾ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ತನಿಖೆಗೆ ಸಹಕರಿಸಬೇಕು ಎಂದು ಕೋರ್ಟ್ ಹೇಳಿದೆ.

published on : 20th September 2019
1 2 3 4 >